ಮಠಾಧೀಶರ ಜತೆ ಐಕಾನ್ಗಳಿಗೂ ಮನ್ನಣೆ
ಮಂಗಳೂರು: ಏ.21ರಂದು ನಡೆಯುವ ಬ್ರಾಹ್ಮಣ ಜಾಗೃತಿ ಸಮ್ಮೇಳನದಲ್ಲಿ ಮಠಾಧೀಶರ ಜತೆಗೆ ಬ್ರಾಹ್ಮಣ ಸಮಾಜದ ಐಕಾನ್ಗಳಿಗೆ ಮನ್ನಣೆ ನೀಡಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಏ.21ರಂದು ಮಣ್ಣಗುಡ್ಡ ಸಂಘನಿಕೇತನದಲ್ಲಿ ನಡೆಯುವ ಸಮ್ಮೇಳನದ ಲಾಂಛನವನ್ನು ಶರವು ದೇವಸ್ಥಾನದಲ್ಲಿ ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು. ಖ್ಯಾತ ಕ್ರಿಕೆಟಿಗ ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ಮಯ್ಯಾಸ್ ಆಹಾರೋತ್ಪನ್ನ ವಿಶ್ವಮಟ್ಟಕ್ಕೆ ಒಯ್ದ ಸದಾನಂದ ಮಯ್ಯ, ಖ್ಯಾತ ಜ್ಯೋತಿಷಿಗಳು, ಗುರೂಜಿಗಳು, ಮಠಾಧೀಶರು ಸಮ್ಮೇಳನಕ್ಕೆ ಆಗಮಿಸಲು ಒಪ್ಪಿದ್ದಾರೆ ಎಂದರು.
ಸರ್ವೇಜನಾಃ ಸುಖಿನೋ ಭವಂತು ಮತ್ತು ಎಲ್ಲೆಡೆ ಶಾಂತಿ, ಸುಭೀಕ್ಷವಾಗಲಿ ಎಂದು ಸದಾ ಹೇಳುತ್ತಿರುವ ಬ್ರಾಹ್ಮಣರ ಧ್ಯೇಯೋದ್ದೇಶ ಇದರಿಂದಲೇ ಅರ್ಥವಾಗುತ್ತದೆ. ಶಿವಳ್ಳಿ, ಕೋಟ, ಹವ್ಯಕ, ಸ್ಥಾನಿಕ, ಕೋಟೇಶ್ವರ, ಚಿತ್ಪಾವನ, ಕರಾಡ, ದೇಶಸ್ಥ ಸಹಿತ ಎಲ್ಲ ಬ್ರಾಹ್ಮಣ ವರ್ಗ, ಪ್ರವರ್ಗಗಳ ಸಮಾವೇಶ 'ಬ್ರಹ್ಮ ತೇಜೋ ಬಲಂ, ಬಲಂ' ಘೋಷವಾಕ್ಯದಡಿ ನಡೆಯಲಿದೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಬ್ರಾಹ್ಮಣ ಸಮಾಜದ ಆಗು, ಹೋಗುಗಳು, ಪ್ರಸ್ತುತ ಪರಿಸ್ಥಿತಿ, ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಉಚಿತ ವಿವಾಹ ವೇದಿಕೆ, ಬ್ರಾಹ್ಮಣರ ಪುರಾತನ ವಸ್ತುಗಳ ಪ್ರದರ್ಶನ, ಉದ್ಯೋಗ ಮಾಹಿತಿ ಪುಸ್ತಕ, ಧಾರ್ಮಿಕ ಗ್ರಂಥ, ಹೋಮಹವನ, ಸಂತರ ಪ್ರವಚನ, ಆಶೀರ್ವಚನ ನಡೆಯಲಿದೆ. ಇದಕ್ಕೆ ಮುನ್ನ ಆಕರ್ಷಕ ಮೆರವಣಿಗೆ, ಬಳಿಕ ಸಾಂಸ್ಕೃತಿಕ ಪ್ರದರ್ಶನ ಸಂಪನ್ನಗೊಳ್ಳಲಿದೆ ಎಂದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಶರವು ದೇವಸ್ಥಾನದ ರಮೇಶ್ ಶಾಸ್ತ್ರಿ, ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ಕವಿ ಜನಾರ್ದನ ಹಂದೆ, ನಂದಳಿಕೆ ಬಾಲಚಂದ್ರ ರಾವ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

