ಆಹಾರ ಭದ್ರತಾ ಕಾಯ್ದೆ ಜಾರಿ ಆಗ್ರಹಿಸಿ ಸಿಪಿಎಂ ಧರಣಿ
ಉಡುಪಿ: ಸಾರ್ವತ್ರಿಕ ವಿತರಣಾ ನೀತಿಯಡಿ ಆಹಾರ ಭದ್ರತಾ ಕಾಯ್ದೆ ತಕ್ಷಣ ಜಾರಿ ಆಗ್ರಹಿಸಿ ಸಿಪಿಎಂ ಮಂಗಳವಾರ ನಗರದಲ್ಲಿ ಸಹಿ ಸಂಗ್ರಹಣಾ ಅಭಿಯಾನ ನಡೆಸಿತು.
ದಿನದಿಂದ ದಿನಕ್ಕೆ ಬೆಲೆ ಏರುತ್ತಿರುವ ಸಂದರ್ಭ ಬಡಜನರು ತತ್ತರಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಪಡಿತರ ಮೂಕ ಕಡಿಮೆ ದರದಲ್ಲಿ ನೀಡಿದರೆ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತದೆ. ಆದರೆ ಆಹಾರ ಭದ್ರತಾ ಕಾಯಿದೆ ಜಾರಿಗೆ ತರಲು ಯೋಜಿಸುತ್ತಿರುವ ಕೇಂದ್ರ ಸರ್ಕಾರ, ಎಪಿಎಲ್ ಬಿಪಿಎಲ್ ಎಂದು ವಿಂಗಡಿಸಿ ಅಸಂಖ್ಯಾತ ಬಡ, ಮಧ್ಯಮ ವರ್ಗದ ಜನರನ್ನು ಪಡಿತರದಿಂದ ವಂಚಿಸಿದೆ ಎಂದು ಸಿಪಿಎಂ ಆರೋಪಿಸಿದೆ.
ಎಪಿಎಲ್ ಬಿಪಿಎಲ್ ವಿಂಗಡಣೆ ಕೈಬಿಡಬೇಕು, ಕೆಜಿಗೆ 2 ಮೀರದ ದರದಲ್ಲಿ ಪ್ರತಿಯೊಂದು ಕುಟುಂಬಕ್ಕೆ ತಿಂಗಳಿಗೆ 25 ಕೆಜಿ ಆಹಾರ ಧಾನ್ಯಗಳನ್ನು ಒದಗಿಸಬೇಕು ಮತ್ತು ಆಹಾರ ಭದ್ರತಾ ಕಾಯಿದೆಯಲ್ಲಿ ಇದನ್ನು ಒಳಪಡಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಧಾನ್ಯ ಒದಗಿಸುವ ಬದಲಾಗಿ ನಗದು ವರ್ಗಾವಣೆ ಮಾಡುವ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.
ಸಹಿ ಸಂಗ್ರಹಿಸಿ ಪಿಎಂಗೆ ಸಲ್ಲಿಕೆ: ಈ ಎಲ್ಲ ಹಿನ್ನಲೆಯಲ್ಲಿ ಸಿಪಿಎಂ ಮತ್ತು ಎಡಪಕ್ಷಗಳು ಈ ಕೆಳಗಿನ ಬೇಡಿಕೆ ಮುಂದಿಟ್ಟು ದೇಶಾದ್ಯಂತ ಐದು ಕೋಟಿ ಜನರ ಸಹಿ ಸಂಗ್ರಹಿಸಿ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಉಡುಪಿಯ ಗಾಂಧಿ ವೃತ್ತದಲ್ಲಿ ಸಂಗ್ರಹಣಾ ಅಭಿಯಾನ ನಡೆಸಲಾಯಿತು. ಈ ಅಭಿಯಾನದಲ್ಲಿ ಸುಮಾರು 1200 ಜನ ಸಹಿ ಮಾಡಿದ್ದು ಇಡೀ ಜಿಲ್ಲೆಯಲ್ಲಿ 10 ಸಾವಿರ ಹೆಚ್ಚು ಜನರು ಮನವಿಗೆ ಸಹಿ ಮಾಡಿದ್ದಾರೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಮತ್ತು ಜಿಲ್ಲಾ ಕಾರ್ಯದರ್ಶಿ ಪಿ. ವಿಶ್ವನಾಥ ರೈ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

