ಉಡುಪಿ

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಸೌಜನ್ಯ ಶೆಟ್ಟಿ ಚಾಂಪಿಯನ್

Published On :

ಉಡುಪಿ: ಇತ್ತೀಚೆಗೆ ಮೆ. ಸತೀಶ್ ಶುಗರ್ಸ್ ಆತಿಥ್ಯದಲ್ಲಿ ಕರ್ನಾಟಕ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಸಹಬಾಗಿತ್ವದಲ್ಲಿ ಬೆಳಗಾವಿಯಲ್ಲಿ ಜರುಗಿದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಉಡುಪಿ ಬೈಲೂರಿನ ಸೌಜನ್ಯ ಶೆಟ್ಟಿ ಅವರು 'ಮಿಸ್ಟರ್ ಕರ್ನಾಟಕ - 2013' ಪ್ರಶಸ್ತಿಯನ್ನು ಗೆದ್ದು, ರು. 1,55,555 ನಗದು ಪುರಸ್ಕಾರ ಮತ್ತು ಚಾಂಪಿಯನ್ ಆಫ್ ಚಾಂಪಿಯನ್ಸ್ ಶಾಶ್ವತ ಫಲಕವನ್ನು ಪಡೆದಿದ್ದಾರೆ.
 ಈ ಸ್ಪರ್ಧೆಯ ಪ್ರಾಯೋಜಕರಾದ ರಾಜ್ಯ ಅಬಕಾರಿ ಸಚಿವ ಸತೀಶ್ ಅನ್ನಾ ಜಾರಕಿಹೊಳಿ ಹಾಗೂ ಮುಂಬೈಯ ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಪದ್ಮಶ್ರೀ ಪ್ರೇಮ್ ಚಂದ್ ಡೇಗ್ರಾ ಮತ್ತು ಚೇತನ್ ಪಠಾರೆ ಮುಂಬೈ ಇವರು ಪ್ರಶಸ್ತಿ ವಿತರಿಸಿದರು. ಕರ್ನಾಟಕ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಅಧ್ಯಕ್ಷ ಡಾ. ಬೆಟ್ಟೇಗೌಡ, ಕಾರ್ಯಾಧ್ಯಕ್ಷ ರವೀಂದ್ರನಾಥ್ ರೈ ಮಂಗಳೂರು, ಪ್ರಧಾನ ಕಾರ್ಯದರ್ಶಿ ಅಜಿತ್ ಸಿದ್ದಣ್ಣನವರ್ ಬೆಳಗಾವಿ, ಕೋಶಾಧಿಕಾರಿ ಪ್ರಕಾಶ್ ಪೂಜಾರಿ ಇದ್ದರು.
 ಮಿ. ಕರ್ನಾಟಕ - 2013 ಪ್ರಶಸ್ತಿ ಗೆದ್ದ ಸೌಜನ್ಯ ಶೆಟ್ಟಿ ಅವರು ಪ್ರಸ್ತುತ ಉಡುಪಿಯ ಮಿಲಿಂದ್ ಯು. ಸಾಲ್ಯಾನ್ ಅವರಿಂದ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ.
ಬಹುಮಾನ ಗೆದ್ದ ಕರಾವಳಿಯ ದೇಹದಾರ್ಢ್ಯಪಟುಗಳು
55 ಕೆ.ಜಿ. ಸಂತೋಷ್ ದ.ಕ. (5ನೇ ಸ್ಥಾನ), 60 ಕೆ.ಜಿ. ಪುರುಷೋತ್ತಮ್ ದ.ಕ. (2ನೇ ಸ್ಥಾನ) ಮತ್ತು ಪೀಟರ್ ನೊರೋನ್ಹ ಉ.ಕ. (4 ನೇ ಸ್ಥಾನ), 65 ಕೆ.ಜಿ. ಆನಂದ ಎಸ್. ಸುವರ್ಣ ಉಡುಪಿ (1ನೇ ಸ್ಥಾನ) ಮತ್ತು ರಾಘವೇಂದ್ರ ಉಡುಪಿ (3ನೇ ಸ್ಥಾನ), 70 ಕೆ.ಜಿ. ರಮೇಶ್ ಕೆ.ಆರ್. (1ನೇ ಸ್ಥಾನ), ರಕ್ಷಿತ್ ಆರ್. ಕೋಟ್ಯಾನ್ ಉಡುಪಿ (4ನೇ ಸ್ಥಾನ), 75 ಕೆ.ಜಿ. ಸೌಜನ್ಯ ಶೆಟ್ಟಿ ಉಡುಪಿ (ಪ್ರಥಮ), 80 ಕೆ.ಜಿ. ನಿತ್ಯಾನಂದ ಕೋಟ್ಯಾನ್ ಉಡುಪಿ (ಪ್ರಥಮ), ಅನಿಲ್ ಉಡುಪಿ (ದ್ವಿತೀಯ), ಮನೀಶ್ ಮಂಜೇಶ್ವರ್ ದ.ಕ. (ತೃತೀಯ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.