ಅಜೆಕಾರಿನಲ್ಲಿ ಕುರ್ಪಾಡಿ ಆದಿಗ್ರಾಮೋತ್ಸವ
ಹೆಬ್ರಿ: ಸಾಮರಸ್ಯದ ಬದುಕು ನಮ್ಮಲ್ಲಿ ನಿರಂತರವಾಗಿ ನಡೆಯಬೇಕು, ನಾವು ನಮ್ಮ ಜೀವನವನ್ನು ಸನ್ಮಾರ್ಗ ಅಥವಾ ದುಮಾರ್ಗದತ್ತ ಕೊಂಡೊಯ್ಯುತ್ತಿದೇವೆಯೋ ಎಂದು ಅತ್ಮವಲೋಕನ ಮಾಡಿಕೊಳ್ಳಬೇಕು ಎಂದು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನ ಹಳ್ಳಿಯ ಶ್ರೀ ಶಿವ ಸುಜ್ಞಾನಮೂರ್ತಿ ಸ್ವಾಮೀಜಿ ಕರೆ ನೀಡಿದ್ದಾರೆ.
ಅಜೆಕಾರಿನ ಆಕಾಶಬೆಟ್ಟು ಬಾಕಿಮಾರು ಗದ್ದೆಯಲ್ಲಿ ಇತ್ತೀಚೆಗೆ ನಡೆದ ಕುರ್ಪಾಡಿ ಯುವ ವೃಂದದ 12ನೇ ವರ್ಷದ ಆದಿಗ್ರಾಮೋತ್ಸವ ಮತ್ತು ಸಾರ್ವಜನಿಕ ಶ್ರೀ ವಿಶ್ವಕರ್ಮ ಪೂಜೆಯಲ್ಲಿ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಗೋಪಲ ಭಂಡಾರಿ ಮಾತನಾಡಿ ದೊಡ್ಡ ಮನಸ್ಸಿನ ಸಮಾಜಮುಖಿಯ ಆದರ್ಶದ ಕೆಲಸ ಗ್ರಾಮೋತ್ಸವದಿಂದ ನಡೆಯುತ್ತಿದೆ ಎಂದರು.
ಗೌರವ ಪ್ರದಾನ: ಬೆಳಪು ಗ್ರಾಮ ಪಂಚಾಯಿತಿ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಂಡ ಐಕಳಬಾವ ದೇವಿಪ್ರಸಾದ್ ಶೆಟ್ಟಿಗೆ ಆದಿಗ್ರಾಮೋತ್ಸವ ಗೌರವ ಮತ್ತು ಗ್ರಾಮೀಣ ಕ್ರೀಡೆ ಸೈಕಲ್ ಸರ್ಕಸ್ನಲ್ಲಿ ಸಾಧನೆ ಮಾಡಿದ ವಿಜಯ ಕುಮಾರ್ ಕುಂಭಾಶಿಗೆ ಗ್ರಾಮ ಗೌರವ ಮತ್ತು ಅಜೆಕಾರು ಬೊಂಡುಕುಮೇರಿ ಕಂಬಳ ಸಮಿತಿ, ಎಸ್.ಎ.ಹುಸೇನ್ ಮೆಮೋರಿಯಲ್ ಟ್ರಸ್ಟ್ ಕಾರ್ಕಳ ಮತ್ತು ಅಂಡಾರು ಸರ್ಕಾರಿ ಶಾಲಾ ಶತಮಾನೋತ್ಸವ ಸಮಿತಿಗೆ ಸಾಂಸ್ಥಿಕ ಸಾಧನಾ ಗೌರವ, ಜಿಲ್ಲಾ ಮಟ್ಟದಲ್ಲಿ ಗಮನಸೆಳೆದಿರುವ ವೈದ್ಯ ಡಾ.ಚಂದ್ರಿಕಾ ಕಿಣಿ ಮತ್ತು ಸುನಿಲ್ ಕಿಣಿ ದಂಪತಿಗೆ ಗ್ರಾಮೋತ್ಸವ ದಂಪತಿ ಗೌರವ ನೀಡಲಾಯಿತು.
ಯುವ ಸಾಧಕರನ್ನು ಗುರುತಿಸಿ ನೀಡುವ ಗ್ರಾಮೋತ್ಸವ ಯುವ ಗೌರವವನ್ನು ಛಾಯಾಗ್ರಾಹಕ ಮನೋಹರ್ ಎರ್ಮಾಳ್, ಸಿನಿಮಾ ಕ್ಷೇತ್ರದ ದಯಾನಂದ ಕುಲಾಲ್, ಕೃಷಿಕ ರಾಘವೇಂದ್ರ ಕುರ್ಡೆಲ್, ಯಕ್ಷಗಾನ ಕಲಾವಿದ ದಿನೇಶ ಪೂಜಾರಿ ಅಜೆಕಾರು, ಅಂಗನವಾಡಿ ಶಿಕ್ಷಕಿ ಶಕುಂತಳಾ, ಸಮಾಜ ಸೇವಕಿ ಗಾಯತ್ರಿ ಚಾರಾ ಹೆಬ್ರಿ, ಬಹುಮುಖ ಪ್ರತಿಭೆಯ ಕಲಾವಿದೆ ಅನುಷಾ ಮೂಡುಬಿದಿರೆ, ಕೊಪ್ಪ, ನೃತ್ಯಗಾರ್ತಿ ಶ್ವೇತಾ ಬಿ. ಮೂಡುಬಿದಿರೆ, ಪವರ್ ಲಿಫ್ಟರ್ ಅನಿತಾ ಪಿರೇರಾ, ಜಾನಪದ ಕಲಾವಿದೆ ಆರಾಧನಾ ಟಿ.ಕೆ . ಮಂಗಳೂರು, ಸಂಘಟಕ ಗಿರೀಶ್ ಕಾಮತ್ ಅಂಡಾರು, ಸ್ವ ಉದ್ಯಮ ಕ್ಷೇತ್ರದ ಸಾಧಕ ನಜೀರ್ ಶಾ ಮತ್ತು ಬಾಲ ಕಲಾವಿದ ಲಾರೆನ್ ಪಿಂಟೊ, ಇನ್ನ ಪಲಿಮಾರ್ ಮೊದಲಾದವರಿಗೆ ನೀಡಲಾಗುತ್ತದೆ. ಶೇ.100 ಫಲಿತಾಂಶ ದಾಖಲಿಸಿದ ಅಜೆಕಾರು ಚರ್ಚ್ ಶಾಲೆ ಮತ್ತು ಜ್ಯೋತಿ ಜೂನಿಯರ್ ಕಾಲೇಜಿಗೆ ಪ್ರದಾನ ಮಾಡಲಾಯಿತು.
ಆದಿ ಗ್ರಾಮೋತ್ಸವದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಅಹಮ್ಮದ್, ಮುಂಬೈ ಉದ್ಯಮಿ ದೇವಸ್ಯ ಶಿವರಾಮ ಶೆಟ್ಟಿ, ಪಮ್ಮೋಟ್ಟು ಸುಂದರ ಶೆಟ್ಟಿ, ಉದ್ಯಮಿ ಅಂಡಾರು ಮಹಾವೀರ ಹೆಗ್ಡೆ, ಮರ್ಣೆ ಪಂಚಾಯಿತಿ ಅದ್ಯಕ್ಷೆ ಹೀರಾ ಶೆಟ್ಟಿ, ಅಜೆಕಾರು ಠಾಣಾಧಿಕಾರಿ ಡಿ.ಎಂ.ಕುಮಾರ್, ಸಿಯೋನ್ ಆಶ್ರಮದ ಪೌಲೋಸ್, ಕುರ್ಪಾಡಿ ಯುವ ವೃಂದದ ಗೌರವಾಧ್ಯಕ್ಷ ಡಾ.ಸಂತೋಷ್ ಕುಮಾರ್ ಶೆಟ್ಟಿ, ಸಂಘಟಕ ಶೇಖರ ಅಜೆಕಾರು, ಅಧ್ಯಕ್ಷ ದಾಮೋದರ್, ಉಪನ್ಯಾಸಕ ಬೋರ್ಗಲ್ಲುಗುಡ್ಡೆ ಮಂಜುನಾಥ್, ಕುರ್ಪಾಡಿ ಶಂಕರ ಆಚಾರ್ಯ, ಗಿರಿಜಾ ಶಂಕರ ಆಚಾರ್ಯ, ಸೌಮ್ಯಶ್ರೀ ಶೇಖರ್ ಅಜೆಕಾರ್, ಪುರೋಹಿತ್ ಜಿ.ಎಸ್.ಪುರಂದರ ಆಚಾರ್ಯ ಮುನಿಯಾಲ್ ಮುಂತಾದವರು ಇದ್ದರು.
ವೈವಿಧ್ಯಮಯ ಕಾರ್ಯಕ್ರಮಗಳು: ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೊದಲ ಬಾರಿಗೆ ವಿಜಯ ಕುಮಾರ್ ಕುಂಭಾಸಿ ಅವರಿಂದ ಸೈಕಲ್ ಸರ್ಕಸ್, ಹೆಬ್ರಿಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಅನುಷಾ ಶೆಟ್ಟಿ ಮತ್ತು ಅಭಿಲಾಷಾ ಶೆಟ್ಟಿ ಅವರಿಂದ ಹರಿಕಥಾ ಕಾಲಕ್ಷೇಪ, ಶ್ವೇತ ಅವರ ನೃತ್ಯ, ಬಾಲ ಕಲಾವಿದೆ ಆರಾಧನಾ ಎನ್.ಕೆ.ಅವರಿಂದ ಹಾಡುಗಳು, ಲಾರೆನ್ ರಿಂಟೋ ಕಲಾಕೃತಿಗಳ ಪ್ರದರ್ಶನ ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

