ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ,ತುಮಕೂರು, ಮೇ 15
ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಕಟ್ಟಡದಲ್ಲಿ ಮೇ 16 ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದ್ದು, ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಭದ್ರತಾ ಕೊಠಡಿಗಳನ್ನು ಚುನಾವಣಾ ವೀಕ್ಷಕರು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆಯಲಾಗುವುದು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 12 ಎಣಿಕೆ ಟೇಬಲ್ಗಳನ್ನು ನಿಗದಿಪಡಿಸಲಾಗಿದ್ದು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ 2 ಕೌಂಟಿಂಗ್ ಹಾಲ್ಗಳಲ್ಲಿ ಉಳಿದ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಿಗೆ ಒಂದೊಂದು ಕೌಂಟಿಂಗ್ ಹಾಲ್ನಲ್ಲಿ ಎಣಿಕೆ ನಡೆಸಲಿದ್ದು, ಒಟ್ಟು 9 ಎಣಿಕೆ ಕೇಂದ್ರಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸತ್ಯಮೂರ್ತಿ ತಿಳಿಸಿದರು. ಅಂಚೆ ಮತಪತ್ರಗಳ ಎಣಿಕೆಯು ಎಸ್ 103 ಕೊಠಡಿಯಲ್ಲಿ ನಡೆಯಲಿದ್ದು, ಮೇ 14 ರವರೆಗೆ 1768 ನೀಡಲಾಗಿದ್ದು, ಇವುಗಳಲ್ಲಿ1084 ಪೋಸ್ಟಲ್ ಬ್ಯಾಲೆಟ್ ಪೇಪರ್ಗಳು ಸ್ವೀಕೃತವಾಗಿದ್ದು, 3 ಟೇಬಲ್ಗಳಲ್ಲಿ ಎಣಿಕೆ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಮತ ಎಣಿಕೆ ಕಾರ್ಯಕ್ಕೆ 115 ಮೇಲ್ವಿಚಾರಕರು, 115ಎಣಿಕೆ ಸಹಾಯಕರು ಮತ್ತು 133 ಮೈಕ್ರೋ ಅಬ್ಸ್ರ್ವರ್ಗಳು, ಪ್ರತಿ ತಾಲೂಕು ಕಚೇರಿಯಿಂದ ತಲಾ 100 ರಂತೆ ಒಟ್ಟು 800 ಅಧಿಕಾರಿ ಸಿಬ್ಬಂದಿ, ಜಿಲ್ಲಾಧಿಕಾರಿ ಕಚೇರಿಯಿಂದ 50 ಅಧಿಕಾರಿ ಸಿಬ್ಬಂದಿ, ಪೋಲಿಸ್ ಇಲಾಖೆಯಿಂದ 450 ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಎಣಿಕೆ ಟೇಬಲ್ಗೆ ಒಬ್ಬರಂತೆ 96 ಟೇಬಲ್ಣಗಳಿಗೆ, ಎಆರ್ಓ ಟೇಬಲ್ಗೆ ಒಬ್ಬರಂತೆ 9, ಅಂಚೆ ಮತಪತ್ರ ಎಣಿಕೆ ಟೇಬಲ್ಗೆ ಒಬ್ಬರಂತೆ, 3 ಟೇಬಲ್ಗಳಿಗೆ ಒಟ್ಟಾರೆ ಒಬ್ಬ ಅಭ್ಯರ್ಥಿ, 108 ಏಜೆಂಟರುಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಈವರೆಗೂ 436 ಏಜೆಂಟರುಗಳಿಗೆ ಪಾಸ್ಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ನೇಮಕ: ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯನ್ನು ಆರಂಭದಿಂದ ಕೊನೆಯವರೆಗೂ ವಿಡಿಯೋಗ್ರಾಫ್ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರು ವಿಡಿಯೋಗ್ರಾಫರ್ಗಳನ್ನು ನೇಮಿಸಲಾಗಿದೆ. ಅಭ್ಯರ್ಥಿ ಮತ್ತು ಏಜೆಂಟರು ಯಾರೂ ಸಹ ಮೊಬೈಲ್ ಪೋನ್, ಕ್ಯಾಮೆರಾ, ಕ್ಯಾಲ್ಕ್ಯುಲೇಟರ್ ಇತ್ಯಾದಿಗಳನ್ನು ತರದಂತೆ ಸೂಚಿಸಲಾಗಿದ್ದು, ಒಳಬರುವ ಎಲ್ಲಾ ಅಧಿಕಾರಿ, ನೌಕರರು, ಏಜೆಂಟರನ್ನು ತಪಾಸಣೆ ನಡೆಸಿ ಒಳಬಿಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಮಣಗುಪ್ತ, ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

