ಯೇಸು ನಮ್ಮೆಲ್ಲರ ಹೃದಯದಲ್ಲಿ ಇರಬೇಕು: ಡಾ. ಐಸಾಕ್ ಲೋಬೊ
ಉಡುಪಿ: ಯೇಸು ದೇವರು ನೆಮ್ಮೆಲ್ಲರ ಹೃದಯಗಳಲ್ಲಿ ಜನ್ಮ ತಾಳಬೇಕೇ ವಿನಾ ನಾವು ನಿರ್ಮಿಸುವ ಕೃತಕ ಗೋದಲಿಗಳಲ್ಲಿ ಅಲ್ಲ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಕ್ರಿಸ್‌ಮಸ್ ಅಂಗವಾಗಿ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಕ್ರಿಸ್‌ಮಸ್ ಸಂದೇಶವನ್ನು ನೀಡಿದರು. ಯೇಸು ಸ್ವಾಮಿಯು ಬಡ ಮಗನಾಗಿ ಗೋದಲಿಯಲ್ಲಿ ಜನಿಸಿದ್ದು ಮಾತ್ರವಲ್ಲದೆ ಜೀವನದುದ್ದಕ್ಕೂ ಸರಳತೆ, ಪ್ರೀತಿ, ಸಮಾಧಾನದ ಸಂದೇಶವನ್ನು ಜಗತ್ತಿಗೆ ಬೋಧಿಸಿದರು. ವಿಶ್ವಾಸ ಹಾಗೂ ಪ್ರೀತಿಯ ಮೂಲಕ ಶಾಂತಿಯ ದೂತರಾಗೋಣ ಎಂದು ಕರೆ ನೀಡಿದರು.
ಚರ್ಚಿನ ವಠಾರದಲ್ಲಿ ಯೇಸುವಿನ ಜನನದ ಸಂದೇಶವನ್ನು ಸಾರುವ ಬೃಹತ್ ಆಕಾರದ ಗೋದಲಿಗಳು ಪ್ರಮುಖ ಆಕರ್ಷಣೆಯಾಗಿತ್ತು. ಚರ್ಚ್‌ಗಳಲ್ಲಿ ಬಲಿಪೂಜೆಯ ಬಳಿಕ ಕ್ರೈಸ್ತ ಬಾಂಧವರು ಪರಸ್ಪರ ಕ್ರಿಸ್‌ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

