ಉಡುಪಿ

ಕೆಥೋಲಿಕ್ ಯುವ ಸಂಚಲನ: ವಲಯ ಸಮ್ಮೇಳನ ಉದ್ಘಾಟನೆ

Published On :

ಉಡುಪಿ: ಯುವಜನರು ಇಂದು ವಿವಿಧ ರೀತಿಯ ಗೊಂದಲಗಳ ನಡುವೆ ಬದುಕುತ್ತಿದ್ದಾರೆ. ಅವರ ಜೀವನ ಕವಲು ದಾರಿಯಲ್ಲಿ ಸಾಗುತ್ತಿದ್ದು, ಇಂತಹ ಗೊಂದಲಗಳಿಗೆ ಪರಿಹಾರ ನೀಡುತ್ತಿರುವ ಐಸಿವೈಎಂ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಇಲ್ಲಿನ ಡಾನ್‌ಬಾಸ್ಕೋ ಹಾಲ್‌ನಲ್ಲಿ ಭಾನುವಾರ ಉಡುಪಿ ವಲಯ ಮಟ್ಟದ ಭಾರತೀಯ ಕೆಥೋಲಿಕ್ ಯುವ ಸಂಚಲನದ ವಲಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೈಸ್ತ ಸಮುದಾಯದ ಯುವ ಜನರು ಸಮಾಜ ಸೇವೆಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ವಲಯದ ಪ್ರಧಾನ ಧರ್ಮಗುರು ಫ್ರೆಡ್‌ಮಸ್ಕರೇನ್ಹಸ್ ಮಾತನಾಡಿ, ಯುವಜನರು ತಮ್ಮ ಸೇವೆಯನ್ನು ಸಮಾಜಕ್ಕೆ ನೀಡುವ ಮೂಲಕ ಪ್ರಜ್ವಲಿಸುವ ಜ್ಯೋತಿಯಾಗಿ ಮೂಡಿಬರಬೇಕು. ಸೇವೆಯೊಂದಿಗೆ ಸಮಾಜದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಬೇಕು ಎಂದರು. ಐಸಿವೈಎಂ ವಲಯ ಸಮಿತಿ ನಿರ್ದೇಶಕ ಆಲ್ಬನ್ ಡಿ'ಸೋಜಾ, ವಲಯಾಧ್ಯಕ್ಷ ರೋಶನ್, ಉಡುಪಿ ಘಟಕ ಅಧ್ಯಕ್ಷ ರೋಯ್ ಡಿ'ಸೋಜಾ, ಕಾರ್ಯದರ್ಶಿ ವಿವಿಲಾ, ಐಸಿವೈಎಂ ಧರ್ಮಪ್ರಾಂತ್ಯದ ಉಪಾಧ್ಯಕ್ಷೆ ರೀನಲ್, ವಲಯ ಸಚೇತಕರಾದ ಮ್ಯಾಕ್ಷಿಂ ಡೇಸಾ ಇದ್ದರು.
ಉಡುಪಿ ವಲಯದ ಕಟಪಾಡಿ, ಉದ್ಯಾವರ, ಕಲ್ಮಾಡಿ, ಪೆರಂಪಳ್ಳಿ, ಉಡುಪಿ, ಮೂಡುಬೆಳ್ಳೆ, ಕುಂತಲನಗರ ಧರ್ಮಕೇಂದ್ರಗಳ ಯುವಜನರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಐಸಿವೈಎಂ ವಲಯ ಸಮಿತಿ ವತಿಯಿಂದ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.