ಕಲಾಪ ನಿಯಂತ್ರಣ ಸ್ವಾತಂತ್ರ್ಯ ಭಾಗವತ ಬಿಟ್ಟುಕೊಡಬಾರದು: ಕುಂಡಂತಾಯ
ಉಡುಪಿ: ಯಕ್ಷಗಾನ ಭಾಗವತ ಕೇಂದ್ರಿತವಾದ ಒಂದು ಅಪೂರ್ವ ಕಲೆ, ರಂಗದಲ್ಲಿ ನಡೆಯುವ ಸಕಲ ಕಲಾಪಗಳ ನಿಯಂತ್ರಣ ಮಾಡಬೇಕಾದ ಹೊಣೆಗಾರಿಕೆ ಭಾಗವತರದ್ದು. ಈ ಸ್ವಾತಂತ್ರ್ಯವನ್ನು ಭಾಗವತರು ಎಂದೂ ಬಿಟ್ಟುಕೊಡಬಾರದು ಎಂದು ಹಿರಿಯ ಕಲಾವಿಮರ್ಶಕ ಕೆ.ಎಲ್. ಕುಂಡಂತಾಯ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ, ಇಲ್ಲಿನ ಅಂಬಲಪಾಡಿಯ 'ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ' 55ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಷ್ಟಿ ಕಲೆ: ಹಿರಿಯ ಮದ್ದಲೆಗಾರ ಹಿರಿಯಡ್ಕ ಗೋಪಾಲ ರಾಯರು ಮಾತನಾಡಿ, ಯಕ್ಷಗಾನ ಒಂದು ಮೇಳ ಕಲೆ, ಇದು ವ್ಯಕ್ತಿ ನಿಷ್ಠವಾಗಿರಬಾರದು. ಇದು ಸಮಷ್ಟಿ ಕಲೆ ಎಂದರು.
ಪ್ರಶಸ್ತಿ ಪ್ರದಾನ: ಈ ವರ್ಷದಿಂದ ಸಂಸ್ಥೆಯ ಸ್ಥಾಪಕ ಸದಸ್ಯರ ಹೆಸರಿನಲ್ಲಿ ಆರಂಭಿಸಲಾದ 'ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ'ಯನ್ನು ಹಿರಿಯ ಮದ್ದಲೆ ವಾದಕ ಕರ್ಕಿ ಪ್ರಭಾಕರ ಭಂಡಾರಿಗೆ ಮತ್ತು 'ಕಪ್ಪೆಟ್ಟು ಬಾಬು ಶೆಟ್ಟಿಗಾರ ಪ್ರಶಸ್ತಿ'ಯನ್ನು ಹಿರಿಯ ಪ್ರಸಾಧನ ಕಲಾವಿದ ಕೃಷ್ಣ ಮರಕಾಲ (ಕಿಟ್ಟಣ್ಣ) ಅವರಿಗೆ, 'ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ'ಯನ್ನು ಹಿರಿಯ ಸ್ತ್ರೀವೇಷಧಾರಿ ಉದ್ಯಾವರ ಜಯಕುಮಾರ್‌ಗೆ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಪ್ರದಾನ ಮಾಡಿದರು.
ಈ ಸಂದರ್ಭ ಮಾತನಾಡಿದ ಬಲ್ಲಾಳ, ಸಂಸ್ಥೆ ಮುಂದೆ ನಿರ್ಮಿಸಲಿರುವ ಕಟ್ಟಡಕ್ಕೆ ಶ್ರೀದೇವಳದ ವತಿಯಿಂದ ರು. 5 ಲಕ್ಷ ನೀಡುವ ಭರವಸೆ ಇತ್ತರು. ಯಕ್ಷನೃತ್ಯಾಭಿನಯ ಸ್ಪರ್ಧೆ ಮತ್ತು ಯಕ್ಷ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳ್ಕೂರು ಗೋಪಾಲ ಆಚಾರ್ಯ, ಸಂಸ್ಥೆಯ ನಿ.ಪೂರ್ವ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ ಇದ್ದರು.
ಸಂಸ್ಥೆ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿದರು. ಕಾರ್ಯದರ್ಶಿ ಜಯ ಕೆ. ವರದಿ ವಾಚಿಸಿದರು. ಕೆ.ಜೆ. ಕೃಷ್ಣ ಪ್ರಶಸ್ತಿ ಪತ್ರ ವಾಚಿಸಿದರು. ಪ್ರವೀಣ ಉಪಾಧ್ಯ ವಂದಿಸಿದರು. ಶ್ರೀರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ ಉಪಾಧ್ಯ ವಂದಿಸಿದರು. ಸಂಸ್ಥೆಯ ಬಾಲಕಲಾವಿದರಿಂದ ಸಂಸ್ಥೆಯ ಸದಸ್ಯ ಕೆ. ಜೆ. ಕೃಷ್ಣ ನಿರ್ದೇಶನದಲ್ಲಿ 'ವೀರ ಅಭಿಮನ್ಯು' ಯಕ್ಷಗಾನ ಪ್ರದರ್ಶನಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

