ಉಡುಪಿ

ಮಾನಸಿಕ ಅಸ್ವಸ್ಥಗೆ ಸ್ಫೂರ್ತಿಧಾಮ ಆಶ್ರಯ

Published On :

ಕುಂದಾಪುರ: ಕುಂದಾಪುರ ಆಸುಪಾಸಿನಲ್ಲಿ ಭಿಕ್ಷೆ ಬೇಡಿ ತಿನ್ನುತ್ತಿದ್ದ ಅನಾಥ ಮಾನಸಿಕ ಅಸ್ವಸ್ಥ ವಾದಿರಾಜ್ ಹೆಬ್ಬಾರ್ (25) ಎಂಬ ಪದವೀಧರ ಯುವಕನಿಗೆ ಇಲ್ಲಿನ ಬೇಳೂರಿನ ಸ್ಫೂರ್ತಿಧಾಮ ಆಶ್ರಯ ನೀಡಿದೆ.
ಕುಂದಾಪುರದ ಕೋಣಿ ಪರಿಸರದಲ್ಲಿ ಹುಟ್ಟಿ ಬೆಳೆದ ವಾದಿರಾಜನಿಗೆ ಹೆತ್ತವರಿಲ್ಲ. ಸ್ಥಳೀಯ ಕಾಲೇಜಿನಲ್ಲಿ ಪದವಿ ಮುಗಿಸಿದ ಪ್ರತಿಭಾನ್ವಿತ ವಾದಿರಾಜ, ಒಡಹುಟ್ಟಿದವರಿಂದ ಅಸಡ್ಡೆಗೊಳಗಾಗಿ ಉದ್ಯೋಗವಿಲ್ಲದೆ ಅಲೆದಾಡುತ್ತಾ ಕುಂದಾಪುರ ಪೇಟೆ ಸೇರಿಕೊಂಡು, ಕಳೆದ ನಾಲ್ಕಾರು ವರ್ಷಗಳಿಂದ ಮಾನಸಿಕ ರೋಗಿಯಾಗಿಬಿಟ್ಟ.
ವರ್ಷಗಳಿಂದ ಸ್ನಾನವಿಲ್ಲದೆ, ನಾರುವ ಕೊಳಕು ಬಟ್ಟೆಯಲ್ಲಿ, ತಲೆಯಲ್ಲಿ ಕೂದಲು ಜಟೆಯಾಗಿ, ಮುಖ ತುಂಬಾ ಗಡ್ಡ ಬೆಳೆದು ಬೇಡಿ ತಿನ್ನುತ್ತಿದ್ದ. ವಾದಿರಾಜನನ್ನು ಕಂಡು ಮರುಗುತ್ತಿದ್ದ ಅವನ ಗೆಳೆಯರು ಹೇಗಾದರೂ ಮಾಡಿ ವಾದಿರಾಜನನ್ನು ಈ ಪರಿಸ್ಥಿತಿಯಿಂದ ಹೊರತರಬೇಕೆಂದು ಪ್ರಯತ್ನಿಸುತ್ತಿದ್ದರು.
ಇತ್ತೀಚೆಗೆ ಆತನ ಸಹಪಾಠಿಗಳು, ಶಾಲೆಯ ಹಳೆ ವಿದ್ಯಾರ್ಥಿಗಳು, ಕೋಟೇಶ್ವರ ರೋಟರಿ ಸಂಸ್ಥೆಯ ಸದಸ್ಯರು ಸೇರಿ ಬೇಳೂರಿನ ಸ್ಫೂರ್ತಿಧಾಮವನ್ನು ಸಂಪರ್ಕಿಸಿ ಆತನನ್ನು ಅಲ್ಲಿಗೆ ಕರೆತಂದರು.
ಅಲ್ಲಿ ವಾದಿರಾಜನನ್ನು ಸ್ನಾನ ಮಾಡಿಸಿ, ಕೂದಲು ಕತ್ತರಿಸಿ ಹೊಸ ರೂಪ ನೀಡಲಾಯಿತು. ಈಗ ಮಾನಸಿಕವಾಗಿಯೂ ಸುಧಾರಿಸಿಕೊಳ್ಳುತ್ತಿದ್ದಾನೆ ಎನ್ನುತ್ತಾರೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ.
ವಾದಿರಾಜನಿಗೆ ಹೊಸ ಜೀವನ ನೀಡಿದ ಆತನ ಶಾಲೆಯ ಸಹಪಾಠಿಗಳು ಮತ್ತು ಹಳೆ ವಿದ್ಯಾರ್ಥಿಗಳಾದ ನಾಗರಾಜ ಆಚಾರ್ಯ, ಕೃಷ್ಣ, ಮಹೇಶ್, ನಾಗರಾಜ, ಕೆ.ಎನ್. ಗೌತಮ, ಸಂತೋಷ ಕೋಣಿ, ಗಣೇಶ್, ರಮೇಶ್, ಶಂಕರ್ ಮುಂತಾದವರು ಆಗಾಗ್ಗೆ ಬಂದು ಆತನನ್ನು ಕಂಡು ಮಾತನಾಡಿಸಿ ಧೈರ್ಯ ತುಂಬುತ್ತಿದ್ದಾರೆ. ಸ್ಫೂರ್ತಿಧಾಮ ಕಾರ್ಯನಿರ್ವಾಹಕಿ ಗಣಪು ನಾಯಕವಾಡಿ, ಕುಮಾರಿ ಜಿಜಿ ಆತನನ್ನು ನೋಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.