ಯುಪಿಸಿಎಲ್ ಪರ ಪ್ರಮೋದ್ ಹೇಳಿಕೆ: ರೈತ ಸಂಘ ಆಕ್ಷೇಪ
ಉಡುಪಿ: ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಅವರು 'ತಾನು ಶಾಸಕನಾಗಿ ಆಯ್ಕೆಯಾದರೆ ಯುಪಿಸಿಎಲ್ ಉತ್ಪಾದಿಸುವ ವಿದ್ಯುತ್ನಲ್ಲಿ ಉಡುಪಿ ಜಿಲ್ಲೆಗೆ ಅಗತ್ಯವಿದ್ದಷ್ಟನ್ನು ಬಳಸಿಕೊಂಡು ಉಳಿದುದನ್ನು ಬೆಂಗಳೂರಿಗೆ ಕಳುಹಿಸುತ್ತೇನೆ' ಎಂಬ ಹೇಳಿಕೆಗೆ ರಾಜ್ಯ ರೈತ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಉಡುಪಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಾನೆಂದು ಹೇಳಿಕೊಳ್ಳುತ್ತಿರುವ ಪ್ರಮೋದ್ ತಮ್ಮ ಈ ಹೇಳಿಕೆ ಮೂಲಕ ತಾನು ಯುಪಿಸಿಎಲ್ ಪರ ಇದ್ದೇನೆ ಎಂದು ಹೇಳಿದಂತಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಹೆಗ್ಡೆ ಟೀಕಿಸಿದ್ದಾರೆ.
ಉಡುಪಿಯಲ್ಲಿ ಯುಪಿಸಿಎಲ್ ಸ್ಥಾಪನೆಯಾದ ಮೇಲೆ ಉಡುಪಿ -ದಕ ಜಿಲ್ಲೆಯ ಜನರು ಬಳಸುವ ವಿದ್ಯುತ್ ಬೆಲೆ ಹೆಚ್ಚಾಗಿದೆ. ಈ ಹಿಂದೆ ವಾರಾಹಿ ಮತ್ತು ಜೋಗದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಬಹಳ ಕಡಿಮೆ ದರದಲ್ಲಿ ಲಭ್ಯವಿತ್ತು. ಈಗ ದುಬಾರಿ ವಿದ್ಯುತ್ ಪೂರೈಕೆ ಮಾಡುತ್ತಿರುವ ಯುಪಿಸಿಎಲ್ ಪರ ಪ್ರಮೋದ್ ಮಾತನಾಡುತ್ತಿದ್ದಾರೆ. ಅವರು ಈ ಹಿಂದೆ ಯುಪಿಸಿಎಲ್ ವಿರುದ್ಧ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ, ಉಚ್ಚಿಲದ ಮಹಾಲಕ್ಷ್ಮೀ ದೇವಾಲಯದಲ್ಲಿ ದೇವಿಯ ಮುಂದೆ ಯುಪಿಸಿಎಲ್ ಹೊಡೆದೊಡಿಸುವ ಬಗ್ಗೆ ಪ್ರಮಾಣ ಮಾಡಿದ್ದು, ಅವರಿಗೆ ಮರೆತು ಹೋದಂತಿದೆ. ಯುಪಿಸಿಎಲ್ನಿಂದಾಗಿ ಸರ್ಕಾರಕ್ಕೆ ಮತ್ತು ಮೆಸ್ಕಾಂಗೆ ವರ್ಷಕ್ಕೆ ಕೋಟ್ಯಂತರ ರು. ನಷ್ಟ ಉಂಟಾಗುತ್ತಿದೆ ಎಂದರು.
ಬಹುಶಃ ಯುಪಿಸಿಎಲ್ ಕಾಂಗ್ರೆಸ್ ಸಂಸದರೊಬ್ಬರ ಒಡೆತನಕ್ಕೆ ಸೇರಿದ್ದು ಎಂಬ ಕಾರಣಕ್ಕೆ ಪ್ರಮೋದ್ ಈ ಸ್ಥಾವರವನ್ನು ಬೆಂಬಲಿಸುತ್ತಿದ್ದಾರೆ ಎಂದು ಹೆಗ್ಡೆ ಆರೋಪಿಸಿದ್ದಾರೆ. ಮಾತ್ರವಲ್ಲ, ತಮ್ಮ ಈ ಟೀಕೆ, ಆರೋಪಗಳಿಗೆ ಪ್ರಮೋದ್ ಜನತೆಯ ಮುಂದೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

