ಬಸ್ ಸಂಚಾರ ಅವ್ಯವಸ್ಥೆ- ಮುಗಿದಿಲ್ಲ ಸಮಸ್ಯೆ
ಕಾರ್ಕಳ: ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ಕಾರ್ಯಗತವಾಗದೆ ಹಲವು ವರ್ಷಗಳಿಂದಿರುವ ನಗರದ ಅವ್ಯವಸ್ಥೆ ಸಮಸ್ಯೆ ಇನ್ನೂ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ರಸ್ತೆ ಆಗಲೀಕರಣ, ಬಸ್ ನಿಲ್ದಾಣ, ಬಸ್ ಸಂಚಾರ ಅವ್ಯವಸ್ಥೆ ನಗರದಲ್ಲಿ ಮುಂದುವರಿದಿದೆ.
ನಗರದ ಮುಖ್ಯ ಬಸ್ ನಿಲ್ದಾಣವನ್ನು ಬಂಡಿಮಠ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ ಜಿಲ್ಲಾಡಳಿತ ನಂತರ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಮತ್ತೆ ಮುಖ್ಯ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿತ್ತು. ಆದರೆ, ಜಿಲ್ಲಾಡಳಿತ ಹಾಗೂ ಪುರಸಭೆಯ ಕ್ರಮದ ವಿರುದ್ಧ ಖಾಸಗಿ ದಾವೆಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಎರಡೂ ಬಸ್ ನಿಲ್ದಾಣವನ್ನು ಸದ್ಬಳಕೆ ಮಾಡುವಂತೆ ಸೂಚಿಸಿದ ಬೆನ್ನಲೇ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು.
ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಖ್ಯ ಬಸ್ನಿಲ್ದಾಣ ಹಾಗೂ ಬಂಡಿಮಠ ಬಸ್ ನಿಲ್ದಾಣ ಎರಡೂ ಸದ್ಬಳಕೆಯಿಂದ ಆಗುವ, ವಾಹನ ಸವಾರರಿಗೆ ಹಾಗೂ ಪ್ರಯಾಣಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬದಲಿ ವಾಹನ ಸಂಚಾರ ಕ್ರಮ ಕೈಗೊಂಡಿದ್ದರೂ, ಇದೀಗ ಈ ಬದಲಿ ವ್ಯವಸ್ಥೆಯಿಂದ ಎಲ್ಲೆಂದಡೆ ಬಸ್ ನಿಲುಗಡೆ ಸಮಸ್ಯೆ ಹೆಚ್ಚಾಗುತ್ತಿದೆ.
ಮುಖ್ಯವಾಗಿ ಉಡುಪಿ ಹಾಗೂ ಮಂಗಳೂರುನತ್ತ ಹೋಗುವ ಬಸ್ಗಳಿಗೆ ಮೂರು ಮಾರ್ಗವಾಗಿ ಹೋಗುವ ವ್ಯವಸ್ಥೆ ಕಲ್ಪಿಸಿದರೆ, ಇತ್ತ ಕಾರ್ಕಳದತ್ತ ಬರುವ ಬಸ್ಗಳಿಗೆ ಅನಂತಶಯನ ಮಾರ್ಗವಾಗಿ ಬದಲಿ ವ್ಯವಸ್ಥೆ ಕಲ್ಪಿಸಿದೆ. ಆದರೆ, ಈ ಬದಲಿ ವ್ಯವಸ್ಥೆಯೇ ಇದೀಗ ಪ್ರಯಾಣಿಕರಿಗೆ ಹಾಗೂ ವಾಹನ ಸಂಚಾರ ತೊಂದರೆಯಾಗುತ್ತಿದೆ.
ಮೊದಲೇ ಮೂರು ಮಾರ್ಗ ರಸ್ತೆಗಳು ತೀರಾ ಕಡಿದಾಗಿದ್ದು, ಅಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಹಲವು ವರ್ಷಗಳಿಂದಲೇ ಇದೆ. ಇದೀಗ ಬದಲಿ ವ್ಯವಸ್ಥೆಯಿಂದ ಅತ್ತ ರಿಕ್ಷಾ ಎಲ್ಲೆಂದರಲ್ಲಿ ರಸ್ತೆ ಬದಿ ನಿಲುಗಡೆ, ಇತ್ತ ಪ್ರಯಾಣಿಕರಿಗಾಗಿ ಬಸ್ಗಳು ನಿಲುಗಡೆಯೂ ಸುವ್ಯವಸ್ಥಿತ ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪ್ರಸಂಗ ಎದುರಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

