'ಚಿನ್ನ'ದ ಹುಡುಗಿ ಸುನಿತಾಗೆ ಸ್ವಾಗತ
ಉಡುಪಿ: ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದ ಚಳಿಗಾಲದ ವಿಶೇಷ ಒಲಿಂಪಿಕ್ಸ್ನ ಫ್ಲೋರ್ ಹಾಕಿ ಕ್ರೀಡೆಯಲ್ಲಿ ಚಿನ್ನ ಗೆದ್ದ ಭಾರತ ತಂಡದ ಆಟಗಾರ್ತಿ, ಇಲ್ಲಿನ ಬೆಳ್ಳೆ ಗ್ರಾಪಂನ ಪಾಂಬೂರು ಮಾನಸ ಪುನವರ್ಸತಿ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿನಿ ಸುನಿತಾ ಲೋಬೊ ಅವರನ್ನು ಶನಿವಾರ ಹಾರ್ದಿಕವಾಗಿ ಉಡುಪಿಗೆ ಸ್ವಾಗತಿಸಲಾಯಿತು.
ಕಟಪಾಡಿ ಬಸ್ ನಿಲ್ದಾಣಕ್ಕೆ ಬಂದಿಳಿದ ಸುನಿತಾರನ್ನು ಜಿಲ್ಲೆಯ ನಾಗರಿಕರ ಪರವಾಗಿ ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಹೂಹಾರ ಹಾಕಿ ಬರಮಾಡಿಕೊಂಡು, ಈ ಕ್ರೀಡಾ ಪ್ರತಿಭೆಯ ಸಾಧನೆಯನ್ನು ಅಭಿನಂದಿಸಿದರು.
ಮೆರವಣಿಗೆ: ಸಂತೋಷ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದ ಸುನಿತಾ ಲೋಬೊ ಅವರನ್ನು ಮಾನಸ ಸಂಸ್ಥೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ದಾರಿ ಮಧ್ಯದಲ್ಲಿ ಹಲವಾರು ಅಭಿಮಾನಿಗಳು ಸುನಿತಾ ಲೋಬೊಗೆ ಹಾರಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು.
ಜಿ.ಪಂ. ಸದಸ್ಯರಾದ ಐಡಾ ಗಿಬ್ಬಾ ಡಿಸೋಜಾ, ಗೀತಾಂಜಲಿ ಸುವರ್ಣ, ತಾ.ಪಂ. ಮಾ ಅಧ್ಯಕ್ಷ ಕಟ್ಟಿಗೇರಿ ದೇವದಾಸ್ ಹೆಬ್ಬಾರ್, ಜಿ.ಪಂ. ಮಾಜಿ ಸದಸ್ಯ ಜೆರಾಲ್ಡ್ ಫೆರ್ನಾಂಡಿಸ್, ಸುನಿತಾ ಲೋಬೊ ಅವರ ತಾಯಿ ಹೆಲೆನ್ ಲೋಬೊ, ಸಹೋದರ, ಸಹೋದರಿಯರು, ಮಾನಸ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸುನಿತಾರನ್ನು ಹಾರ್ದಿಕವಾಗಿ ಸ್ವಾಗತಿಸಿದರು.
ಬಳಿಕ ಮಾನಸ ಸಂಸ್ಥೆಯಲ್ಲಿ ಜರುಗಿದ ಅಭಿನಂದನಾ ಸಮಾರಂಭವನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿ, ಇಂತಹ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವ ಮಾನಸ ಕೇಂದ್ರವನ್ನು ಅಭಿನಂದಿಸಿದರು ಮತ್ತು ತಮ್ಮ ವೈಯುಕ್ತಿಕವಾಗಿ ಸಂಸ್ಥೆಗೆ ರು. 10 ಸಾವಿರ ದೇಣಿಗೆ ನೀಡಿದರು. ಸಂಸ್ಥೆಯ ಪರವಾಗಿ ಸುನಿತಾ ಲೋಬೊ ಅವರನ್ನು ಸ್ಥಳೀಯ ಪಾಂಬೂರು ಚರ್ಚ್ ಧರ್ಮಗುರು ಚಾರ್ಲ್ಸ್ ಲೂವಿಸ್ ಸನ್ಮಾನಿಸಿ, ಆಶೀರ್ವಚನ ನೀಡಿದರು.
ಮಾಜಿ ಸಚಿವ ವಸಂತ್ ವಿ. ಸಾಲ್ಯಾನ್, ಹೆಲೆನ್ ಲೋಬೊ, ಕೆಥೊಲಿಕ್ ಸಭಾ ಉಡುಪಿ ಪ್ರಾಂತ್ಯದ ಅಧ್ಯಕ್ಷ ವಿಲಿಯಂ ಮಚಾದೊ, ನಿಯೋಜಿತ ಅಧ್ಯಕ್ಷ ಎಲ್ರೊಯ್ ಕಿರಣ್ ಕ್ರಾಸ್ಟೊ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಚ್ಚಿದಾನಂದ ಭಟ್, ಉದ್ಯಮಿ ರೊಕಿ ಡಿಸಿಲ್ವಾ, ಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ತೆಲ್ಮಾ, ಅಧ್ಯಕ್ಷೆ ರೆಮೆಡಿಯಾ ಡಿಸೋಜಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

