ಉಡುಪಿ

ನರಸಿಂಹ ಶಾಸ್ತ್ರಿ ನಿಧನಕ್ಕೆ ಸಂತಾಪ

Published On :

ಉಡುಪಿ: ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಹಿರಿಯ ಚೇತನ ಪಡಾರು ನರಸಿಂಹ ಶಾಸ್ತ್ರಿ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಸ್ತ್ರಿಗಳು ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಗಮನಿಸಿ 2003 ರಿಂದ ಪ್ರತಿವರ್ಷ ಸಾಧಕ ಹಿರಿಯ ಕಲಾವಿದರಿಗೆ 10 ಸಾವಿರ ನಗದು ಪುರಸ್ಕಾರದೊಂದಿಗೆ ಗೌರವಿಸುವ ವ್ಯವಸ್ಥೆ ಮಾಡಿದ್ದರು.
ವರಾಹತೀರ್ಥರ ಆರಾಧನಾ ಮಹೋತ್ಸವ
ಉಡುಪಿ: ಇಲ್ಲಿನ ಉದ್ಯಾವರ ಮೇಲ್ಮಠ ವರಾಹತೀರ್ಥ ಸಂಸ್ಥಾನದಲ್ಲಿ ಸೋದೆ ಮಠದ ಗುರು ಪರಂಪರೆಯಲ್ಲಿ ಪ್ರಖ್ಯಾತಿ ಪಡೆದ ವೃಂದಾವನಾಚಾರ್ಯ ಶಿಷ್ಯ ವರಾಹ ತೀರ್ಥ ಸ್ವಾಮಿಗಳ ಗುರು ಆರಾಧನಾ ಮಹೋತ್ಸವ ಗುರುವಾರ ಜರುಗಿತು.
ಈ ಸಂದರ್ಭ, ಸುವರ್ಣ ಪಂಚವೃಂದಾವನಕ್ಕೆ ವಿಶೇಷ ಪೂಜೆ, ವೃಂದಾವನಾಚಾರ್ಯರ ವರಾಹ ತೀರ್ಥ ಸಂಪುಟಕ್ಕೆ ನೈವೇದ್ಯ ಸಮರ್ಪಣೆ ಹಾಗೂ ವರಾಹ ತೀರ್ಥರ ಪಾದುಕ ಪೂಜೆಯನ್ನು ಪರ್ಯಾಯ ಅರ್ಚಕ ಸುದೇಶ್ ಕುಮಾರ್ ನೆರವೇರಿಸಿದರು. ವಾದಿರಾಜ ಆಚಾರ್ಯರು ಸಹಕರಿಸಿದರು.
ಪರ್ಕಳ: ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ
ಡಪರ್ಕಳ: ಇಲ್ಲಿನ ರೋಟರಿ ಕ್ಲಬ್‌ನ ಸಹಸಂಸ್ಥೆ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಇಂಟರ್ಯಾಕ್ಟ್ ಕ್ಲಬ್‌ನ ಪದಪ್ರದಾನ ಸಮಾರಂಭವು ರೋಟರಿ ಅಧ್ಯಕ್ಷ ಎಸ್.ಎನ್. ನಾಯಕ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು. ಇಂಟರ್ಯಾಕ್ಟ್ ಅಧ್ಯಕ್ಷೆ ಮಹಿಮಾ ರೆಬೆಲ್ಲೊ ಹಾಗೂ ಕಾರ್ಯದರ್ಶಿ ಪ್ರದ್ಯುಮ್ನ ನಾಯಕ್ ಮತ್ತು ತಂಡದವರಿಗೆ ಪದಪ್ರದಾನ ಮಾಡಲಾಯಿತು. ಇಂಟರ್ಯಾಕ್ಟ್ ಕೋ-ಆಡಿನೇಟರ್ ಜಯಶ್ರೀ ತೆಂಡೂಲ್ಕರ್, ಹಾಜಿ ಕೆ. ಅಬೂಬಕ್ಕರ್, ಮಂಜುನಾಥ ಉಪಾಧ್ಯಾಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.