ಭಾರಿ ಲಾರಿಗಳಿಂದ ಕಿರಿಕಿರಿ: ಡಿಸಿಗೆ ದೂರು
ಉಡುಪಿ: ಪಾದೂರು ಕಡೆಯಿಂದ ಶಿರ್ವ- ಶಂಕರಪುರ - ಕಟಪಾಡಿ ರಸ್ತೆಯಲ್ಲಿ 10ರಿಂದ 12 ಚಕ್ರಗಳಿರುವ ಬೃಹತ್ ಗಾತ್ರದ ಲಾರಿಗಳಲ್ಲಿ 40ರಿಂದ 45 ಟನ್ನು ಭಾರದ ಬಂಡೆಕಲ್ಲುಗಳನ್ನು ಸಾಗಿಸುವ ಲಾರಿಗಳು ದಿನನಿತ್ಯ ಓಡಾಡುತ್ತಿದ್ದು, ಇದರಿಂದ ಶಿರ್ವ- ಕಟಪಾಡಿ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಜನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಶಿರ್ವ ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ಈ ಲಾರಿಗಳ ಓಡಾಟದಿಂದ ಈ ರಸ್ತೆಯ ಶಿರ್ವ ಬಳಿಯ ಕಿರು ಸೇತುವೆ ಬಿರುಕು ಬಿಟ್ಟಿದೆ. ರಸ್ತೆಯಲ್ಲಿ ಲಾರಿಗಳಿಂದ ಸಣ್ಣ ಗಾತ್ರದ ಕಲ್ಲು ತುಂಡುಗಳು ಉರುಳಿ ಇತರ ವಾಹನಗಳಿಗೆ ಹಾನಿಯಾಗಿದೆ. ರಸ್ತೆಯ ಧಾರಣ ಸಾಮರ್ಥ್ಯ ಮೀರಿದ ಅಧಿಕ ಭಾರದ ಈ ಲಾರಿಗಳಿಂದ ರಸ್ತೆ ತುಂಬಾ ಹೊಂಡಗಳಾಗಿವೆ. ಅದರಲ್ಲಿ ಮಳೆಯ ನೀರು ನಿಂತು ಕೆಸರುಕೊಚ್ಚೆಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ಈ ರಸ್ತೆ ಸದ್ಯವೇ ಸಂಚಾರಕ್ಕೆ ಆಯೋಗ್ಯವಾಗಲಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಜಯಕರ್ನಾಟಕ ಘಟಕದ ಗೌರವ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಡುಪಿ ತಹಸೀಲ್ದಾರ್ ಅವರಿಗೆ ಸಾರ್ವಜನಿಕರ ಪರವಾಗಿ ದೂರು, ಮನವಿ ಸಲ್ಲಿಸಿ, ಈ ಲಾರಿಗಳನ್ನು ಶಿರ್ವ- ಕಟಪಾಡಿ ರಸ್ತೆಯಲ್ಲಿ ಸಂಚರಿಸದಂತೆ ನಿಷೇಧಿಸಬೇಕು ಮತ್ತು ಪಾದೂರಿನಿಂದ ಕಾಪು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಲು ನಿರ್ದೇಶನ ನೀಡಬೇಕು ಎಂದು ವಿನಂತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

