ಹೈದರಾಬಾದ್ ಸರಣಿ ಸ್ಫೋಟ: ಖಂಡನೆ
ಉಡುಪಿ: ಇತ್ತೀಚೆಗೆ ಹೈದರಾಬಾದ್ನಲ್ಲಿ ಸಂಭವಿಸಿದ ಸರಣಿ ಸ್ಫೋಟವು ಹಲವು ಜನರ ಸಾವು ನೋವಿಗೆ ಕಾರಣವಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಬಗ್ಗೆ ಕೇಂದ್ರ ಸರ್ಕಾರಕ್ಕೆ 2 ದಿನ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಕೂಡ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದಿರುವ ಕ್ಯಾಂಪಸ್ ಫ್ರೆಂಟ್ ಉಡುಪಿ ಜಿಲ್ಲಾ ಘಟಕವು, ಈ ಬಾಂಬ್ ಸ್ಫೋಟ ಹಾಗೂ ಸರ್ಕಾರ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ನೈಜ ತನಿಖೆ ಮಾಡಿ ನಿಜವಾದ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದೆ.
ಪ್ರಾಣಯೋಗ ಉಚಿತ ಶಿಬಿರ
ಬ್ರಹ್ಮಾವರ: ಇಲ್ಲಿನ ಪತಂಜಲಿ ಯೋಗ ಪೀಠ ಹರಿದ್ವಾರ ಮತ್ತು ಜಯಂಟ್ಸ್ ಗ್ರೂಪ್ ಇವರ ಸಹಭಾಗಿತ್ವದಲ್ಲಿ ಬಾಬಾ ಶ್ರೀರಾಮದೇವಜಿ ಮಹಾರಾಜ್ ಅವರಿಂದ ತರಬೇತಿಗೊಂಡ ಸದಾನಂದ ರಾಯ ಇವರಿಂದ ಒಂದು ವಾರ ಅವಧಿಯ ಉಚಿತ ಪ್ರಾಣಯೋಗ ಶಿಬಿರವು ಬ್ರಹ್ಮಾವರದ ಬೋರ್ಡ್ ಶಾಲಾ ವಠಾರದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಪತ್ರಕರ್ತ ಪ್ರವೀಣ್, ಸುಬ್ರಹ್ಮಣ್ಯ ಯಾದವ್, ಜಯಂಟ್ಸ್ ಗ್ರೂಪ್ ಸಂಸ್ಥೆಯ ವಿವೇಕ್ ಕಾಮತ್, ಮಧುಸೂದನ್ ಹೇರೂರು, ಮಧುಸೂದನ್ ಪೈ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

