ಪುಸ್ತಕದ ಮಾರಾಟ ದಂಧೆ: ನಾ.ದಾ. ಶೆಟ್ಟಿ ಆರೋಪ
ಮಂಗಳೂರು: ರಾಜ್ಯದ ಪುಸ್ತಕ ಪ್ರಾಧಿಕಾರ ಮತ್ತು ಗ್ರಂಥಾಲಯಗಳು ಸಾಹಿತಿಗಳ ಪುಸ್ತಕಗಳನ್ನು ಮಾರಾಟ ದಂಧೆಯಾಗಿ ಬಳಸುತ್ತಿದೆ ಎಂದು ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ ಆರೋಪಿಸಿದ್ದಾರೆ.
ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ನಡೆದ ಮಂಗಳೂರು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಷಕ್ಕೆ ರಾಜ್ಯದಲ್ಲಿ ಸುಮಾರು 3ಸಾವಿರ ಕೃತಿಗಳು ರಚನೆಗೊಳ್ಳುತ್ತಿದ್ದು, ಪ್ರಕಾಶನ, ಮಾರಾಟದಲ್ಲಿ ಅವ್ಯವಸ್ಥೆ ಕೂಡಿದೆ. ಹಳೆಯ ಪುಸ್ತಕಗಳ ಬೈಂಡ್ಗಳನ್ನು ತೆಗೆದು ಹೊಸ ಬೈಂಡ್ ಹಾಕಿ ಮಾರಾಟ ಮಾಡಲಾಗುತ್ತಿದೆ. ಸಾಹಿತಿಗಳು ಬರೆದ ಕೃತಿಗಳು ಪುಸ್ತಕ ಪ್ರಾಧಿಕಾರದಿಂದ, ಗ್ರಂಥಾಲಯ, ಜನರಿಗೆ ತಲುಪುವವರೆಗೆ ಒಳ ರಾಜಕೀಯಗಳು ನಡೆಯುತ್ತದೆ ಎಂದರು.
ಇಂಗ್ಲಿಷ್ ಗುಲಾಮರಾಗಿದ್ದೇವೆ: ರಾಜ್ಯದಲ್ಲಿ ಶೇ. 33 ಐಟಿಬಿಟಿ ಕಂಪನಿಗಳಿದ್ದು, ಕನ್ನಡ ಉಳಿಸುವ ಬಗ್ಗೆ ಕಾಳಜಿ ವಹಿಸಿದ್ದರೆ, ಕನ್ನಡದಲ್ಲಿ ಯುನಿಕ್ ಕೋಡ್ ಬಳಸುವ ವ್ಯವಸ್ಥೆ ಮಾಡಬಹುದಿತ್ತು. ಇಂಗ್ಲಿಷ್ ಮಾರುಕಟ್ಟೆಯ ಗುಲಾಮನಾಗಿದ್ದರೆ, ನಾವು ಇಂಗ್ಲಿಷ್ ಗುಲಾಮರಾಗಿದ್ದೇವೆ. ಇದರಿಂದಾಗಿ ಕನ್ನಡದ ಮೇಲಿನ ಅಭಿಮಾನ ಕೊರತೆಯೇ ಸಮಸ್ಯೆ. ಕನ್ನಡದ ಮಣ್ಣಲ್ಲಿ ತಲೆಎತ್ತಿರುವ ಐಟಿಬಿಟಿ ಕಂಪನಿಗಳು ಕನ್ನಡ ಉಳಿವಿಗಾಗಿ ಯಾವುದೇ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬೇಸರದ ವಿಷಯ ಎಂದರು.
ಹಳೆ ಕನ್ನಡದ ಕುರಿತು ಭಾಷಣ, ಪಾಠ ಹೇಳಿಕೊಟ್ಟರೆ ಸಾಲದು, ಇಂದಿನ ವೇಗದ ಯುಗಕ್ಕೆ ಕನ್ನಡವನ್ನು ಹೊಂದಿಸಿಕೊಂಡು ಹೋಗಬೇಕಾದ ಜವಾಬ್ದಾರಿಯಿದೆ ಎಂದರು.
ಆಶಯ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಅಕಾಡೆಮಿಗಳು ನಿರ್ಮಾಣಗೊಳ್ಳುತ್ತಿದ್ದು, ಸ್ವಂತಿಕೆ ಇಲ್ಲವಾಗಿದೆ ಎಂದು ಹೇಳಿದರು.
ಬೋಳ ಚಿತ್ತರಂಜನ್ದಾಸ್ ಶೆಟ್ಟಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಡಂಬೋಡಿ ಮಹಾಬಲ ಪೂಜಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

