ತುಮಕೂರು

ಜಾಗತೀಕರಣದ ಬಿಸಿ ಸಂಘರ್ಷದ ವಾತಾವರಣ ನಿರ್ಮಾಣ

Published On :

ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮೇ 27
ಜಾಗತೀಕರಣದ ಬಿಸಿ ಏರುತ್ತಿದಂತೆ ಮನುಷ್ಯನ ಬದುಕು ಹಸನಾಗುವ ಬದಲು ತಾರತಮ್ಯಗಳ ಪಿಕಲಾಟದ ಸಂಘರ್ಷದ ವಾತಾವರಣದಲ್ಲಿ ಮುಳುಗುತ್ತಿದೆ. ಇಂದಿಗೂ ನಾವು ಆಯಾ ದಿನದ ದುಡಿಮೆಯಲ್ಲಿ ಬದುಕುವ  ಸ್ಥಿತಿಯಲ್ಲಿದ್ದೇವೆ ಎಂಬುದು ಅತಂಕಕಾರಿಯಾದ ವಿಚಾರ ಎಂದು ಆಲ್ ಇಂಡಿಯಾ ನ್ಯಾಷನಲ್ ಜನರಲ್ ಲೇಬರ್ಸ್ ಟ್ರೇಡ್ ಯೂನಿಯನ್ನ ರಾಜ್ಯಾಧ್ಯಕ್ಷ ಬಿ.ಎ.ಅಹಮದ್ ವಿಷಾದಿಸಿದರು.
ಅವರು ತುಮಕೂರಿನಲ್ಲಿ ನಡೆದ ಮಾಸಿಕ ಸಭೆಯಲ್ಲಿ ಫುಟ್ಪಾತ್ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಫುಟ್ಪಾತ್ ವ್ಯಾಪಾರಿಗಳನ್ನು ಗುರುತಿಸುವ ಹಾಗೂ ಅವರ ಕಲ್ಯಾಣಕ್ಕೆ ಯೋಜನೆ ರೂಪಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದರು. ಇದು ನಮ್ಮ ಎ.ಐ.ಎನ್.ಎಲ್.ಟಿ.ಯು. ಸಂಘಟನೆಯ ದಶಕದ ಹೋರಾಟಕ್ಕೆ  ಸಂದ ಜಯವೆಂದು  ಬಣ್ಣಿಸಿದರು. ನಾವೆಲ್ಲರು ಮಾನವರು ಒಂದಾಗಿ ಬದುಕಿ ಬಾಳಿದರೆ ಸ್ವರ್ಗಮಯ. ನಮ್ಮ ಹಕ್ಕಿಗಾಗಿ ನಮ್ಮಗಳ ನಡುವೆ ನಾವೇ ಹೋರಾಡುತ್ತಾ ಬದುಕಲು ಹಾತೊರಿಯುವುದು ವಿಚಿತ್ರವಾದ ಸಂಗತಿಯಾಗಿದೆ. ಇತ್ತೀಚೆಗೆ ಸಾರ್ವಜನಿಕ ಚರ್ಚೆಯಾಗಿ ಮಾರ್ಪಟ್ಟಿರುವ ಫುಟ್ಪಾತ್ ವ್ಯಾಪಾರಿಗಳು, ಆಟೋ ಚಾಲಕರಿಂದ ತೊಂದರೆಯಾಗುತ್ತಿದೆ ಎಂಬ ಭಾವಕ್ಕೆ ಪ್ರತಿಕ್ರಿಯಿಸಿದ ಅವರು ಬದುಕುವ ಹಂಬಲ ಎಲ್ಲರಿಗೂ ಇರುವಂತೆ ಇವರಿಗೂ ಇರುವುದು ಅಸಹಜವೇನಲ್ಲ  ಅವಕಾಶಗಳು ದೊರಕದೆ ಇರುವುದರಿಂದ ಅವರುಗಳು ಆರಿಸಿಕೊಂಡ ಸರಳ ಕ್ಷೇತ್ರವೇ ಫುಟ್ಪಾತ್ ವ್ಯಾಪಾರ, ಆಟೋ ಚಾಲಕರ ವೃತ್ತಿ ಎಂದರು.
ಜಿಲ್ಲಾಧ್ಯಕ್ಷ ದಾದಾಪೀರ್ ಅವರು ಮಾತನಾಡಿ ಇವರ ಕಲ್ಯಾಣಕ್ಕೆ ಸರ್ಕಾರ ಸ್ಪಂದಿಸುತ್ತಿರುವುದು ನಮಗೆಲ್ಲ ಸಂತಸ ತರುವ ವಿಚಾರ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಅಡಿಯಲ್ಲಿ ಈ ಜನರ ಜೀವನ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿರುವುದು ನಮ್ಮ ಹೋರಾಟಕ್ಕೆ, ಅಭಿಯಾನಕ್ಕೆ ಸಂದ ಗೆಲವು ಎಂದರು. ನಮ್ಮ ಈ ಹೋರಾಟಕ್ಕೆ ಶಾಸಕ ರಫೀಕ್ ಅಹಮದ್ ಅವರು ನೈತಿಕ ಬೆಂಬಲವನ್ನು ನೀಡಿ ಸರ್ಕಾರದ ಗಮನವನ್ನು ಸೆಳೆದು ಈ ವ್ಯಾಪಾರಿಗಳ ಸುಗಮ ಜೀವನಕ್ಕೆ ಸಹಕರಿಸಿದ್ದಾರೆ ಎಂದು ಶ್ಲಾಘಿಸಿದರು. ರಾಜಶೇಖರ್ ಗುರೂಜೀ, ಬಾಬು.ಎ, ಉಪಸ್ಥಿತರಿದ್ದರು.
ಕಾರ್ಮಿಕರಿಗೆ ಕರೆ: ಕಾರ್ಮಿಕರ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕಾರ್ಮಿಕ ಬಂದುಗಳು ಅಂದು ಶಾಂತಿನಗರದ  ಯೂನಿಯನ್ನ ಸಭಾಂಗಣದಲ್ಲಿ ಭಾಗವಹಿಸಿ ಹಕ್ಕು ಮತ್ತು ಕರ್ತವ್ಯಗಳ ಮಹತ್ವಗಳನ್ನು ಅರಿತುಕೊಂಡು ಸಾರ್ಥಕ ಜೀವನಕ್ಕೆ ಮಾದರಿಯಾಗಿರಿ ಎಂದು ಬಿ.ಎ.ಅಹಮದ್ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.