'ಯುವಶಕ್ತಿ ಬಳಕೆಗೆ ಸೂಕ್ತ ಮಾರ್ಗದರ್ಶನ ಅಗತ್ಯ'
ಉಡುಪಿ: ಭಾರತ ಶೇ. 70ರಷ್ಟು ಯುವಶಕ್ತಿಯನ್ನು ಹೊಂದಿದೆ. ಈ ಯುವಶಕ್ತಿಯ ಬಳಕೆಗೆ ಯುಕ್ತ ಮಾರ್ಗದರ್ಶನದ ಅಗತ್ಯ ಇದೆ ಎಂದು ಇಲ್ಲಿನ ಶಾರದಾ ರೆಸಿಡೆಸ್ಸಿಯಲ್ ಸ್ಕೂಲ್ನ ಪ್ರಾಚಾರ್ಯ ವಿದ್ಯಾವಂತ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಅವರು ಇಲ್ಲಿನ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ವಹಿಸಿದ ಮಣಿಪಾಲದ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಪ್ರಾಚಾರ್ಯ ರಂಗ ಪೈ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ರಾಧಕೃಷ್ಣ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ಆಶಾಕುಮಾರಿ ಬಹುಮಾನ ವಿತರಿಸಿದರು. ಮಹಾಲಸಾ ಕಿಣಿ ನಿರೂಪಿಸಿ, ಮೋನಿಕಾ ವಂದಿಸಿದರು.
'ತೆಂಗಿನ ಮರದ ಸ್ನೇಹಿತರು' ಔದ್ಯೋಗಿಕ ತರಬೇತಿ
ಬ್ರಹ್ಮಾವರ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಮತ್ತು ಬೆಂಗಳೂರು ತೆಂಗು ಅಭಿವೃದ್ಧಿ ಮಂಡಳಿಗಳ ಅಶ್ರಯದಲ್ಲಿ 6 ದಿನಗಳ 'ತೆಂಗಿನ ಮರದ ಸ್ನೇಹಿತರು' ಔದ್ಯೋಗಿಕ ತರಬೇತಿಯು ಇತ್ತಿಚೆಗೆ ಹಮ್ಮಿಕೊಳ್ಳಲಾಯಿತು. ಮಂಡಳಿಯ ಅಧಿಕಾರಿ ಶಂಕರ್ ತರಬೇತಿಯ ಮಾಹಿತಿ ನೀಡಿದರು. ಬೆಂಗಳೂರು ಕೃಷಿ ವಿವಿಯ ನಿರ್ದೆಶಕ ಎನ್. ನಾಗರಾಜ್ ತೆಂಗಿನಮರ ಹತ್ತುವ ಯಂತ್ರದ ಸದ್ಬಳಕೆಯನ್ನು ಮಾಡಿ ತೆಂಗಿನ ಕಾಯಿ ಕೀಳಲು ಎದುರಿಸುತ್ತಿರುವ ಕೂಲಿಯಾಳು ಸಮಸ್ಯೆಯನ್ನು ಬಗೆಹರಿಸಿ ಕೊಳ್ಳುವಂತೆ ಕರೆ ನೀಡಿದರು. ಕೊನೆಯಲ್ಲಿ ಶಿಬಿರಾರ್ಥಿಗಳಿಗೆ ತೆಂಗಿನ ಮರ ಹತ್ತುವ ಸ್ಪರ್ಧೆ ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನೀತಿ ಸಂಹಿತೆ ಜಾರಿ
ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಪ.ಪಂ. ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಪ.ಪಂ. ಅನುಮತಿ ಇಲ್ಲದೆ ಯಾವುದೇ ರೀತಿಯ ಸಭೆ, ಸಮಾರಂಭ, ಗೋಷ್ಠಿಗಳು ನಡೆಯಬಾರದು, ಪರವಾನಗಿ ಇಲ್ಲದೆ ಯಾವುದೇ ರೀತಿಯ ಬ್ಯಾನರ್, ಕಟೌಟ್, ಫ್ಲೆಕ್ಸ್, ಬಂಟಿಂಗ್ಸ್ ಬಳಸಬಾರದು. ಒಂದು ವೇಳೆ ಬಳಕೆ ಮಾಡಿದರೆ ಚುನಾವಣೆ ಅಕ್ರಮ ಎಂದು ಕೇಸ್ ದಾಖಲಿಸಲಾಗುವುದು ಎಂದು ಸಾಲಿಗ್ರಾಮ ಪಪಂ ಮುಖ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

