ದೇಗುಲ ಮನುಷ್ಯನಿಗೆ ನೆಮ್ಮದಿ ನೀಡುವ ತಾಣ
ಶಿರಾ: ಪ್ರತಿ ಗ್ರಾಮದಲ್ಲಿಯು ಒಂದೊಂದು ದೇವಸ್ಥಾನ ನಿರ್ಮಿಸಿ, ಆರಾಧನೆ ಮಾಡುವುದರಿಂದ ಮನಃಶಾಂತಿ ದೊರೆಯಲಿದ್ದು ಮನುಷ್ಯನ ನೆಮ್ಮದಿ ಜೀವನಕ್ಕೆ ನಾಂದಿಯಾಗಲಿದೆ. ಸಿರಿವಂತಿಕೆ ಆದಿಶಕ್ತಿ ಮುಂದೆ ನಗಾಣ್ಯವಾಗಿದ್ದು ಶ್ರದ್ಧೆ, ಭಕ್ತಿಯಿಂದ ಮಾಡುವ ಸೇವೆ ಇಷ್ಟಾರ್ಥ ನೆರವೇರಿಸುವ ಜೊತೆಗೆ ಜೀವನದಲ್ಲಿ
ಉನ್ನತಿ ಹೊಂದಲು ಸಹಕಾರಿಯಾಗಲಿದೆ ಎಂದು ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು. ಅವರು ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿರುವ ಅಂಭಾದೇವಿ ದೇವಸ್ಥಾನದ ಉತ್ಸವ ಮತ್ತು ನೂತನ ಧ್ವಜಸ್ಥಂಭ ಪ್ರತಿಷ್ಠಾಪನ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶತ, ಶತಮಾನಗಳಿಂದಲು ಆಧಿಶಕ್ತಿಯ ಮೇಲಿನ ನಂಬಿಕೆಯಿಂದಲೇ ದೇಶದಲ್ಲಿ ಭವ್ಯದೇವಸ್ಥಾನಗಳು ನಿರ್ಮಾಣವಾಗಿ ದೇವರು ಮತ್ತು ಮಾನವನ ಬಾಂಧವ್ಯ ಬೆಸೆದು, ಭಕ್ತ ನಂಬಿರುವ ದೈವಬಲ ನಂಬಿಕೆಯಿಂದಲೇ ಮನುಷ್ಯ ಜೀವಿಸುವಂತಾಗಿದ್ದು, ಜನಸಾಮಾನ್ಯರ ಮೇಲಿನ ಕಾಳಜಿ ಹೊಂದಿ ಬಡವ, ನಿರ್ಗತಿಕ, ಅಬಲೆಯರಿಗೆ ನಿಸ್ವಾರ್ಥ ಸೇವೆ ಮಾಡಿದರೆ, ಮನುಷ್ಯ ಜನ್ಮ ಸಾರ್ಥಕತೆ ಪಡೆಯಲಿದ್ದು ದೈವಕೃಪೆ ನಿಮಗೆ ದೊರೆಯಲಿದೆ ಎಂದರು.
ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಹೊಸಹಳ್ಳಿ, ನೇರಲಹಳ್ಳಿ, ಪಟ್ಟನಾಯಕನಹಳ್ಳಿಯ ನೂರಾರು ಭಕ್ತರು ಶ್ರೀಅಂಭಾದೇವಿಗೆ ಆರತಿ ಮಾಡಿ ಇಷ್ಟಾರ್ಥ ಹಾಗೂ ಉತ್ತಮ ಮಳೆ, ಬೆಳೆ ನೀಡುವಂತೆ ದೇವಿಗೆ ಪ್ರಾರ್ಥಿಸಿದರು. ಧ್ವಜಸ್ಥಂಭ ದಾನಿಗಳಾದ ಮಂಜುನಾಥ ಗುಪ್ತ, ನರೇಂದ್ರ ಗುಪ್ತ, ಮುಖಂಡರಾದ ಶಶಿಧರ, ಕೈವಲ್ಯಾನಂದ ಸ್ವಾಮಿ, ರಂಗಸ್ವಾಮಿ, ಸಿದ್ದಲಿಂಗಪ್ಪ ಸೇರಿದಂತೆ ಹಲವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

