ಉಡುಪಿ

ಪತ್ರಕರ್ತರಿಗೆ ಬೆದರಿಕೆ- ಪತ್ರಕರ್ತರ ಸಂಘದಿಂದ ಖಂಡನೆ

Published On :

ಕುಂದಾಪುರ: ಕುಂದಾಪುರ ಪರಿಸರದಲ್ಲಿ ಇತ್ತೀಚೆಗೆ ನಡೆದ ಮಾನವ ಕಳ್ಳ ಸಾಗಣೆ ಮತ್ತು ಅರ್.ಟಿ.ಐ. ಕಾರ್ಯಕರ್ತ ವಾಸುದೇವ ಅಡಿಗರ ಕೊಲೆಯ ವರದಿಗಳಿಗೆ ಸಂಬಂಧಿಸಿದಂತೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಪತ್ರಕರ್ತರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿರುವುದು ಮತ್ತು ಮುಖಾಮುಖಿ ಬೆದರಿಕೆಯೊಡ್ಡುತ್ತಿರುವುದು ತಾಲೂಕು ಪತ್ರಕರ್ತರ ಸಂಘದ ಗಮನಕ್ಕೆ ಬಂದಿರುತ್ತದೆ.
ಪತ್ರಕರ್ತರು ವಸ್ತುನಿಷ್ಟವಾಗಿ ಮತ್ತು ನಿರ್ಭೀತರಾಗಿ ವರದಿ ಮಾಡಲು ಇಂತಹ ವಿದ್ಯಮಾನಗಳು ತಡೆಯೊಡ್ಡುತ್ತಿವೆ. ಈ ರೀತಿ ಬೆದರಿಸುವ ಪ್ರವೃತ್ತಿಯನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಖಂಡಿಸುವುದಾಗಿ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ತಿಳಿಸಿದ್ದಾರೆ.
ಸಮಾಜ ಘಾತುಕ ಶಕ್ತಿಗಳಿಂದ ಪತ್ರಕರ್ತರಿಗೆ ರಕ್ಷಣೆಯೊದಗಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್  ಇಲಾಖೆಯನ್ನು ಪತ್ರಕರ್ತರ ಸಂಘವು ಆಗ್ರಹಿಸುತ್ತದೆ. ಪತ್ರಿಕಾ ವರದಿಗಳ ಕುರಿತು ನ್ಯಾಯೋಚಿತವಾದ ಅಸಮಾಧಾನ, ದೂರುಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಕಾನೂನುಬದ್ಧವಾದ ಮಾರ್ಗಗಳಿವೆ. ಅದನ್ನು ಬಿಟ್ಟು ಪತ್ರಕರ್ತರಿಗೆ ವ್ಯಕ್ತಿಗತ ಬೆದರಿಕೆ ಒಡ್ದುವ, ನಿಂದಿಸುವ ಪ್ರಕರಣಗಳನ್ನು ಸಂಘವು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತದೆ ಎಂಬುದನ್ನು ಇಂತಹ ವ್ಯಕ್ತಿಗಳು, ಸಂಘಟನೆಗಳು ಗಮನಿಸಬೇಕು ಎಂದು ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.