ಬೆಳ್ತಂಗಡಿ: ಅರಣ್ಯ ಉಳಿವಿಗೆ ವಿಶೇಷ ಒತ್ತು
ಬೆಳ್ತಂಗಡಿ: ತಾಲೂಕಿನಲ್ಲಿ ಅರಣ್ಯ ಇಲಾಖೆಯ ಬೆಳ್ತಂಗಡಿ ಹಾಗೂ ವೇಣೂರು ಎಂಬ ಎರಡು ವಲಯಗಳಿವೆ. ಹಲವಾರು ವರ್ಷಗಳಿಂದ ಇಲಾಖೆ ಅರಣ್ಯ ಸಮೃದ್ಧಿಗಾಗಿ ವಿಶೇಷ ಒತ್ತು ನೀಡುತ್ತಿದೆ. ಅರಣ್ಯ ಇಲಾಖೆಯ ಕಠಿಣ ಕಾನೂನುಗಳಿಂದಾಗಿ ಅರಣ್ಯ ನಾಶ ಹೇಳುವಷ್ಟರ ಮಟ್ಟಿಗೆ ನಿಂತಿಲ್ಲವಾದರೂ ಕಾನೂನುಗಳು ಪ್ರಯೋಜನಕ್ಕೆ ಬಂದಿವೆ. ಅರಣ್ಯ ನಾಶಕ್ಕೆ ಅರಣ್ಯ ಇಲಾಖೆಯೇ ಕಾರಣ ಎಂಬ ಹಳೆಯ ಮಾತೊಂದಿದೆ. ಆದರೆ ಇದೀಗ ಅದನ್ನು ಸುಳ್ಳಾಗಿಸುವಲ್ಲಿ ಎಲ್ಲ ಪ್ರಯತ್ನಗಳನ್ನು ಅರಣ್ಯ ಇಲಾಖೆ ಮಾಡುತ್ತಿದೆ.
ಗಿಡಗಳ ಪೋಷಣೆಗೆ ಒತ್ತು: 2012-13 ರಲ್ಲಿ ಬೆಳ್ತಂಗಡಿ ವಲಯದಲ್ಲಿ ಇಲಾಖೆ 14,9850 ವಿವಿಧ ಜಾತಿಯ ಗಿಡಗಳನ್ನು ತನ್ನ ನರ್ಸರಿಗಳಲ್ಲಿ ಬೆಳೆಸಿದೆ. 173 ಹೆಕ್ಟೇರ್ ಜಮೀನಿನಲ್ಲಿ ಗಿಡಗಳನ್ನು ನೆಡಲಾಗಿದೆ. ಬೆಳೆಸಿದ ಗಿಡಗಳನ್ನು 25 ರೈತರಿಗೆ 13,265 ಗಿಡಗಳನ್ನು, 7 ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ 1,412 ಗಿಡಗಳನ್ನು, 3 ಸಂಘ ಸಂಸ್ಥೆಗಳ ಮುಖಾಂತರ 850 ಗಿಡಗಳನ್ನು ಮತ್ತು ಇತರ ಸಾರ್ವಜನಿಕರಿಗೆ 3,248 ಗಿಡಗಳನ್ನು ಅಂದರೆ ಒಟ್ಟಾರೆ 18,775 ಗಿಡಗಳನ್ನು ನೀಡಿ ಅರಣ್ಯ ಬೆಳವಣಿಗೆಗೆ ಪ್ರೋತ್ಸಾಹಿಸಿದೆ.
2013-14ರಲ್ಲಿ 120 ಹೆಕ್ಟೇರ್ನಲ್ಲಿ ಅರಣ್ಯ ಬೆಳೆಸುವ ಯೋಜನೆಯನ್ನು ಇಲಾಖೆ ಶುರುವಿಟ್ಟುಕೊಂಡಿದೆ. 116856 ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಗಿದ್ದು, 47000 ಮಂದಿಗೆ ಗಿಡ ಕೊಡುವ ಉದ್ದೇಶ ಹೊಂದಲಾಗಿದೆ ಎಂದು ಇಲಾಖೆ ತಿಳಿಸಿದೆ.
ಅದೇ ರೀತಿ ವೇಣೂರು ವಲಯದಲ್ಲಿ 90 ಹೆಕ್ಟೇರ್ ಪ್ರದೇಶದಲ್ಲಿ 2012-13ರಲ್ಲಿ ಗಿಡ ನೆಡಲಾಗಿದೆ. ರಸ್ತೆ ಬದಿಗಳಲ್ಲಿಯೇ ಸುಮಾರು 52 ಹೆಕ್ಟೇರ್ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದೆ.
ಕಳೆದ ಬಾರಿ 500 ಸಸಿಗಳನ್ನು ವಿದ್ಯೋದಯ ಶಾಲಾ ವಿದ್ಯಾರ್ಥಿಗಳಿಗೆ, ಪೆರಿಂಜೆ ಶಾಲೆಯ 300, ವೇಣೂರು ಐಟಿಐನ 300, ನಿಟ್ಟಡೆ ಶಾಲೆಯ 200 ವಿದ್ಯಾರ್ಥಿಗಳಿಗೆ ಗಿಡ ಕೊಟ್ಟು ಅರಣ್ಯ ಬೆಳೆಸುವ ಪರಿಪಾಠವನ್ನು ಮುಂದುವರಿಸಲಾಗಿದೆ.
ಕೊಕ್ರಾಡಿ- ಕಾಶಿಪಟ್ಣ, ಅಂಡಿಂಜೆ- ಕಾಶಿಪಟ್ಣ ರಸ್ತೆಗಳಲ್ಲಿ ರಸ್ತೆ ನೆಡುತೋಪು ಮಾಡಿ ಸಂರಕ್ಷಿಸಿಕೊಂಡು ಬರಲಾಗಿದೆ. ಸವಣಾಲು ಎಂಬಲ್ಲಿ 20 ಹೆಕ್ಟೇರ್ನಲ್ಲಿ ನೆಡುತೋಪು ಮಾಡಲಾಗಿದೆ.
ಎರಡೂ ವಲಯದ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಗಿಡ ನೆಡುವ ಮೂಲಕ ಇರುವ ಅರಣ್ಯವನ್ನು ಸಂರಕ್ಷಿಸುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ. ನೆಡುತೋಪುಗಳನ್ನು ರಕ್ಷಿಸಲು ಸೂಕ್ತ ಭದ್ರತೆ ಕೈಗೊಂಡಿದೆ.
ದೀಪಕ್ ಅಳದಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

