ತುಮಕೂರು

ಸೂರ್ಯಂಗೇ ಟಾರ್ಚ್ ಹಾಕುತ್ತಿರುವ ನಗರಸಭೆ

Published On :

ಕ.ಪ್ರ.ವಾರ್ತೆ ್ಣ ತಿಪಟೂರು ್ಣ ಮೇ 21
ಪಟ್ಟಣದಲ್ಲಿ ಬೆಳಿಗ್ಗೆ 8ಗಂಟೆಯಾದರೂ ಬೀದಿ ದೀಪಗಳು ಮಾತ್ರ ಉರಿಯುತ್ತಲೇ ಇರುತ್ತವೆ.
ಪಟ್ಟಣದ ಪ್ರಮುಖ ಸ್ಥಳ ಮತ್ತು ಬೀದಿಗಳಲ್ಲಿ ರಾತ್ರಿಯಲ್ಲೇ ಬೀದಿ ದೀಪಗಳು ಉರಿಯದಿದ್ದರೂ, ಹಗಲು ವೇಳೆಯಲ್ಲಿ ಮಾತ್ರ ಬಿ.ಹೆಚ್.ರಸ್ತೆ, ಹಾಲ್ಕುರಿಕೆ ರಸ್ತೆ, ಕೆ.ಆರ್.ಬಡಾವಣೆ ಸೇರಿದಂತೆ ಹಲವೆಡೆ ಬೀದಿದೀಪಗಳು ಪ್ರಜ್ವಲಿಸುವ ಸೂರ್ಯನ ಕಿರಣಗಳ ನಡುವೆ ಮಂಕಾದಂತೆ ಉರಿಯುತ್ತಲೇ ಇರುತ್ತವೆ.  ನಗರಸಭೆ ಸೂರ್ಯನಿಗೇ ಟಾರ್ಚ್ ಹಾಕುವಂತೆ ಹಗಲು ವೇಳೆಯಲ್ಲೂ ಅತ್ಯಮೂಲ್ಯವಾದ ವಿದ್ಯುತ್ ಅನ್ನು ಮಾತ್ರ ಪೋಲು ಮಾಡುತ್ತಿರುವುದೇಕೆ ಎಂದು ನೋಡಿದರೆ ಮತ್ತದೇ ಸೋಮಾರಿತನದ ಜೊತೆ ಬೇಜವಾಬ್ದಾರಿತನಕ್ಕೀಡಾಗಿರುವ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ.
ಹಗಲು ವೇಳೆ ಬೀದಿ ದೀಪ ಉರಿಯುವ ಬಗ್ಗೆ ಕಳೆದ ವಾರ ನಡೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ಹಲವಾರು ಸದಸ್ಯರು ಪ್ರಸ್ತಾಪಿಸಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.  ಸ್ವಲ್ಪ ಸುಧಾರಣೆಯಾಗಬಹುದೆಂದ ನಿರೀಕ್ಷಿಸಿದವರಿಗೆ  ನಿರಾಸೆ ಎದ್ದು ಕಾಣುತ್ತಿತ್ತು. ಬೀದಿ ದೀಪಗಳು ಬೆಳಿಗ್ಗೆ 10ಗಂಟೆಯಾದರೂ ಉರಿಯುತ್ತಿರುವುದನ್ನು ಗಮನಿಸುತ್ತಿರುವ ಸಾರ್ವಜನಿಕರು ನಗರಸಭಾ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದನ್ನು ಹಾದಿಬೀದಿಯಲ್ಲಿ ಕಾಣಬಹುದಾಗಿದೆ.
ಇನ್ನು ಮುಂದಾದರೂ ನಗರಸಭಾ ಅಧಕಾರಿಗಳು ಬೆಳಿಗ್ಗೆ 6ಗಂಟೆಗಾದರೂ ಪಟ್ಟಣದ ಎಲ್ಲಾ ಬೀದಿದೀಪಗಳನ್ನು ಆರಿಸುವ ಮೂಲಕ ಅತ್ಯಮೂಲ್ಯ ವಿದ್ಯುತ್ ಉಳಿಸುವ ಮತ್ತು ನಗರಸಭಾ ಮರ್ಯಾದೆ ಕಾಪಾಡುವ ಕೆಲಸಕ್ಕೆ ಇಂದಿನಿಂದಲೇ ಮುಂದಾಗಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.