ಜವಾಬ್ದಾರಿ ಹೊತ್ತವರು ಸಮಯ ಪಾಲನೆ ಅಗತ್ಯ
ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಕರೆ
ಕ.ಪ್ರ.ವಾರ್ತೆ ಮಧುಗಿರಿ ಮೇ 31
ಸಮುದಾಯದ ಜವಾಬ್ದಾರಿ ಹೊತ್ತವರು ಸಮಯ ಪಾಲಿಸಿದಾಗ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಪಟ್ಟನಾಯಕನಹಳ್ಳಿ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಕರೆ ನೀಡಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಒಕ್ಕಲಿಗರ ಸಂಘದ ನೂತನ ನಿರ್ದೇಶಕರುಗಳಾದ ಜಿ.ಎಲ್.ನರೇಂದ್ರಬಾಬು ಮತ್ತು ಶಶಿಕಿರಣ್ ಅವರನ್ನು ಸನ್ಮಾನಿಸಿ ಮಾತನಾಡಿ, ಒಕ್ಕಲಿಗ ಸಮುದಾಯವು ದೇಶದ ಪ್ರಗತಿ, ಸಮಾಜದಲ್ಲಿನ ಶೋಷಿತರ ಧ್ವನಿಯಾಗಿ ಮತ್ತು ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಸಮುದಾಯವಾಗಿದ್ದು ಈ ಸಂದರ್ಭದಲ್ಲಿ ರಚನಾತ್ಮಕವಾಗಿ ಕೆಲಸ ಮಾಡಬೇಕು.
ಸಮುದಾಯದ ಭಾವನೆ ಮತ್ತು ಚಿಂತನೆ ವಿಶಾಲವಾಗದುದು ಎಂದು ತಿಳಿಸಿ, ಜನಾಂಗದ ಸಂಘ ಸಂಸ್ಥೆಗಳು ಸಮುದಾಯದ ಭಾವನೆ ಅರ್ಥಮಾಡಿಕೊಂಡು ಕೆಲಸ ಮಾಡಬೇಕು. ಸಮುದಾಯವನ್ನು ಆರೋಗ್ಯಕರವಾಗಿ ನಿರ್ಮಿಸಿದಾಗ ಮಾತ್ರ ಎಲ್ಲ ರೀತಿಯಿಂದಲೂ ಜನಾಂಗ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅವರು ಒಕ್ಕಲಿಗ ಸಮುದಾಯ ಕೇವಲ ತಮ್ಮ ಜನಾಂಗದ ಬಗ್ಗೆ ಚಿಂತಿಸದೇ ಎಲ್ಲ ವರ್ಗದವರ ಹಿತ ಕಾಪಾಡುವ ಕೆಲಸ ನಿರ್ವಹಿಸಬೇಕು. ಅದಕ್ಕೆ ಪೂರಕವಾಗಿ ಶಾಶ್ವತ ಕುಡಿವ ನೀರು, ರಸ್ತೆ ಹಾಗೂ ಜನಪರ ಯೋಜನೆಗಳ ಬಗ್ಗೆ ಹೋರಾಟ ಕೈಗೊಳ್ಳೆಬೇಕು ನಿಮ್ಮ ಹೋರಾಟಕ್ಕ ನನ್ನ ಬೆಂಬಲವಿದೆ ಎಂದರು.
ಸನ್ಮಾನಿತ ಜಿ.ಎಲ್.ನರೇಂದ್ರಬಾಬು ಕೇಂದ್ರ ಸಂಘದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಶಕ್ತಿ ಮೀರಿ ಕೊಡಿಸುವುದಾಗಿ ಹಾಗೂ ಒಕ್ಕಲಿಗ ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ವಿಜ್ಞಾನ ಪಪೂ ಕಾಲೇಜು ಮತ್ತು ಮಹಿಳೆಯರ ನಿಲಯ ಸ್ಥಾಪನೆಗೆ ಕೇಂದ್ರ ಸಂಘ ಮತ್ತು ವೈಯಕ್ತಿವಾಗಿ ನೆರವು ನೀಡುವುದಾಗಿ ಭರವಸೆ ನೀಡಿದರು. ಮತ್ತೋರ್ವ ರಾಜ್ಯ ಸಂಘದ ನಿರ್ದೇಶಕ ಶಶಿಕಿರಣ್ ಮಾತನಾಡಿ ಮುಂದಿನ ವರ್ಷದಿಂದ ಜನಾಂಗದ ವಿದ್ಯಾರ್ಥಿಗಳಿಗೆ ಸಿಇಟಿ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದರು.
ತಾ.ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಗನ್ನಾಥ್, ಎಪಿಎಂಸಿ ಅಧ್ಯಕ್ಷ ಬಿ.ವಿ.ನಾಗರಾಜು, ತಾ.ಒಕ್ಕಲಿಗರ ಸಂಘದ ನಿರ್ದೇಶಕರಾದ ಎಸ್.ಮೋಹನ್, ಕಾಳೇಗೌಡ, ಮೂಡ್ಲಪ್ಪ, ಸಿ.ಎಂ. ವೀರಣ್ಣ, ಮುಖಂಡರುಗಳಾದ ಜಯರಾಮ್, ಗೌರವಾಧ್ಯಕ್ಷ ವೀರಣ್ಣ, ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

