ತಂತ್ರಜ್ಞ, ಶಿಕ್ಷಣ ತಜ್ಞ ಡಾ.ಬಿ.ಎಸ್. ಸಾಮಗ ಇನ್ನಿಲ್ಲ
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಹಾಗೂ ಮಾಜಿ ಡೀನ್ (ಶೈಕ್ಷಣಿಕ ವಿಭಾಗ) ಆಗಿದ್ದ ಡಾ. ಬೆಳ್ಳೆ ಸುಬ್ರಮಣ್ಯ ಸಾಮಗ (74) ಉಡುಪಿಯ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
1939ನಲ್ಲಿ ಉಡುಪಿ ಜಿಲ್ಲೆಯ ಬೆಳ್ಳೆ ಎಂಬಲ್ಲಿ ಜನಿಸಿದ ಡಾ.ಬಿ.ಎಸ್. ಸಾಮಗ ಅವರು ತಮ್ಮ ಬಿ.ಇ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿದರು. 1964ರಲ್ಲಿ ಪುಣೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ರ್ಯಾಂಕ್ನೊಂದಿಗೆ ಎಂ.ಇ. ಪದವಿ ಮತ್ತು ಲಂಡನ್ನ ಕಿಂಗ್ಸ್ ಕಾಲೇಜ್ನಲ್ಲಿ ಪ್ರಥಮ ರ್ಯಾಂಕ್ನೊಂದಿಗೆ ಎಂಎಸ್ಸಿ ಪದವಿಯನ್ನು ಜಾನ್ ಒರಿಯಲ್ ಪ್ರಶಸ್ತಿಯೊಂದಿಗೆ ಹಾಗೂ ಪಿಎಚ್ಡಿ ಪದವಿಯನ್ನು ಐಐಟಿ ಮದ್ರಾಸ್ನಿಂದ 1974ರಲ್ಲಿ ಪಡೆದಿದ್ದಾರೆ.
ಡಾ.ಬಿ.ಎಸ್. ಸಾಮಗ ಅವರು ರಾಷ್ಟ್ರೀಯ ತಾಂತ್ರಿಕ ಸಂಸ್ಥೆ, ಸುರತ್ಕಲ್ನಲ್ಲಿ ಸುಮಾರು 40 ವರ್ಷ ಕಾರ್ಯ ನಿರ್ವಹಿಸಿ, ನಂತರ ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸುಮಾರು 14 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.
ಪ್ರೊ. ಸಾಮಗ ಅವರು 1968ರಲ್ಲಿ ಯುನೆಸ್ಕೊ ಫೆಲೋಶಿಪ್ ಮೂಲಕ ಯುನೈಟೆಡ್ ಕಿಂಗ್ಡಮ್, ವೆಸ್ಟ್ ಜರ್ಮನಿ, ಇಟಲಿ, ಕೌಲಾಲಂಪುರ ಹಾಗೂ ಇನ್ನಿತರ ರಾಷ್ಟ್ರಗಳಿಗೂ ಭೇಟಿ ನೀಡಿದ್ದರು. ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಹಾಗೂ ತಾಂತ್ರಿಕ ಸಮ್ಮೇಳನಗಳಲ್ಲಿ 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವಾರು ಬಂಡವಾಳ ಒದಗಿಸುವ ಯೋಜನೆಗಳಿಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಪುಸ್ತಕವನ್ನೂ ಬರೆದು ಪ್ರಕಟಿಸಿದ್ದಾರೆ. ಅವರ ತಾಂತ್ರಿಕತೆಯ ನೈಪುಣ್ಯದ ಜೊತೆಗೆ ಶೈಕ್ಷಣಿಕ ಪ್ರಾವೀಣ್ಯತೆಯನ್ನು ಕಂಡು 1995ರಲ್ಲಿ ಐಎಸ್ಟಿಇ- ಅಣ್ಣಾ ವಿಶ್ವವಿದ್ಯಾನಿಲಯದಿಂದ ರಾಷ್ಟ್ರೀಯ ಪ್ರಶಸ್ತಿ “@}ÚßÀ«Ú}Ú ತಾಂತ್ರಿಕ ಶಿಕ್ಷಣ }Údk’, 2002ರಲ್ಲಿ ಎಂಜಿನಿಯರ್ಸ್ ಡೇ ಪ್ರಶಸ್ತಿ ಜೊತೆಗೆ ಅನೇಕ ಸಂಘ ಸಂಸ್ಥೆಗಳೂ ಸಹ ಪ್ರಶಸ್ತಿ ನೀಡಿ ಗೌರವಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

