ತುಮಕೂರು

ಸ್ತ್ರೀಶಕ್ತಿ ಸಂಘಗಳು ಬಲಿಷ್ಠವಾಗಲಿ

Published On :

 ಕ.ಪ್ರ.ವಾರ್ತೆ ಕುಣಿಗಲ್  ಮೇ 24
ಸ್ತ್ರೀಶಕ್ತಿ ಸಂಘಗಳು ಯಾವ ಸದುದ್ದೇಶಕ್ಕೆ ಪ್ರಾರಂಭವಾಗುತ್ತವೆಯೋ ಅದೇ ಉದ್ದೇಶದಿಂದ ಮುಂದುವರೆದು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಬಲರಾಗಬೇಕೆ ಹೊರತು ಕ್ಷುಲಕ ಕಾರಣಕ್ಕೆ ಸಂಘಗಳು ಅವನತಿಯತ್ತ ಸಾಗಬಾರದೆಂದು ಶಾಸಕ ಡಿ. ನಾಗರಾಜಯ್ಯ ತಿಳಿಸಿದರು.
ಶನಿವಾರ,ತಾಲೂಕಿನ ಹುಲಿಯೂರುದುರ್ಗದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯಡಿಯಲ್ಲಿ ಒಟ್ಟಾರೆ 25ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿನ ಸ್ತ್ರಿಶಕ್ತಿಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಕೇಂದ್ರ  ಮತ್ತು ರಾಜ್ಯ ಸರ್ಕಾರಗಳು ಅಸಂಖ್ಯಾತ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿನ ಮಹಿಳೆಯರು ಸ್ತ್ರೀಶಕ್ತಿ ಸಂಘಗಳನ್ನು ಉತ್ತಮ ಧ್ಯೇಯೋದ್ದೇಶಗಳಿಗೆ ರಚಿಸಿಗೊಂಡು ತಾವು ಅಭಿವೃದ್ಧ್ದಿಗೊಂಡು, ಸಂಘಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಸರ್ಕಾರದ ಅನುದಾನವನ್ನು ಸದ್ಬಳಕೆಮಾಡಿಕೊಳ್ಳಬೇಕಿದೆ.
  ಶಾಸಕರು ಹುಲಿಯೂರುದುರ್ಗದ ಗ್ರಾಪಂ ಕಾರ್ಯಾಲಯದಲ್ಲಿ ಪಕ್ಕದಲ್ಲಿ 10 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ತ್ರೀಶಕ್ತಿ ಭವನ ಉದ್ಘಾಟಿಸಿದ್ದು, ಇದೇ ಭವನದ ಮೇಲ್ಭಾದಲ್ಲಿ ಮತ್ತೊಂದು ಅಂತಸ್ತು ಭವನ ನಿರ್ಮಿಸಲು ಎಂಟು ಲಕ್ಷ ರು, ವೆಚ್ಚದಲ್ಲಿ ಶಂಕುಸ್ಥಾಪನೆ, ಹಳೇಪೇಟೆಯಲ್ಲಿ 4ಲಕ್ಷ ರು.ವೆಚ್ಚದಲ್ಲಿ ತಾಪಂ ಸದಸ್ಯೆ ಉಮಾ ವೆಂಕಟೇಶ್ ಅನುದಾನದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ಉದ್ಘಾಟನೆ, ಕಂಪ್ಲಾಪುರದಲ್ಲಿ ಅಂಗನವಾಡಿ ಕಟ್ಟಡ ಶಂಕುಸ್ಥಾಪನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷೆ ಹೇಮಾವತಿ, ಸದಸ್ಯರಾದ ಕೃಷ್ಣೇಗೌಡ, ಕೃಷ್ಣ, ಜಿಪಂ ಮಾಜಿ ಸದಸ್ಯ ಅಣ್ಣೇಗೌಡ, ಪ್ರಮುಖರಾದ ಸರೋಜಮ್ಮ, ಕೃಷ್ಣ, ಮಧು, ತಾಪಂ ಇಒ ಶಂಕರಪ್ಪ, ಜಿಪಂ ಎಇಇ ಮರಿಗೌಡ, ಸಿಜಿಪಿಒ ಅಕ್ರಂ ಅಲಿಖಾನ್, ಪಿಡಿಒ ವಿನಾಯಕ್ ಇತರರು ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.