ತುಮಕೂರು

ಗ್ರಾ.ಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ?

Published On :

ಹುಳಿಯಾರು: ಇಲ್ಲಿನ ಗ್ರಾ.ಪಂ ಅಧ್ಯಕ್ಷೆ ಪುಟ್ಟಿಬಾಯಿ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ತಂದಿದ್ದು ಜೂನ್ 4 ರಂದು ಅವಿಶ್ವಾಸ ನಿರ್ಣಯ ಮಂಡನೆಗೆ  ದಿನಾಂಕ ನಿಗದಿಪಡಿಸಲಾಗಿದೆ.
ಆಡಳಿತ ಪಕ್ಷ ಹಾಗೂ ವಿರೋಧಿ ಸದಸ್ಯರನ್ನು  ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಂದಿದ್ದು ಸುಮಾರು 29 ಸದಸ್ಯರು ಉಪವಿಭಾಗಾಧಿಕಾರಿಗಳಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ  ಎರಡನೇ ಅವಧಿಗೆ ಜೆಡಿಎಸ್ ಬೆಂಬಲಿತ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ  ಅವರು  ಹತ್ತು ತಿಂಗಳ ಅಧಿಕಾರದ ಅವಧಿಯ ನಂತರ ಬೇರೊಬ್ಬರಿಗೆ ಅಧಿಕಾರ ವಹಿಸಕೊಡಬೇಕಾಗಿದ್ದು  ಈಗಲೂ ಅಧಿಕಾರ ತ್ಯಜಿಸದೆ  ಅಧ್ಯಕ್ಷೆಯಾಗಿ ಮುಂದುವರೆದಿದ್ದಾರೆ. ಹಾಗಾಗಿ ತಮ್ಮದೇ ಪಕ್ಷದ ಸದಸ್ಯರ ಅಸಮಾಧಾನಕ್ಕೆ ಕಾರಣರಾಗಿ ಇದೀಗ ಅವಿಶ್ವಾಸ ನಿರ್ಣಯ  ಎದುರಿಸುವಂತಾಗಿದೆ.
ಅಧಿಕಾರ ಹಂಚಿಕೆ ನಿರ್ಣಯ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಸಮ್ಮುಖದಲ್ಲೇ ನಡೆದಿದ್ದು, ಅವರ ಹತ್ತು ತಿಂಗಳ ಅವಧಿ ಮುಗಿದ ಮೇಲೆ ಕಾಳಮ್ಮ ಎಂಬುವರಿಗೆ ಬಿಟ್ಟು ಕೊಡಲು ಲಿಖಿತ ಒಪ್ಪಂದವಾಗಿದ್ದು ಇದೀಗ ಮಾತು ತಪ್ಪಿರುವುದರಿಂದ  ಶಾಸಕರು ಅವಿಶ್ವಾಸ ನಿರ್ಣಯಕ್ಕೆ ಕೈಜೋಡಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಪುಟ್ಟಿಬಾಯಿ ಈಗಾಗಲೇ ಬಿಜೆಪಿ ಪಕ್ಷದತ್ತ ವಾಲಿದ್ದು, ಒಟ್ಟು 33 ಸದಸ್ಯರ ಪೈಕಿ ಅವಿಶ್ವಾಸ ನಿರ್ಣಯ ಗೆಲವು ಸಾಧಿಸಲು 22 ಮಂದಿ ಸದಸ್ಯರ ಬಲ ಬೇಕಿದೆ.  7 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಪುಟ್ಟಿಬಾಯಿ ಅವರೊಂದಿಗಿದ್ದಾರೆ ಎನ್ನಲಾಗುತ್ತಿದ್ದು ಅಂದು ನಡೆಯುವ ಅವಿಶ್ವಾಸ ನಿರ್ಣಯ ಕುತೂಹಲ ಮೂಡಿಸಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.