ಪತ್ರಿಕೋದ್ಯಮದ ಅನುಭವ ರೋಚಕ: ಎಂ.ವಿ.ಕಾಮತ್
ಮಣಿಪಾಲ: 'ಕ್ವಿಟ್ ಇಂಡಿಯಾ ಚಳವಳಿ ವರದಿ ಮಾಡಿದವರಲ್ಲಿ ಈಗ ಬದುಕುಳಿದಿರುವುದು ನಾನೊಬ್ಬನೇ. ಅದು ಮುಖ್ಯವಲ್ಲ. ಅಂದಿನ ಆ ರೋಚಕ ಅನುಭವ ಅವಿಸ್ಮರಣೀಯ, ಪತ್ರಿಕೋದ್ಯಮ ಅಂಥ ಅಪೂರ್ವ ಕ್ಷಣಗಳನ್ನು ನನಗೆ ಒದಗಿಸಿದೆ' ಎಂದು ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಹೇಳಿದರು. ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ಮಣಿಪಾಲದ ಕಾಮತ್ ನಿವಾಸದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಗೌರವ ಸ್ವೀಕರಿಸಿ ಮಾತನಾಡಿ, ಸ್ವಾತಂತ್ರ್ಯ ಸಿಕ್ಕ ಆ ಮಧ್ಯರಾತ್ರಿಯಲ್ಲಿ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಹೆಚ್ಚುತ್ತಿದ್ದ ಎದೆಬಡಿತ, ಯೂನಿಯನ್ ಧ್ವಜ ಇಳಿಸಿ ಭಾರತದ ಧ್ವಜ ಹಾರಿಸಿದ ಆ ಕ್ಷಣದ ವರದಿಯ ಉತ್ಖಟತೆ ಈಗಲೂ ಮೈನವಿರೇಳಿಸವಂತೆ ಮಾಡುತ್ತದೆ ಎಂದರು. ನೆಹರು, ಇಂದಿರಾಗಾಂಧಿ ಸಹಿತ ಅನೇಕ ಪ್ರಧಾನಿ, ರಾಷ್ಟ್ರಪತಿಗಳೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಂಡರು. ಗೌರವ ಸಮರ್ಪಿಸಿದ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಎಂ. ವಿ. ಕಾಮತ್ ಸರಳತೆಗೆ ಈ ಪತ್ರಿಕೋದ್ಯಮ ದಿನಾಚರಣೆ ಸರಳತೆಯ ಸಂಕೇತವಾಗಿ ಗಮನ ಸೆಳೆದಿದೆ. ಶಾಸಕನಾಗಿ ಎರಡು ತಿಂಗಳ ಅವಧಿಯಲ್ಲಿ ಈ ಸನ್ಮಾನ ಕಾರ್ಯಕ್ರಮದ ತನ್ನ ಹರ್ಷದ ಹಾಗೂ ಭಾಗ್ಯದ ಕರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

