ಉಡುಪಿ

ಸಾಧನೆಗೆ ಭಾಷಾಮಾಧ್ಯಮ ಮುಖ್ಯವಲ್ಲ: ನರಸಿಂಹ ನಾಯಕ್

Published On :

ಉಡುಪಿ: ಜೀವನದ ಯಶಸ್ಸಿಗೆ, ಶೈಕ್ಷಣಿಕ ಔನ್ನತ್ಯಕ್ಕೆ ಭಾಷಾ ಮಾಧ್ಯಮ ಮುಖ್ಯವಲ್ಲ, ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪರಿಶ್ರಮವೇ ಮುಖ್ಯ ಎಂದು ಗಲ್ಫ್ ರಾಷ್ಟ್ರದ ಸೀಹ- ಆಲ್ ಸರ್ಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಪೆರ್ಡೂರು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಎಂ. ನರಸಿಂಹ ನಾಯಕ್ ಹೇಳಿದ್ದಾರೆ.  ಪೆರ್ಡೂರು ಪ್ರೌಢಶಾಲೆಗೆ ವಾಟರ್ ಕೂಲರ್ ಕೊಡುಗೆಯಾಗಿ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.  ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಂಸ್ಥೆ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಇದ್ದರು.  ಶಾಲೆಯ ಆಡಳಿತ ಸಮಿತಿ ಅಧ್ಯಕ್ಷ ಡಾ. ಎಂ. ಆರ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.  ನರಸಿಂಹ ನಾಯಕ್ ಕುಟುಂಬದ ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಮೇಶ ನಾಯಕ್, ಆಡಳಿತ ಸಮಿತಿ ಸದಸ್ಯ ಉದಯಾನಂದ ಭಂಡಾರಿ ಪಾಲ್ಗೊಂಡರು. ಮುಖ್ಯೋಪಾಧ್ಯಾಯ ಎಚ್. ಎಸ್. ಗಣೇಶ ಭಟ್ ಸ್ವಾಗತಿಸಿದರು. ಶಿಕ್ಷಕ ಜಿ. ಪಿ. ಪ್ರಭಾಕರ ನಿರೂಪಿಸಿದರು. ಸ್ವರ್ಣಲತಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.