ಯಕ್ಷಗಾನ ಅಳಿವು ಸಾಧ್ಯವಿಲ್ಲ: ಕುಂಬ್ಳೆ ಸುಂದರ್ ರಾವ್
ಉಡುಪಿ: ಯಕ್ಷಗಾನ ಕಲೆಯ ಅಳಿವು ಎಂದಿಗೂ ಸಾಧ್ಯವಿಲ್ಲ. ಯಕ್ಷಗಾನ ನಿರಂತರ ಬೆಳವಣಿಗೆಯನ್ನು ಸಾಧಿಸುವುದರ ಜೊತೆಯಲ್ಲಿ ಕಲಾವಿದರನ್ನು ಬೆಳೆಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್ ಹೇಳಿದರು.
ಅವರು ಸೂಡ ಶ್ರೀ ಸುಬ್ರಹ್ಮಣ್ಯ ಯಕ್ಷಕಲಾ ಭಾರತಿ ಇದರ ಆಶ್ರಯದಲ್ಲಿ ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬೆಳ್ಮಣ್ ಜೇಸಿಐ ವೇದಿಕೆಯಲ್ಲಿ ಜರಗಿದ ಆಟ -ಕೂಟ- ಕುದಿಕೂಟ ಯಕ್ಷಗಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಸಿದ್ಧ ಅರ್ಥಧಾರಿಗಳು ಹಾಗೂ ವಿಮರ್ಶಕ ಡಾ.ಎಂ. ಪ್ರಭಾಕರ ಜೋಷಿ, ಜಿ.ಪಂ. ಸದಸ್ಯ ಸುಪ್ರೀತ್ ಶೆಟ್ಟಿ ಕೆದಿಂಜೆ, ತಾ.ಪಂ. ಸದಸ್ಯ ಕ್ಸೇವಿಯರ್ ಡಿ' ಮೆಲ್ಲೋ, ಕುತ್ಯಾರ್ ವಿಜಯ ಬ್ಯಾಂಕ್ ಶಾಖಾ ಪ್ರಬಂಧಕ ಪ್ರಶಾಂತ್ ಶೆಟ್ಟಿ ಸೂಡ, ಸೂಡ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಸೂಡ ಶ್ರೀ ಸುಬ್ರಹ್ಮಣ್ಯ ಯಕ್ಷಕಲಾ ಭಾರತಿ ಇದರ ವ್ಯವಸ್ಥಾಪಕ ರಿತೇಶ್ ಶೆಟ್ಟಿ ಸೂಡ ಇದ್ದರು.
ಈ ಸಂದರ್ಭದಲ್ಲಿ ಸೂಡ ಶ್ರೀ ಸುಬ್ರಹ್ಮಣ್ಯ ಯಕ್ಷಕಲಾ ಭಾರತಿ ಇದರ ಸಂಚಾಲಕ ಸೂಡ ಹರೀಶ್ ಶೆಟ್ಟಿ ಅವರ 48ನೇ ಯಕ್ಷಗಾನ ಕೃತಿ ಮಾಯಕೊದ ಬಿನ್ನೆದಿ ಅನ್ನು ಜಾನಪದ ಸಂಶೋಧಕ ಭಾಸ್ಕರ ರೈ ಕುಕ್ಕುವಳ್ಳಿ ಬಿಡುಗಡೆಗೊಳಿಸಿದರು. ನಿವೃತ್ತ ಶಿಕ್ಷಕ ಕೋಟೆಬೀಡು ರಘುರಾಮ್ ಶೆಟ್ಟಿ ಅವರಿಗೆ ಸ್ಕಂದ ಪುರಸ್ಕಾರ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

