ಉಡುಪಿ

ಭೂಮಿ ನೋಂದಣಿ ಬಾಕಿ: ಸದನದಲ್ಲಿ ಚರ್ಚೆ

Published On :

ಹೆಬ್ರಿ: ಕಾರ್ಕಳ ತಾಲೂಕಿನಾದ್ಯಂತ ಗೃಹೋಪಯೋಗಿ ಪರಿವರ್ತಿತ ಭೂಮಿ ನೋಂದಾವಣಾಧಿಕಾರಿ ಕಚೇರಿಯಲ್ಲಿ ಕಳೆದ ಹಲವು ಸಮಯಗಳಿಂದ ನೋಂದಾವಣೆಯಾಗದೆ ಬಾಕಿ ಉಳಿದಿದ್ದು ಈ ಬಗ್ಗೆ ಸೋಮವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಚರ್ಚೆ ನಡೆಸಿ ಸಮಸ್ಯೆಯ ಇತ್ಯರ್ಥಕ್ಕೆ ಮನವಿ ಮಾಡಿರುವುದಾಗಿ ಶಾಸಕ ಗೋಪಾಲ ಭಂಡಾರಿ ತಿಳಿಸಿದ್ದಾರೆ. ಸಮಸ್ಯೆ ಆಲಿಸಿದ ರಾಜ್ಯದ ಕಂದಾಯ ಸಚಿವರು ಮತ್ತು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅತಿ ಶೀಘ್ರವಾಗಿ ತಾಲೂಕಿನ ಜಾಗದ ನೋಂದಾವಣೆಯ ತೊಡಕು ನಿವಾರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ದಿ.ಸುಬ್ರಹ್ಮಣ್ಯ ಅರಸುಗೆ ಶ್ರದ್ಧಾಂಜಲಿ
ಕುಂದಾಪುರ: ತಮ್ಮ ಮರಣಾನಂತರ ದೇಹವನ್ನು ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಉಪಯೋಗಕ್ಕೆ ದಾನ ಮಾಡಿ ಇತ್ತೀಚೆಗೆ ನಿಧನರಾದ ಇಲ್ಲಿನ ಸಮಾಜಸೇವಕ ಸುಬ್ರಹಣ್ಯ ಅರಸು ಅವರಿಗೆ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಮೂಡುಗೋಪಾಡಿ ಅವರು ದಿವಂಗತರ ಗುಣಗಾನ ಮಾಡಿದರು. ದೇವಳದ ಕಾರ್ಯ ನಿರ್ವಹಣಾಧಿಕಾರಿ ಗಣೇಶ್ ರಾವ್ ಹಾಗೂ ದೇವಳದ ವ್ಯವಸ್ಥಾಪನ ಸಮಿತಿ ಸದ್ಯಸರು ಇದ್ದರು. ಫ್ರೆಂಡ್ಸ್ ವತಿಯಿಂದ ಶ್ರದ್ಧಾಂಜಲಿ: ದಿ. ಅರಸ್ ಅವರಿಗೆ ಸ್ಥಳೀಯ ಬಂಡಿಕಡು ಬೊಬ್ಬರ್ಯ ದೇವಸ್ಥಾನ ವಠಾರದಲ್ಲಿ ಹೊದ್ರಾಳಿ ಫ್ರೆಂಡ್ಸ್ ಆಶ್ರಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಂಡಿಕಡು ಬೊಬ್ಬರ್ಯ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುಖಂಡರಾದ ಪಂಚಾಯಿತಿ ಸದಸ್ಯ ರವೀಂದ್ರ ದೊಡ್ಮನೆ ಮತ್ತು ಸ್ಥಳೀಯ ಗಣ್ಯರು ಇದ್ದರು. ಕಾರ್ಯದರ್ಶಿ ನಿರೂಪಿಸಿ, ಸ್ವಾಗತಿಸಿದರು. ಮರಳೀಧರ ವಂದಿಸಿದರು.

ಶಾಂತಿ ನಗರದಲ್ಲಿ ನಾಮಫಲಕ ಅನಾವರಣ
ಕುಂದಾಪುರ: ಶಾಂತಿ ಸೌಹಾರ್ದತೆಯ ನೆಲಬೀಡು ಈ ಮೂಡು ಗೋಪಾಡಿ. ಇದು ಸರ್ವ ಜನಾಂಗದ ಶಾಂತಿಯ ತೋಟ. ಈ ಪರಿಸರದ ಹೃದಯ ಭಾಗದ ಒಂದು ಭಾಗಕ್ಕೆ ಶಾಂತಿ ನಗರ ಎಂದು ನಾಮಕರಣ ಮಾಡಿರುವುದು ಸಮಂಜಸವಾದದ್ದು ಎಂದು ನಿವೃತ್ತ ಸಬ್ ರಿಜಿಸ್ಟ್ರಾರ್ ಅರುಣ ಕಲಗುಜ್ಜೀಕರ್ ಹೇಳಿದರು. ಬೀಜಾಡಿಯಿಂದ ಮೂಡುಗೋಪಾಡಿಗೆ ತೆರಳುವ ತಿರುವಿನಲ್ಲಿ ಶಾಂತಿನಗರ ಎಂಬ ನಾಮಫಲಕವನ್ನು ಅನಾವರಣ ಮಾಡಿ ಮಾತನಾಡಿದರು.  ಇದೇ ಸಂದರ್ಭ ನಾಮಫಲಕವನ್ನು ಕೊಡುಗೆಯಾಗಿ ನೀಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಪುಂಡಲೀಕ ಗಾಣಿಗರನ್ನು ಸಾರ್ವಜನಿಕರ ಪರವಾಗಿ ಅಭಿನಂದಿಸಲಾಯಿತು. ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಮೂಡುಗೋಪಾಡಿ, ಕೋಟೇಶ್ವರ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಮೂಡು ಗೋಪಾಡಿ ಶಾಲಾ ಮುಖ್ಯ ಶಿಕ್ಷಕ ರಾಮ ಪೂಜಾರಿ, ಉದ್ಯಮಿ ವಾಸುದೇವ ಪ್ರಭು, ಗೋಪಾಡಿ ಚಂದನ ಯುವಕ ಮಂಡಲ ಸಂಘಟಕ ಗಿರೀಶ್ ಉಪಾಧ್ಯ, ಉದ್ಯಮಿ ಜಿ. ಮಹಮ್ಮದ್ ಸಾಹೇಬ್ ಬೂಡುಗೋಪಾಡಿ ಇದ್ದರು. ಶಿಕ್ಷಕ ರವಿ ಕಟ್ಕರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮನೆ ದುರಸ್ತಿ ಯೋಜನೆ ಸಹಾಯಧನ ವಿತರಣೆ
ಸಾಣೂರು: ಗ್ರಾ.ಪಂ. ವತಿಯಿಂದ ಇಂದಿರಾ ಆವಾಜ್ ಕಚ್ಚಾ ಮನೆ ದುರಸ್ತಿ ಯೋಜನೆಯಲ್ಲಿ ಗ್ರಾಮದ ಸಾಂತಾಯಿಬೆಟ್ಟು ನಿವಾಸಿ ಜೈನಾಬಿ ಇವರಿಗೆ ರೂಪೈ ರು. 15,000 ಚೆಕ್ ಅನ್ನು ಸಾಣೂರು ಗ್ರಾ.ಪಂ. ಅಧ್ಯಕ್ಷರಾದ ಕರುಣಾಕರ ಎಸ್. ಕೋಟ್ಯಾನ್ ಹಸ್ತಾಂತರಿಸಿದರು. ಕಾರ್ಕಳದ ಮಾಜಿ ಶಾಸಕ ವಿ. ಸುನಿಲ್ ಕುಮಾರ್, ಸಾಣೂರು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್, ಪಂ. ಸದಸ್ಯರಾದ ಶ್ರೀ ಯುವರಾಜ್ ಜೈನ್, ಎಪಿಎಂಸಿ ಸದಸ್ಯರಾದ ರಘುಚಂದ್ರ ಜೈನ್, ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷರಾದ ಶ್ರೀ ಮಹಾವೀರ್ ಜೈನ್, ಯುವಮೋರ್ಚಾ ಕಾರ್ಯದರ್ಶಿ ನವೀನ್ ನಾಯಕ್, ಸ್ಥಳೀಯರಾದ ಸಂತೋಷ್ ಬಂಗೇರ, ಸಂತೋಷ್ ಸುವರ್ಣ, ಸಂದೀಪ್ ಕೋಟ್ಯಾನ್, ಸತೀಶ್ ಬಂಗೇರ, ಶ್ರೀ ಹರಿ, ಪ್ರವೀಣ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.