ಶಾಸನ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ
ಉಡುಪಿ: ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಕೋರಿ ವಿಧಾನ ಸಭೆಯಲ್ಲಿ ಚರ್ಚೆಯ ಸಂದರ್ಭ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಕರಾವಳಿಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ನೈತಿಕ ಪೊಲೀಸ್ ಹಾವಳಿ ತಪ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿರುವುದಕ್ಕೆ ಉಡುಪಿ ಜಿಲ್ಲಾ ಹಿಂದೂ ಯುವಸೇನೆ ಆಕ್ಷೇಪ ವ್ಯಕ್ತಪಡಿಸಿದೆ.
ಶಾಸನ ಸಭೆಯಲ್ಲಿ ಈ ಪದ ಬಳಕೆಯಿಂದ ಪೊಲೀಸ್ ಇಲಾಖೆ 'ಅನೈತಿಕವೇ' ಎಂಬ ಪ್ರಶ್ನೆ ಹುಟ್ಟುತ್ತದೆ. ಆದ್ದರಿಂದ ಸದನದ ಕಡತದಿಂದ ಈ ಪದವನ್ನು ತೆಗೆದು ಹಾಕುವಂತೆ ಹಾಗೂ ಈ ಪದ ಬಳಕೆಯ ಕುರಿತು ಸಭಾಪತಿ ಅವರಲ್ಲಿ ವಿವರಣೆ ಕೋರಿ ಪತ್ರ ಬರೆದಿರುವುದಾಗಿ ಯುವಸೇನೆ ತಿಳಿಸಿದೆ.
ವಿಪಕ್ಷ ನಾಯಕರ ಗುರಿ ಹಿಂದೂ ಸಂಘಟನೆಗಳು ಎಂಬುದು ಸ್ಪಷ್ಟ, ಹಿಂದೂ ಸಂಘಟನೆಗಳು ನೈತಿಕತೆಯ ವಕ್ತಾರರು ಎಂಬುದನ್ನು ಒಪ್ಪಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ವಂದನೆ ಸಲ್ಲಿಸಬಹುದಾದರೂ, ಇದರಿಂದ ಪೊಲೀಸ್ ಇಲಾಖೆ ಅನೈತಿಕ ಎಂಬರ್ಥದ ಸಂದೇಶವೂ ಹೊರಡುತ್ತದೆ. ಇದು ಪೊಲೀಸ್ ಇಲಾಖೆಯನ್ನು ಅವಮಾನಿಸಿದಂತಾದೀತು. ವಾಸ್ತವದಲ್ಲಿ ಈ ನೈತಿಕ ಪೊಲೀಸ್ ಪದ ಮಾಧ್ಯಮಗಳ ಸೃಷ್ಟಿ. ಇದನ್ನು ಸದನದಲ್ಲಿ ಬಳಸುವುದು ತಪ್ಪಾಗುತ್ತದೆ. ಆದ್ದರಿಂದ ಕಡತದಿಂದ ಸಿದ್ದರಾಮಯ್ಯ ಬಳಸಿದ ಪದವನ್ನು ತೆಗೆದು ಹಾಕುವಂತೆ ವಿನಂತಿಸಲಾಗುವುದು. ಬೇಕಾದರೆ ಆ ಜಾಗದಲ್ಲಿ 'ಹಿಂದೂ ಸಂಘಟನೆಗಳು' ಎಂಬ ಶಬ್ದ ಪ್ರಯೋಗಿಸಲಿ, ಈ ಬಗ್ಗೆ ಆಕ್ಷೇಪವಿಲ್ಲ ಎಂದು ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷ ವಾಸುದೇವ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

