ಉಡುಪಿ

'ಬೆರಗು 2013': ಬ್ರಹ್ಮಾವರ ಎಸ್‌ಎಂಎಸ್‌ಗೆ ಪ್ರಶಸ್ತಿ

Published On :

ಕುಂದಾಪುರ: ಜಾತಿಗಳ ನಡುವೆ ವಿಷಬೀಜ ಬಿತ್ತುವ ಬದಲು ಸಂತಸದಾಯಕ, ನೆಮ್ಮದಿಯ ಬೀಜ ಬಿತ್ತುವುದು ಇಂದಿನ ಅಗತ್ಯ ಎಂದು ಪತ್ರಕರ್ತ ಲಕ್ಷ್ಮಣ ಹೂಗಾರ ಹೇಳಿದ್ದಾರೆ.
ಭಾರತ ವಿದ್ಯಾರ್ಥಿ ಫೆಡರೇಶನ್ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಇಲ್ಲಿನ ವ್ಯಾಸರಾಜ ಕಲಾಮಂದಿರದಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಫರ್ಧೆ 'ಬೆರಗು-2013' ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಶಕ್ತಿಯಾಗಿರುವ ಯುವಶಕ್ತಿಯನ್ನು  ಇಂದು ದಮನಿಸುವ ಶಕ್ತಿಗಳು ಹೆಚ್ಚಾಗಿದೆ. ಈ ಬಗ್ಗೆ ಯುವ ಜನತೆ ಎಚ್ಚರದ ಹೆಜ್ಜೆ ಇಡಬೇಕು ಎಂದರು.
ಬೆರಗು ಸಿದ್ಧತಾ ಸಮಿತಿ ಗೌರವಾಧ್ಯಕ್ಷ ಬಿ.ಎಂ. ನಾಸೀರ್ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷ ಜಗದೀಶ್ ಸೂರ್ಯ, ಎಸ್.ಎಫ್.ಐ.ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಅನಂತ ನಾಯಕ್, ಎಸ್.ಎಫ್.ಐ. ಕುಂದಾಪುರ ಸಮಿತಿ ಅಧ್ಯಕ್ಷ ಗಣೇಶ್‌ದಾಸ್, ಡಿವೈಎಫ್  ಐ ಮುಖಂಡ ರಾಜೇಶ್ ವಡೇರಹೋಬಳಿ ಇದ್ದರು.
ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಸ್ವಾಗತಿಸಿದರು. ಆಫ್ರೀನಾ ನಿರೂಪಿಸಿದರು. ಹರ್ಷ ವಂದಿಸಿದರು.  ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಗುರುದತ್, ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್., ಉದ್ಯಮಿ ದತ್ತಾನಂದ ಗಂಗೊಳ್ಳಿ, ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷ ಜಗದೀಶ್ ಸೂರ್ಯ, ಎಸ್.ಎಫ್.ಐ. ತಾಲೂಕು ಅಧ್ಯಕ್ಷ ಗಣೇಶ್ ದಾಸ್, ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ, ಆಫ್ರೀನ್ ಬೇಗಂ, ಮೀನಾಕ್ಷಿ, ಡಿವೈಎಫ್  ಐ ಮುಖಂಡ ರಾಜೇಶ್ ವಡೇರಹೋಬಳಿ ಇದ್ದರು.
ಸ್ಪರ್ಧೆಯಲ್ಲಿ ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ ತಂಡ ಪ್ರಥಮ, ವೆಂಕಟರಮಣ ಕಾಲೇಜು ದ್ವಿತೀಯ, ಬಿದ್ಕಲ್‌ಕಟ್ಟೆ ಕಾಲೇಜು ತೃತೀಯ 'ಬೆರಗು-2013' ಪ್ರಶಸ್ತಿ ಮುಡಿಗೇರಿಸಿಕೊಂಡವು. ಶ್ರೀ ಶಾರದ ಕಾಲೇಜು ಬಸ್ರೂರು, ತೆಕ್ಕಟೆ ಕಾಲೇಜು, ಕಂಬದಕೋಣೆ ಕಾಲೇಜುಗಳು ಸಮಾಧಾನಕರ ಪ್ರಶಸ್ತಿ ಪಡೆಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.