ಬೃಹತ್ ಶಿಲಾಯುಗದ ಕಂಡಿ ಕೋಣೆ ಸಮಾಧಿ ನೆಲೆ ಪತ್ತೆ
ಕಾರ್ಕಳ: ದಕ್ಷಿಣ ಭಾರತದಾದ್ಯಂತ ಪಾಂಡವರ ಕಲ್ಲು, ಮೋರಿಯರ ಮನೆ, ಮೋರಿಯರ ದಿಬ್ಬ, ಪಾಣಾರ ಅರೆ ಕಲ್ಲು, ತೂಂತ್ಕಲ್ಲು, ಮಂಚಕಲ್ಲು, ಕಲ್ಮಂಚ, ಕಲ್ಮನೆ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಬೃಹತ್ ಶಿಲಾಯುಗದ ಕಂಡಿ ಕೋಣೆ (ತೂತು ಅಥವಾ ರಂಧ್ರವನ್ನು ಹೊಂದಿರುವ) ಸಮಾಧಿ ನೆಲೆಯೊಂದು ಇಲ್ಲಿನ ಪಳ್ಳಿಯ ಸಮೀಪದಲ್ಲಿ ಮದ್ಮಲ್ಪಾದೆ ಎಂಬಲ್ಲಿ ಪತ್ತೆಯಾಗಿದೆ.
ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿ ಅವರು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಈ ಸಮಾಧಿ ನೆಲೆಯಲ್ಲಿ 4 ಸಮಾಧಿಗಳನ್ನು ಪತ್ತೆ ಮಾಡಿದ್ದಾರೆ.
ಮೊದಲನೇ ಸಮಾಧಿ ಒಳಭಾಗದಲ್ಲಿ ಮಣ್ಣು ತುಂಬಿ ನೆಲಗಟ್ಟನ್ನು ಮಾಡಲಾಗಿದೆ. ಇದರ ನಾಲ್ಕು ದಿಕ್ಕಿನಲ್ಲಿ ಕಲ್ಲಿನ ಚಪ್ಪಡಿ ನಿಲ್ಲಿಸಿ, ಮೇಲೆ ಇನ್ನೊಂದು ಚಪ್ಪಡಿಯಿಂದ ಮುಚ್ಚಲಾಗಿದೆ. ಪೂರ್ವ ದಿಕ್ಕಿನ ಕಲ್ಲು ಚಪ್ಪಡಿಯಲ್ಲಿ 16 ಸೆ.ಮೀ. ಸುತ್ತಳತೆಯ ರಂಧ್ರ ಮಾಡಲಾಗಿದೆ. 2ನೇ ಸಮಾಧಿಯು ಪೊದೆಯೊಂದರಲ್ಲಿ ಮುಚ್ಚಿ ಹೋಗಿದ್ದು, ಕೇವಲ ಭೂ ಮಟ್ಟದಲ್ಲಿ ಕಲ್ಲು ಚಪ್ಪಡಿಯ ಒಡೆದ ತುಂಡುಗಳು ಕಾಣಸಿಗುತ್ತವೆ. ರಂಧ್ರವಿದ್ದ ಚಪ್ಪಡಿಯ ಭಾಗವನ್ನು ಈಗಲೂ ಗುರುತಿಸಬಹುದಾಗಿದೆ. ಇಲ್ಲಿಯೇ ಇನ್ನೂ ಎರಡು ಕಂಡಿ ಕೋಣೆ ಸಮಾಧಿಯ ಅವಶೇಷಗಳಿವೆ. ಒಂದು ಬ್ರಹ್ಮಸ್ಥಾನದ ಒಳಭಾಗದಲ್ಲಿದ್ದು, ಅದನ್ನೇ ಬ್ರಹ್ಮರಗುಂಡ ಎಂದು ಕರೆದು ಪೂಜಿಸಲಾಗುತ್ತಿದೆ. ಇದರಿಂದ ಬೃಹತ್ ಶಿಲಾ ಸಮಾಧಿ ನೆಲೆಗಳೇ ಬ್ರಹ್ಮಸ್ಥಾನಗಳಾಗಿ ಪರಿವರ್ತನೆಗೊಂಡಿವೆಯೇ ಎಂಬ ಅನುಮಾನಕ್ಕೆ ಕಾರಣವಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

