15ರಿಂದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಬ್ಯಾಡ್ಮಿಂಟನ್
ಮಣಿಪಾಲ: ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯದ ಪುರುಷರ, ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯ ಡಿ. 15ರಿಂದ 19ರವರೆಗೆ ಮಣಿಪಾಲ ವಿ.ವಿ. ಆಯೋಜನೆಯಲ್ಲಿ ನಡೆಯಲಿದೆ.
ಈ ಬಗ್ಗೆ ವಿವಿಯ ಸಹಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 5 ದಿನಗಳ ಕಾಲ ನಡೆಯುವ ಈ ಪಂದ್ಯದಲ್ಲಿ 70 ವಿವಿಗಳಿಂದ (70 ಪುರುಷ ಮತ್ತು 67 ಮಹಿಳೆಯರ) ತಂಡಗಳಲ್ಲಿ 700 ಮಂದಿ ಆಟಗಾರರು ಭಾಗವಹಿಸಲಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಅಧ್ಯಕ್ಷ ರಾಜ್ಯಸಭಾ ಸದಸ್ಯ ಡಾ. ಅಖಿಲೇಶ್ ದಾಸ್ ಗುಪ್ತ ಈ ಪಂದ್ಯವನ್ನು ಉದ್ಘಾಟಿಸಲಿದ್ದಾರೆ.
ಕಳೆದ ವರ್ಷ ಮಣಿಪಾಲ ವಿವಿಯು ದಕ್ಷಿಣ ವಲಯ ವಿವಿ ಮತ್ತು ಅಖಿಲ ಭಾರತ ಕ್ರಿಕೆಟ್ ಪಂದ್ಯವನ್ನು, ಅದಕ್ಕೂ ಮೊದಲು ದಕ್ಷಿಣ ವಲಯ ಮತ್ತು ಅಂತರ ವಲಯ ಟೆನಿಸ್ ಪಂದ್ಯಾವಳಿ ಯಶಸ್ವಿಯಾಗಿ ಸಂಘಟಿಸಿತ್ತು.
ಈ ಪಂದ್ಯದಲ್ಲಿ 5 ಅಂಗಣಗಳಲ್ಲಿ ಒಟ್ಟು 135 ಪಂದ್ಯಗಳಲ್ಲಿ ನಡೆಯಲಿದೆ. ಕಳೆದ ಬಾರಿಯ ದಕ್ಷಿಣ ವಲಯದ ಪುರುಷರ ಚಾಂಪಿಯನ್ ಕೇರಳದ ಕೊಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಮತ್ತು ಮಹಿಳೆಯರ ಚಾಂಪಿಯನ್ ಕೊಟ್ಟಾಯಂನ ಮಹಾತ್ಮಗಾಂಧಿ ವಿವಿಗಳ ಜೊತೆಗೆ ಇತರ ವಿವಿಗಳ ಭಾಗವಹಿಸಲಿವೆ ಎಂದು ಡಾ. ಬಲ್ಲಾಳ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಕುಲಪತಿ ಡಾ. ರಾಮ್ ನಾರಾಯಣನ್, ಕುಲಸಚಿವ ಡಾ.ಜಿ.ಕೆ. ಪ್ರಭು, ಪಂದ್ಯಾವಳಿಯ ಸಂಘಟನಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಂಪರಾಜ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

