ತುಮಕೂರು

ಒಳ ಚರಂಡಿ ಸಂಪರ್ಕ ಕಾಮಗಾರಿಗೆ ಚಾಲನೆ

Published On :

ತುರುವೇಕೆರೆ: ಪಟ್ಟಣದಲ್ಲಿ ಸುಮಾರು 6.75 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಒಳಚರಂಡಿ ಸಂಪರ್ಕ ಕಾಮಗಾರಿ ಪ್ರಾತ್ಯಕ್ಷಿಕೆಗೆ ಭೂಮಿ ಪೂಜೆ ಮಾಡುವ ಮೂಲಕ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಿದರು.  ಪಟ್ಟಣದಲ್ಲಿ ಸುಮಾರು 1382 ಸಂಗ್ರಹಣಾ ತೊಟ್ಟಿಗಳು ಇದೆ. ಪಟ್ಟಣದ ಪ್ರತಿ ಮನೆಯಿಂದ ಹೊರಬರುವ ಕಷ್ಮಲ ನೀರು ಹಾಗೂ ಶೌಚಾಲಯದ ನೀರನ್ನು ಒಳಚರಂಡಿಗಳ ತೊಟ್ಟಿಗಳಿಗೆ ಬಿಡುವ ಕಾರ್ಯವನ್ನು  ಆದಷ್ಟು ಶೀಘ್ರವೇ ಮುಗಿಸಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿರುವ ಪ್ರತಿ ಮನೆಯಿಂದ ಸಂಗ್ರಹಿಸುವ ಕಲ್ಮಷ ನೀರನ್ನು ಸೆಪ್ಟಿಕ್ ಟ್ಯಾಂಕ್‌ಗೆ ಬಿಡುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಕಡಿಮೆ ವೆಚ್ಚದಲ್ಲಿ ಜನರಿಗೆ ಉತ್ತಮ ಸೇವೆ ನೀಡುವುದಾಗಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷೆ ನೇತ್ರಾವತಿ ರಂಗಸ್ವಾಮಿ ತಿಳಿಸಿದರು. ರಸ್ತೆಯ ಮಧ್ಯೆ ಕಾಮಗಾರಿಯನ್ನು ಆರಂಭಿಸಬೇಕಿರುವುದರಿಂದ ಸಂಬಂಧಿಸಿದ ರಸ್ತೆಯಲ್ಲಿ ಬರುವ ಮನೆಗಳ ಸಂಪರ್ಕವನ್ನು ಇಂತಿಷ್ಟು ದಿನಗಳ ಒಳಗೆ ಅಳವಡಿಸುವ ಕಾಯಕ ಮಾಡಲಾಗುವುದು ಎಂದು ನೇತ್ರಾವತಿ ತಿಳಿಸಿದರು.
ತುಮಕೂರು ನಗರವೊಂದನ್ನು ಬಿಟ್ಟರೆ ತಾಲೂಕಿನಲ್ಲಿ ಒಳಚರಂಡಿ ನಿಗಮದಿಂದ ನಿರ್ಮಿಸಿರುವ ಒಳಚರಂಡಿ ಪ್ರಥಮವಾಗಿದೆ ಎಂದು ಹೇಳಿದ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಕುಮಾರ್ ಸುಗಮವಾಗಿ ಸಂಪರ್ಕ ಕಾಮಗಾರಿ ನಡೆಯಲು ನಾಗರಿಕರ ಸಹಕಾರ ಅಗತ್ಯವಾಗಿದೆ. ನಿರ್ದಿಷ್ಟ ದಿನಗಳ ಒಳಗಾಗಿ ಮನೆಗಳ ಸಂಪರ್ಕವನ್ನು ಪಡೆದುಕೊಳ್ಳುವಂತೆ ವಿನಂತಿಸಿಕೊಂಡರು. ಕನಿಷ್ಠ ತಿಂಗಳ ಶುಲ್ಕ ವಿಧಿಸಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಕಾರ್ಯ ಮಾಡಬೇಕಿದೆ ಎಂದರು.  ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಟಿ.ಎನ್.ಮುದ್ದುರಾಜಣ್ಣ ಮಾತನಾಡಿ ಪಟ್ಟಣದಲ್ಲಿ ಅಳವಡಿಸಲಾಗಿರುವ ಸಂಗ್ರಹಣಾ ತೊಟ್ಟಿಗಳ ಎತ್ತರದಲ್ಲಿ ವ್ಯತ್ಯಾಸವಿದೆ. ಸಂಪರ್ಕ ಏರ್ಪಡಿಸಿದ ನಂತರವೇ ರಸ್ತೆಗಳನ್ನು ದುರಸ್ತಿ ಮಾಡಲು ಸಾಧ್ಯವಾಗಲಿದೆ ಎಂದರು. ಸುಮಾರು 28.32 ಕಿಮೀ ನಷ್ಟು ಉದ್ದದ ಪೈಪ್  ಲೈನ್ ಮಾಡಲಾಗಿದೆ. ಮುಂದಿನ ಮುವತ್ತು ವರ್ಷಗಳ ವರೆಗಿನ ಗುರಿಯನ್ನು ಇಟ್ಟುಕೊಂಡು ಸೆಪ್ಟಿಕ್ ಟ್ಯಾಂಕ್‌ನ ನಿರ್ಮಾಣ ಮಾಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.