ತುಮಕೂರು

ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ: ಆಕ್ರೋಶ

Published On :

ಕುಣಿಗಲ್: ತಾಲೂಕಿನ ಕಾರ್ಮಿಕ ಇಲಾಖಾಧಿಕಾರಿಗಳು ಕೆಲವೆ ಮಂದಿ ದಲ್ಲಾಳಿಗಳ ಮಾತನ್ನು ಕೇಳಿಕೊಂಡು ಅಮಾಯಕ ಬೀದಿಬದಿ ಅಂಗಡಿಯವರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ ಪುರಸಭೆ ಸದಸ್ಯರು, ಕರವೇ ಪದಾಧಿಕಾರಿಗಳು ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
  ಕಳೆದ ಕೆಲದಿನಗಳ ಹಿಂದೆ ಪಟ್ಟಣದ ವಿವಿಧೆಡೆಯಲ್ಲಿ ಕಾರ್ಮಿಕ ನಿರೀಕ್ಷಕರು ಸೇರದಂತೆ ಇಲಾಖಾಧಿಕಾರಿಗಳು ಆಯ ್ದಕೆಲವೆಡೆ ದಾಳಿಮಾಡಿ, ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಮೆಕಾನಿಕ್ ಷಾಪ್ ಮಾಲೀಕರಿಗೆ ಬಾಲಕಾರ್ಮಿಕ ಪದ್ಧತಿ ಹೆಸರಲ್ಲಿ ಕಿರುಕುಳ ನೀಡಿದ್ದು, ಈ ಪೈಕಿ ಮದ್ದೂರು ರಸ್ತೆಯ ವಿಕಲಾಂಗ ಪಾಶ ಎಂಬಾತ ಒಂದು ಕಾಲಿಲ್ಲದಿದ್ದರೂ ಜೀವನ ನಿರ್ವಹಣೆಗೆ ಕಳೆದ ಹಲವಾರು ವರ್ಷಗಳಿಂದಲೂ ಸ್ಕೂಟರ್ ಮೆಕಾನಿಕ್ ಕೆಲಸಮಾಡುತ್ತಿದ್ದ.ಶಾಲೆಗೆ ರಜೆಇರುವ ಕಾರಣ ಆತನ ಅಕ್ಕನಮಗ 15ವರ್ಷದ ಯೂಸೂಫ್ ಎಂಬಾತ ಅಂಗಡಿಯಲ್ಲಿ ಕುಳಿತಿದ್ದ ವೇಳೆ, ಕೆಲ ವ್ಯಕ್ತಿಗಳ ಮಾತು ಕೇಳಿ ಕಾರ್ಮಿಕ ಇಲಾಖಾಧಿಕಾರಿಗಳು ದಾಳಿ ಮಾಡಿ, ನೋಟಿಸ್ ನೀಡಿ ಆತನನ್ನು ವಿನಾಕಾರಣ ಕಚೇರಿಗೆ ಅಲೆಯುವಂತ ಮಾಡಿದ್ದರೆನ್ನಲಾಗಿದೆ.
ಇದರಿಂದ ಬೇಸತ್ತ ಆತ, ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿರುವ ಬಗ್ಗೆ ಪುರಸಭೆ ಸದಸ್ಯ ರಂಗಸ್ವಾಮಿ, ಸಮೀವುಲ್ಲಾ ಮತ್ತು ಕರವೇ ಅಧ್ಯಕ್ಷ ಮಂಜುನಾಥ್ ಅವರಿಗೆ ದೂರು ನೀಡಿದ ಮೇರೆಗೆ, ಬುಧವಾರ ಕಚೇರಿಗೆ ತೆರಳಿದ ಸದಸ್ಯರು, ಕರವೇ ಪದಾಧಿಕಾರಿಗಳು, ಕಾರ್ಮಿಕ ನಿರೀಕ್ಷಕರ ಧೋರಣೆ ಖಂಡಿಸಿದರಲ್ಲದೆ, ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ,  ವಿನಾಕಾರಣ ಅಮಾಯಕರನ್ನು ಗುರಿಮಾಡಿ ಶೋಷಣೆ ಮಾಡುತ್ತಿರುವುದು ಖಂಡನೀಯ ಎಂದರು.
ಕಾರ್ಮಿಕ ನಿರೀಕ್ಷಕ ರಾಜಶೇಖರ್, ತಾತ್ಸರದ ಉತ್ತರ ನೀಡಿದ್ದು ಪುರಸಭೆ ಸದಸ್ಯರು, ಕರವೇ ಪದಾದಿಕಾರಿಗಳನ್ನು ಕೆರಳಿಸಿತು, ಸದಸ್ಯ ರಂಗಸ್ವಾಮಿ, ಬಹುತೇಕ ದೊಡ್ಡಕಾರ್ಖಾನೆಗಳಲ್ಲಿ ಕಾರ್ಮಿಕರ ಸವಲತ್ತು ನೀಡದೆ ವಂಚಿಸುತ್ತಿದ್ದಾರೆ ಅವನ್ನು ಪರಿಶೀಲಿಸುತ್ತಿಲ್ಲ. ಶಾಲೆಗೆ ರಜೆ ಇರುವ ವೇಳೆ ಮಕ್ಕಳು ತಮ್ಮ ಸಂಬಂಧಿಕರ ಮಳಿಗೆಗೆ ಬಂದಾಗ ಅದನ್ನೆ ದೊಡ್ಡದು ಮಾಡಿ ಇಲಾಖೆಗೆ ಲೆಕ್ಕತೋರಿಸಲು ಅಮಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ಖಂಡನೀಯ ಎಂದು ತರಾಟೆಗೆ ತೆಗೆದುಕೊಂಡರು.
ಕಾರ್ಮಿಕ ನಿರೀಕ್ಷಕರು ಮೇಲಾಧಿಕಾರಿಗಳ ಗಮನಕ್ಕೆ ಇಂತಹ ಘಟನೆಗಳು ನಡೆಯದಂತೆ ಕ್ರಮವಹಿಸುವ ಭರವಸೆ ನೀಡಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು. ಪುರಸಭೆಸದಸ್ಯ ಸಮೀವುಲ್ಲಾ, ಕರವೇ ಪದಾದಿಕಾರಿಗಳಾದ ಮಾರುತಿ, ಶ್ಯಾಮ,ಸುನಿಲ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.