ಪರ್ಕಳ, ಮಠದಬೆಟ್ಟಿನಲ್ಲಿ ಆಟಿಡೊಂಜಿ ದಿನ
ಉಡುಪಿ:ರೋಟರಿ ಪರ್ಕಳದ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರೋಟರಿ ಅಧ್ಯಕ್ಷ ಎಸ್.ಎನ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಅವರು ಚೆನ್ನೆಮಣೆ ಆಟದ ಮೂಲಕ ಈ ಸಂಭ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಪ್ರಾಯೋಜಕರಾದ ರೋಟರಿ ಪರ್ಕಳದ ಸ್ಥಾಪಕಾಧ್ಯಕ್ಷ ಶ್ರೀನಿವಾಸ ನಾಯಕ್, ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಹಿರಿಯಡ್ಕದ ಲಕ್ಷ್ಮಿ ಎಂಬವರಿಗೆ 7011 ವೈದ್ಯಕೀಯ ನೆರವು ನೀಡಿದರು.
ರೋಟರಿ ವಲಯ 2ರ ಸಹ ಗವರ್ನರ್ ಮಹೇಶ್ ಕುಮಾರ್, ವಲಯ ಸೇನಾನಿ ರಾಜಕುಮಾರ್ ಬಿ. ಶೆಟ್ಟಿ ಪೆರ್ಡೂರು ಭಾಗವಹಿಸಿದ್ದರು. ರೋಟರಿ ಅಧ್ಯಕ್ಷ ಎಸ್.ಎನ್. ನಾಯಕ್ ಸ್ವಾಗತಿಸಿ, ಕಾರ್ಯದರ್ಶಿ ಬಿ. ಅನಂತರಾಮ ಭಟ್ ವಂದಿಸಿದರು. ಸ್ಥಳೀಯ ಆಟಿ ತಿಂಗಳ ವೈವಿಧ್ಯಮಯ ವಿಶೇಷ ಖಾದ್ಯಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿದವು.
ಮಠದಬೆಟ್ಟು: ಇಲ್ಲಿನ ಕಲ್ಸಂಕ ಮಠದಬೆಟ್ಟು ನಾಗರಿಕರ ಆಶ್ರಯದಲ್ಲಿ ಜರುಗಿದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉಡುಪಿ ನಗರಸಭೆಯ ಬನ್ನಂಜೆ ವಾರ್ಡ್ನ ನೂತನ ಸದಸ್ಯ ಹರೀಶ್ ರಾಮ್ ಭಾನುವಾರ ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ಕೆಸರುಗದ್ದೆ ಓಟ, ಕೆಸರಿನಲ್ಲಿ ತೆಂಗಿನಕಾಯಿ ಹುಡುಕುವ ಆಟ, ಚೆನ್ನಮಣೆ, ಹಗ್ಗಜಗ್ಗಾಟ ನಡೆಸುವುದರೊಂದಿಗೆ ಸುಮಾರು 30 ಬಗೆಯ ತಿನಿಸನ್ನು ತಯಾರಿಸಿ ಬಡಿಸಲಾಯಿತು.
ಈ ಸಂದರ್ಭ ಸುರೇಶ್ ಪೂಜಾರಿ, ಉದಯಕುಮಾರ್ ಶೆಟ್ಟಿ, ಆನಂದ ಸುವರ್ಣ, ರಾಹುಲ್ ಶೆಟ್ಟಿ, ಚೇತನ್ ಕುಮಾರ್, ಶ್ರೀಕಾಂತ್ ಅಮೀನ್, ಪ್ರವೀಣ್ ಮೆಂಡನ್, ಮನೀಶ್ ಶೆಟ್ಟಿ, ಹಿರಿಯ ನಾಗರಿಕರಾದ ಅಕ್ಕು ಪೂಜಾರಿ, ಪತ್ರಕರ್ತ ಜಯಪ್ರಕಾಶ್ ಕಿಣಿ ಉಡುಪಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

