ತುಮಕೂರು

ವಿಶ್ವವೇ ಒಪ್ಪಿದ ಶಂಕರರ ಅದ್ವೈತ ಸಿದ್ಧಾಂತ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಮೇ 15
ಶ್ರೀಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವನ್ನು ಭಾರತವೇ ಅಲ್ಲದೇ ಇಡೀ ಜಗತ್ತು ಒಪ್ಪಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕೆ.ಆರ್. ಬಡಾವಣೆಯ ಶ್ರೀ ರಾಮಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಕರ ಭಗವತ್ಪಾದ ಸಂಸ್ಮರಣಂ ಕಾರ್ಯಕ್ರಮದಲ್ಲಿ ಶ್ರೀ ಶಂಕರಾಚಾರ್ಯರ ಅವತಾರದ ವೈಶಿಷ್ಟ್ಯ, ಜೀವನ ಸಾಧನೆ ಹಾಗೂ ತತ್ವ ಸಿದ್ದಾಂತ ಕುರಿತು ಉಪನ್ಯಾಸ ನೀಡಿದರು.
ಭಾರತೀಯ ರಾಜಕೀಯ ಹಾಗೂ ಸಂವಿಧಾನದ ಮೂಲ ತಳಹದಿಯೂ ಅದೇ ಅಗಿದೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಶ್ರೀಪಾದ ಭಟ್ಟರು ಶ್ರೀಶಂಕರರ ಕೊಡುಗೆ ಕೇವಲ ವೇದವೇದಾಂತಕ್ಕೇ ಅಲ್ಲದೆ ರಾಷ್ಟ್ರನಿರ್ಮಾಣ, ವ್ಯಕ್ತಿನಿರ್ಮಾಣ ಹಾಗೂ ವಿಜ್ಞಾನಕ್ಕೂ ಅಪಾರವಾಗಿದ್ದು ನಮ್ಮ ದೈನಂದಿನ ಬದುಕಿನಲ್ಲೂ ಹೇಗೆ ಆದ್ವೈತ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದೇವೆ ಮತ್ತು ಅಳವಡಿಕೊಳ್ಳಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವಿದ್ವಾಂಸ  ಬಿ.ಎಲ್. ಕೃಷ್ಣಶರ್ಮ ಮಾತನಾಡಿ, ಶ್ರೀಶಂಕರರು ಪ್ರಚುರ ಪಡಿಸಿದ ಅದ್ವೈತ ಸಿದ್ಧಾಂತ ಒಂದು ಸಾವಿರದ ಮುನ್ನೂರು ವರ್ಷಗಳು ಕಳೆದರೂ ಶಾಶ್ವತವಾಗಿ ಪ್ರವಹಿಸುತ್ತಿದ್ದು,ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ತಿಳಿಸಿದರು.
 ಖ್ಯಾತ ಉದ್ಯಮಿ ಎಚ್.ಜಿ. ಚಂದ್ರಶೇಖರ್ ಮತ್ತು ಮದರ್ ಇಂಡಿಯಾದ ಎನ್. ಸತ್ಯನಾರಾಯಣ್ ಹಾಗೂ ಶಂಕರ ತತ್ವ ಪ್ರಸಾರ ಅಭಿಯಾನಂ ಎಂ.ಕೆ. ನಾಗರಾಜರಾವ್ ಉಪಸ್ಥಿತರಿದ್ದರು.
ಈ ಸಾರ್ಥಕ ಕಾರ್ಯಕ್ರಮ ನಡೆಸಿದ ಶ್ರೀಶಂಕರಾದ್ವೈತ ಸೇವಾ ಟ್ರಸ್ಟ್‌ನ ಸಾಧನೆಯನ್ನು ಶ್ಲಾಘಿಸಿದರು.  ನಗರಪಾಲಿಕೆ ಸದಸ್ಯ ಎನ್.ಆರ್. ನಾಗರಾಜರಾವ್, ನಗರಸಭೆ ಮಾಜಿ ಅಧ್ಯಕ್ಷ ಆರ್.ಎನ್. ಸತ್ಯನಾರಾಯಣ್ ಟ್ರಸ್ಟ್‌ನ ಎಲ್ಲಾ ಸದಸ್ಯರು, ಬಡಾವಣೆಯ ಪ್ರಮುಖರಾದ ಅನಂತರಾಮಯ್ಯ, ಎಚ್.ಆರ್. ರಂಗನಾಥ,  ವೆಂಕಟೇಶ್, ಸುನೀಲ್  ಹಾಜರಿದ್ದರು.
ಎಚ್.ಆರ್. ರಂಗನಾಥ ಸ್ವಾಗತಿಸಿ, ಟ್ರಸ್ಟಿ ವೆಂಕಟೇಶ್ ಜೋಯಿಸ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.