ದಲಿತ ಸಂಘಟನೆ ವಿಘಟನೆ: ಜಯನ್ ಮಲ್ಪೆ ವಿಷಾದ
ಉಡುಪಿ: ನಾಲ್ಕು ದಶಕ ಇತಿಹಾಸದ ದಲಿತ ಸಂಘಟನೆ ವಿಘಟನೆಗೊಂಡಿದ್ದು, ಇದರ ಮೇಲ್ಛಾವಣಿ ಹಾರಿಹೋಗಿದೆ. ಉಳಿದ ಅವಶೇಷಗಳಡಿ ಕಪ್ಪೆಗಳು, ಹೆಗ್ಗಣಗಳು, ನರಿಗಳು ಹಾಗೂ ಅವಕಾಶವಾದಿ ಕೇರೆ ಹಾವುಗಳು ಸೇರಿಕೊಂಡು ಹೋರಾಟದ ರಥವನ್ನು ಹಿಂದಕ್ಕೆ ಎಳೆದಿರುವುದು ವಿಷಾದನೀಯ ಎಂದು ದಲಿತ ಚಿಂತಕ, ಹೋರಾಟಗಾರ ಜಯನ್ ಮಲ್ಪೆ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಅಂಬೇಡ್ಕರ್ ಅವರ 112ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಹಬ್ಬವನ್ನು ಒಂದಾಗಿ ಆಚರಿಸಲಾಗದಷ್ಟು ದಲಿತರ ಮನಸ್ಸುಗಳು ದೂರವಾಗಿರುವುದು ಅಂಬೇಡ್ಕರ್ ಚಿಂತನೆಗಳಿಗೆ ಬಗೆದ ದ್ರೋಹವಾಗಿದೆ ಎಂದ ಜಯನ್, ನಾಯಕರ ಚಿಂತನೆಗಳ ಐಕ್ಯತೆ ಆಗದೆ ಸಂಘಟನೆ ಒಂದಾಗುವುದು ದೂರದ ಮಾತಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ದಸಂಸ ಹಿರಿಯ ನಾಯಕ ಸುಂದರ್ ಕಪ್ಪೆಟ್ಟು ಮಾತನಾಡಿ, ದಲಿತ ಮುಖಂಡರು ಪರಸ್ಪರ ಭಿನ್ನಾಭಿಪ್ರಾಯವನ್ನು ಮರೆತು ದಲಿತ ಸಮುದಾಯದ ಹಿತದೃಷ್ಟಿಯಿಂದ ಒಂದುಗೂಡುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಹಾಗೂ ದಲಿತ ನಾಯಕ ಯುವರಾಜ್ ಪುತ್ತೂರು ಮತ್ತು ಯುವ ಉದ್ಯಮಿ ಜಗನ್ನಾಥ ಪೂಜಾರಿ ಇದ್ದರು.
ದಲಿತ ಮುಖಂಡರಾದ ಕೃಷ್ಣ ಕಪ್ಪೆಟ್ಟು, ಅಶೋಕ್ ನಿಟ್ಟೂರು, ಮೋಹನ್ದಾಸ್ ಚಿಟ್ಪಾಡಿ, ವಾಸುದೇವ, ಸತೀಶ್ ಕಪ್ಪೆಟ್ಟು, ಭುವನೇಶ್ ಪುತ್ತೂರು, ಶಬರಿ ಪುತ್ತೂರು ಮತ್ತಿತರರು ಇದ್ದರು.
ಶೈಲೇಶ್ ಪುತ್ತೂರು ಸ್ವಾಗತಿಸಿದರು. ಗಣೇಶ್ ನೆರ್ಗಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

