ತ್ಯಾಜ್ಯ ಸಂಗ್ರಹಕ್ಕೆ ಸ್ವೈಪ್ ಕಾರ್ಡ್!
ಜಿತೇಂದ್ರ ಕುಂದೇಶ್ವರ
ಮಂಗಳೂರು: ಕಚೇರಿ ಕೆಲಸ ಹಾಜರಾತಿಗೆ ಕಾರ್ಡ್ ಸ್ವೈಪ್ ಮಾಡುವುದು ಕೇಳಿದ್ದೀರಿ, ಇದೇ ಪದ್ಧತಿಯನ್ನು ಮಹಾನಗರದ ಹೊಟೇಲ್, ಮಟನ್, ಚಿಕನ್ ಸ್ಟಾಲ್ಗಳ ಮಾಂಸ ತ್ಯಾಜ್ಯ ವಿಲೇವಾರಿಗೆ ಅಳವಡಿಸಲಾಗಿದೆ.
ಮಹಾನಗರದಲ್ಲಿರುವ ಎಲ್ಲ ಹೊಟೇಲ್, ಬಾರ್ ಎಂಡ್ ರೆಸ್ಟೋರೆಂಟ್, ಜ್ಯೂಸ್ ಸೆಂಟರ್, ಕ್ಯಾಂಟೀನ್, ಕ್ಯಾಟರಿಂಗ್, ಫಾಸ್ಟ್ಫುಡ್, ಚಿಕನ್, ಮಟನ್ ಸ್ಟಾಲ್ಗಳಿಗೆ ವಾಹನ ತೆರಳಿ ತ್ಯಾಜ್ಯ ಸಂಗ್ರಹಿಸುತ್ತದೆ. ಅದಕ್ಕಾಗಿ ಪ್ರತಿ ಹೊಟೇಲ್, ಸ್ಟಾಲ್ಗಳ ಮಾಲೀಕರಿಗೆ ಆರ್ಎಫ್ಐಡಿ (ರೇಡಿಯೋ ಸಿಕ್ವೆನ್ಸಿ ಐಡೆಂಪಿಕೇಶನ್ ಡಿವೈಸ್) ಟ್ಯಾಗ್ ಕಾರ್ಡ್ ನೀಡಲಾಗುತ್ತದೆ.
ಕಸ ಸಂಗ್ರಹ ವಾಹನಕ್ಕೆ ಜಿಪಿಎಸ್ ಅಳವಡಿಸಿ, ವೆಬ್ಸೈಟ್ಗೆ ಅಪ್ಲೋಡ್ ಆಗಿರುತ್ತದೆ. ಮಾರ್ಗ ನಕ್ಷೆ ರೂಪಿಸಲಾಗಿದ್ದು, ಕಸ ಸಂಗ್ರಹಿಸಿದ ತಕ್ಷಣ ಮಾಲೀಕ ಕಾರ್ಡ್ ಸ್ವೈಪ್ ಮಾಡಬೇಕು. ಕಸ ಸಂಗ್ರಹಿಸದಿದ್ದರೆ ಎಸ್ಎಂಎಸ್ ಮಾಡಬಹುದು. ಮಾಲೀಕರಿಗೆ ಎಸ್ಎಂಎಸ್ ಕಳುಹಿಸಬೇಕಾದ ಮೊಬೈಲ್ ನಂಬರ್ ಕೂಡಾ ನೀಡಲಾಗಿದೆ. ಆ ಯೋಜನೆ ಪಾಲಿಕೆ ಹೊಸ ಯೋಜನೆ ಮಾರ್ಚ್ ಆರಂಭದಲ್ಲಿ ಕಾರ್ಯರೂಪಕ್ಕೆ ಬರಲಿದೆ.
ತ್ಯಾಜ್ಯವನ್ನು ಎಲ್ಲೆಲ್ಲೊ ಹಾಕುವುದರಿಂದ ಸಮಸ್ಯೆ ಉಂಟಾಗುತ್ತಿತ್ತು. ಇದು ನಗರದ ಸೌಂದರ್ಯಕ್ಕೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ಮಹಾನಗರವನ್ನು ಸ್ವಚ್ಛನಗರ ರೂಪಿಸಲು ಪಾಲಿಕೆ ಆಡಳಿತ ಮುಂದಾಗಿದೆ.
'ಕಸ ಸಂಗ್ರಹ ವಾಹನಕ್ಕೆ ಜಿಪಿಎಸ್ ಅಳವಡಿಸುವುದರಿಂದ ವಾಹನ ಎಲ್ಲಿ ಹೋಗಿದೆ, ಹೋಗುತ್ತದೆ ಎಂಬುದನ್ನು ಪಾಲಿಕೆ ಕಚೇರಿಯಲ್ಲಿಯೇ ನೋಡಬಹುದು. ಎಷ್ಟು ಕಡೆ ಹೋಗಿ ಕಸ ಸಂಗ್ರಹಿಸಿದ್ದಾರೆ ಎಂಬ ಆಧಾರದ ಮೇಲೆ ಅವರಿಗೆ ಹಣ ಸಂದಾಯವಾಗಲಿದೆ. ಹಿಂದೆ ಖಾಸಗಿ ವಿಲೇವಾರಿ ಮಾಡುತ್ತಿದ್ದರು, ಇದರ ಅರ್ಧ ವೆಚ್ಚದಲ್ಲಿ ಆಗುತ್ತದೆ.
ಮೈಸೂರಲ್ಲಿ ನರ್ಮ್ ಯೋಜನೆಯಡಿ ಚಿಕನ್ ಮತ್ತು ಮಟನ್ ಮಳಿಗೆಗಳಿಂದ ಜಿಪಿಎಸ್ ಅಳವಡಿಸಿ ಕಸ ಸಂಗ್ರಹಿಸುತ್ತಿದ್ದರು, ಆದರೆ ಅಲ್ಲಿ ಕಾರ್ಡ್ ಸ್ವೈಪ್ ಸಿಸ್ಟಮ್ ಇರಲಿಲ್ಲ' ಎನ್ನುತ್ತಾರೆ ಆಯುಕ್ತ ಡಾ.ಹರೀಶ್ ಕುಮಾರ್.
ಕಸದ ಬುಟ್ಟಿಗಳಲ್ಲಿ ಮಾಂಸ, ಅನ್ನ ಹಾಕುತ್ತಾರೆ, ನಾಯಿಗಳು, ಹಕ್ಕಿಗಳು ಬರುತ್ತವೆ ಎಂಬ ದೂರು ಬರುತ್ತಿತ್ತು. ಕಂಟೈನರ್ ಹೊರಗೂ ಕಸ ಚೆಲ್ಲುತ್ತಿತ್ತು. ಕೊಳೆತ ಆಹಾರದಿಂದ ರೋಗಾಣುಗಳು ಬೆಳೆದು ಆನಾರೋಗ್ಯಕರ ವಾತಾವರಣ ಉಂಟಾಗುತ್ತದೆ ಇನ್ನು ಮುಂದೆ ಈ ಸಮಸ್ಯೆಗಳಿಲ್ಲ ಎನ್ನುತ್ತಾರೆ ಆಯುಕ್ತರು.
ಮನೆ ಮನೆ ಕಸ ಸಂಗ್ರಹ: ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ಕೆಲಸ ಸಾಗುತ್ತಿದೆ. ನಗರದ ಬಹುತೇಕ ಮನೆಗಳಿಗೆ ಹೋಗಿದ್ದೇವೆ. ಕಸ ಸಂಗ್ರಹಕ್ಕೆ ಬಂದಿಲ್ಲ ಎಂಬ ಎಸ್ಎಂಎಸ್ ಸಂದೇಶವೂ ಬರುತ್ತಿದೆ. ಕೆಲವರು ಶುಲ್ಕ ನೀಡುತ್ತಿಲ್ಲ. ಇನ್ನು ಮುಂದೆ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಶುಲ್ಕ ವಸೂಲಿ ಮಾಡುತ್ತೇವೆ ಎನ್ನುತ್ತಾರೆ ಆಯುಕ್ತರು.
'ಈ ರೀತಿಯ ಯೋಜನೆ ಸಿದ್ಧಪಡಿಸಿದ್ದಕ್ಕೆ ಹೊಟೇಲ್ ಮಾಲೀಕರು ವ್ಯಾಪಕ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಮಂಗಳೂರು ಮಹಾ ನಗರ ಸ್ವಚ್ಛ ನಗರ ಎಂದು ದೇಶದಲ್ಲಿಯೇ ಮಾದರಿ ಯಾಗಲಿದೆ' ಎನ್ನುತ್ತಾರೆ ಜಂಟಿ ಆಯುಕ್ತ ಶ್ರೀಕಾಂತ್ ರಾವ್.
1875 ಆಹಾರ ಮಳಿಗೆ 250 ಮಾಂಸ ಮಳಿಗೆ
ಮಂಗಳೂರಲ್ಲಿ ಹೊಟೇಲ್, ಬಾರ್, ಕ್ಯಾಂಟೀನ್, ಪಾಸ್ಟ್ಫುಡ್, ಕ್ಯಾಟರಿಂಗ್, ಕಲ್ಯಾಣ ಮಂಟಪ, ಜ್ಯೂಸ್ ಸೆಂಟರ್ಗಳ ಒಟ್ಟು ಸಂಖ್ಯೆ 1670, ಸುರತ್ಕಲ್ ಉಪ ವಿಭಾಗದಲ್ಲಿ 205. ಇವುಗಳಿಗೆ ಮೂರು ಸ್ಲಾಬ್ನಲ್ಲಿ ದರ ವಿಧಿಸಲಾಗಿದೆ. ಸಣ್ಣ ಸಂಸ್ಥೆಗೆ 600, ಮಧ್ಯಮ 900, ದೊಡ್ಡ ಪ್ರಮಾಣದ ಸಂಸ್ಥೆಗಳಿಗೆ 1800 ಚಾರ್ಜ್ ಮಾಡುತ್ತೇವೆ. ಕಲ್ಯಾಣ ಮಂಟಪಕ್ಕೆ 2 ಸಾವಿರ, 250 ಚಿಕನ್ - ಮಟನ್ ಸ್ಟಾಲ್ ಗಳಿವೆ 1,500ರಿಂದ 3700ರವರೆಗೆ ಶುಲ್ಕ ವಿಧಿಸಲಾಗಿದೆ ಎಂದು ಪಾಲಿಕೆ ಎಂಜಿನಿಯರ್ ಮಧು ವಿವರ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

