ಬಿಹಾರ ರೈಲು ಅಪಘಾತ: ಮೃತರ ಕುಟುಂಬಕ್ಕೆ ಪರಿಹಾರ ಅನಗತ್ಯ
ಉಡುಪಿ: ಬಿಹಾರದ ಧಮಾರಘಾಟ್ ರೇಲ್ವೆ ನಿಲ್ದಾಣದಲ್ಲಿ ಕಾನೂನುಗಳನ್ನು ಗಾಳಿಗೆ ತೂರಿ ರೈಲು ಹಳಿಯ ಮೇಲೆ ನಿಂತು ಅಪಘಾತಕ್ಕೊಳಗಾಗಿ ಮೃತಪಟ್ಟವರ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡಬಾರದು ಎಂದು ಉಡುಪಿ ರೇಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್. ಎಲ್. ಡಯಾಸ್ ಒತ್ತಾಯಿಸಿದ್ದಾರೆ.
ದೇಶದಲ್ಲಿ ಹಲವು ಕಾನೂನುಗಳಿವೆ. ಅವುಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕಾದ ರೇಲ್ವೆ ನಿಯಮ ಮತ್ತು ಕಾನೂನುಗಳಿವೆ. ಇವುಗಳನ್ನೆಲ್ಲಾ ಗಾಳಿಗೆ ತೂರಿ, ರೈಲು ಬರುತ್ತವೆ ಎಂದು ತಿಳಿದಿದ್ದೂ ಈ ಜನ ಹಳಿಯ ಮೇಲೆ ನಡೆದದ್ದು ಉದ್ಧಟತನದ ಪರಮಾವಧಿಯಾಗಿದೆ. ಕೂಡಲೇ ಬ್ರೇಕ್ ಹಾಕಿ ನಿಲ್ಲಿಸಲು ರೈಲು ಎತ್ತಿನಗಾಡಿಯೂ ಅಲ್ಲ, ಸಿಟಿ ಬಸ್ಸೂ ಅಲ್ಲ. ಅಕಸ್ಮಾತ್ ಚಾಲಕ ಬ್ರೇಕ್ ಹಾಕಿದರೂ ಅದು ಸುಮಾರು 200ರಿಂದ 300 ಮೀಟರುಗಳಷ್ಟು ದೂರ ಸಾಗಿದ ಬಳಿಕವಷ್ಟೇ ನಿಲ್ಲುತ್ತದೆ.
ಅಲ್ಲದೇ ಇದೇ ಬಿಹಾರದ ನಾಗರಿಕರು ನಿಲುಗಡೆ ಇಲ್ಲದ ಧಮಾರಾಘಾಟ್ ನಿಲ್ದಾಣದಲ್ಲಿ ಮಾಧೇಪುರ- ಸಮಷ್ಟಿಪುರ ರೈಲನ್ನು ಸಿಬ್ಬಂದಿಗಳಿಂದ ಬಲವಂತವಾಗಿ ಸಿಗ್ನಲ್ ಕೊಡಿಸಿ ನಿಲ್ಲಿಸಿರುವುದಾಗಿಯೂ ವರದಿಯಾಗಿದೆ. ಹೀಗೆ ಕಾನೂನು ಧಿಕ್ಕರಿಸಿ ಸತ್ತ ಜನರ ಬಂಧುಗಳು ಬಂದು ಚಾಲಕನಿಗೆ ಥಳಿಸಿ ರೈಲಿಗೆ ಬೆಂಕಿ ಹಚ್ಚಿ ಅಪಾರನಷ್ಟ ಮಾಡಿದ್ದಾರೆ.
ಇದು ಉದ್ದೇಶಪೂರ್ವಕವಾಗಿ ತಿಳಿದು ತಿಳಿದು, ಕಾನೂನನ್ನು ಧಿಕ್ಕರಿಸಿ ಮಾಡಿದ ಉದ್ಧಟತನದಿಂದ ಆದ ಕೃತ್ಯಗಳಾಗಿವೆ. ಸರ್ಕಾರವಾಗಲೀ ರೇಲ್ವೆ ಆಗಲೀ ಈ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡಬಾರದು. ಹೀಗೆ ಮಾಡಿದರೆ ಮಾತ್ರ ಇತರರಿಗೆ ಜ್ಞಾನೋದಯವಾಗುತ್ತದೆ ಎಂದು ಡಯಾಸ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

