ಉಡುಪಿ

ಹಿಂದೂ ಎಂದು ಹೇಳಿಕೊಳ್ಳಲು ಭಯ: ಎಂ.ವಿ. ಕಾಮತ್ ಖೇದ

Published On :

ಉಡುಪಿ: 'ನನಗೆ ಈಗೀಗ ಹಿಂದೂ ಎಂದು ಹೇಳಿಕೊಳ್ಳಲು ಭಯ, ಮುಜುಗರವಾಗುತ್ತಿದೆ' ಎಂದು ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಎಂ.ವಿ. ಕಾಮತ್ ಹೇಳಿದ್ದಾರೆ.
 ಅವರು ಶನಿವಾರ ನಗರದ ಎಂ.ಜಿ.ಎಂ. ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವದ ಅಂಗವಾಗಿ ನಡೆದ ಚಿಂತನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
 ಹಿಂದುತ್ವ ಎಂಬುದು ಬರಿಯ ಧರ್ಮವಲ್ಲ, ಅದೊಂದು ನಾಗರಿಕತೆಯ ಸಂಕೇತ. ಹಿಂದೆ ಮೊಘಲರು, ಬ್ರಿಟಿಷರು ನಮ್ಮ ದೇಶದ ಮೇಲೆ ದಾಳಿ ನಡೆಸಿ ಹಿಂದುತ್ವವನ್ನು ನಾಶಮಾಡಲು ಪ್ರಯತ್ನಿಸಿದ್ದರೂ ಸಫಲರಾಗಿರಲಿಲ್ಲ. ಆದರೆ ಇಂದು ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳೇ ಹಿಂದುತ್ವವನ್ನು ನಾಶಮಾಡುತ್ತಿದ್ದಾರೆ. ಈಗೀಗ ನನಗೆ ಹಿಂದೂ ಎಂದು ಹೇಳಲು ಭಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
 ಹಿಂದುತ್ವದ ಬಗ್ಗೆ ವಿದೇಶದಲ್ಲಿ ಬಹಳ ಗೌರವಿದೆ. ಮುಖ್ಯವಾಗಿ ಅಮೆರಿಕನ್ನರು ಹಿಂದೂ ಸಂಸ್ಕೃತಿಯನ್ನು ಗೌರವಿಸುತ್ತಿದ್ದಾರೆ. ವಿವೇಕಾನಂದರು ನಮ್ಮ ದೇಶದ ಶ್ರೇಷ್ಠತೆಯನ್ನು ವಿದೇಶದಲ್ಲಿಯೂ ಎತ್ತಿ ಹಿಡಿದಿದ್ದರು. ಆದರೆ ಇಂದು ನಮ್ಮನ್ನಾಳುವವರು, ಆಳಿಸಿಕೊಳ್ಳುವವರು ಪ್ರತಿಯೊಬ್ಬರೂ ಹಣ ಗಳಿಸುವ ಬಗ್ಗೆ ಯೋಚಿಸುತ್ತಾರೆಯೇ ಹೊರತು, ದೇಶದ ಶ್ರೇಷ್ಠೆತೆ ಉಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ಯಾರೂ ಯೋಚಿಸುತ್ತಿಲ್ಲ ಎಂದು ಎಂ.ವಿ. ಕಾಮತ್ ವಿಷಾದಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಅಸ್ಮಿತೆ ಮತ್ತು ಜಾತ್ಯತೀತತೆ ಎಂಬ ಬಗ್ಗೆ ಉಪನ್ಯಾಸ ನೀಡಿದ ಚಿಂತಕ ದತ್ತೇಶ್ ಪಿ. ಪಾರುಲ್ಕರ್, ಭಾರತ ಶ್ರೇಷ್ಠ ದೇಶವಾಗಬೇಕಾದರೆ ಕೇವಲ ಮಿಲಿಟರಿ ಹಾಗೂ ಆರ್ಥಿಕ ಶಕ್ತಿಯಿಂದ ಸಾಧ್ಯವಿಲ್ಲ. ಇದರ ಜತೆಗೆ ಅಧ್ಯಾತ್ಮಿಕತೆ, ಬೌದ್ಧಿಕತೆ ಕೂಡ ಅಗತ್ಯವಾಗಿದೆ. ಭಾರತ ಆಧುನೀಕರಣಗೊಂಡರೆ ತಪ್ಪಿಲ್ಲ, ಆದರೆ ಪಾಶ್ಚ್ಯಾತೀಕರಣವಾಗಬಾರದು ಎಂದರು. ಹಿರಿಯ ಚಿಂತಕ ಲಕ್ಷ್ಮೀಶ್ ತೋಳ್ಪಾಡಿ ಅವರು ಕೋಮು, ರಾಷ್ಟ್ರ, ಧರ್ಮ- ವಿವೇಕಾನಂದರ ಚಿಂತನೆ ಎಂಬ ಬಗ್ಗೆ ಉಪನ್ಯಾಸ ನೀಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಹಾ.ಲಾ. ನಾಯ್ಕ್, ಕಾರ್ಯಕ್ರಮ ಸಂಘಟಕ ಸುಪ್ರಸಾದ್ ಇದ್ದರು. ಕಾರ್ಯಕ್ರಮ ಸಂಯೋಜಕ ಡಾ. ಶಿವಾನಂದ ನಾಯಕ್ ಸ್ವಾಗತಿಸಿದರು. ಎಸ್‌ಡಿಎಂ ಆಯುರ್ವೇದಿಕ್ ಕಾಲೇಜಿನ ಡಾ. ಜಯಕೃಷ್ಣ ನಾಯಕ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.