ಅಂಬಲಪಾಡಿ ಶ್ಯಾಮಿಲಿ ಸಭಾಂಗಣ ದಶಮಾನೋತ್ಸವ ಸಂಭ್ರಮ
ಉಡುಪಿ: ತೀವ್ರವಾಗಿ ಬೆಳೆಯುತ್ತಿರುವ ಉಡುಪಿಗೆ 10 ವರ್ಷಗಳ ಹಿಂದೆ ತೀರಾ ಅಗತ್ಯವಿದ್ದ ವಿಶಾಲ ಸುಸಜ್ಜಿತ ಶ್ಯಾಮಿಲಿ ಸಭಾಂಗಣವನ್ನು ನಿರ್ಮಿಸಿರುವ ಉದ್ಯಮಿ ಜಿ. ಶಂಕರ್, ಆ ಮೂಲಕ ಉಡುಪಿಯ ಅನೇಕ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥಿತ ಆಯೋಜನೆಗೆ ದೊಡ್ಡ ಸಹಾಯ ಮಾಡಿದ್ದಾರೆ ಎಂದು ಅಲೆವೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಲೆವೂರು ಹರೀಶ ಕಿಣಿ ಹೇಳಿದ್ದಾರೆ.
ಇಲ್ಲಿನ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ದಶಮಾನೋತ್ಸವವನ್ನು ಗುರುವಾರ ಪತ್ನಿ ನೀತಾ ಜೊತೆಗೊಡಿ ಉದ್ಘಾಟಿಸಿದ ಕಿಣಿ, ಸಂಸ್ಥೆಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಿಂದ ದಶಕಗಳ ಹಿಂದೆ ಇದೇ ಸಭಾಂಗಣದಲ್ಲಿ ನಡೆದ ತನ್ನ ಮದುವೆಯ ನೆನಪು ಮರುಕಳಿಸಿತು ಎಂದು ಕಿಣಿ ಸಂತಸ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಲ್ಲಿ ಈ ಶ್ಯಾಮಿಲಿ ಸಭಾಂಗಣದಲ್ಲಿ ಮದುವೆಯಾದ ಸಫಾ-ಆಸೀಫ್, ವಿಜಯಲಕ್ಷ್ಮಿ-ಜನಾರ್ದನ್, ಆನಿಷಾ ಸುಪ್ರೀತಾ-ಅರುಣ್ ಸುಶೀಲ್ ದಂಪತಿಗಳು ಅತಿಥಿಗಳಾಗಿದ್ದರು. ಶಾಲಿನಿ ಶಂಕರ್ ಮತ್ತು ಶಾಮಿಲಿ ಶಂಕರ್ ಇದ್ದರು.
ಅಧ್ಯಕ್ಷತೆ ವಹಿಸಿದ್ದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆಗೆ ಪೂರಕವಾಗಿರುವ ಸಭಾಂಗಣದ ಉದ್ದೇಶ ಈಡೇರಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರಲ್ಲದೆ, ಈ ಸಂಸ್ಥೆ ಏಳಿಗೆಯಲ್ಲಿ ಸಿಬ್ಬಂದಿಯನ್ನು ಶ್ಲಾಘಿಸಿದರು. ಈ ಸಂದರ್ಭ ಸಂಸ್ಥೆಯ ಸಿಬ್ಬಂದಿಯನ್ನು ಗೌರವಿಸಲಾಯಿತು.
ಎಸ್. ಕೆ. ಆನಂದ ಸ್ವಾಗತಿಸಿದರು. ಶಂಕರ ಸಾಲ್ಯಾನ್ ವಂದಿಸಿದರು. ಉಡುಪಿ ತಾ.ಪಂ. ಕಾ. ನಿ. ಅಧಿಕಾರಿ ಡಿ. ಮಂಜುನಾಥಯ್ಯ ನಿರೂಪಿಸಿದರು.
ಬಳಿಕ ಅಂಪಾರು ವಾಗ್ಜ್ಯೋತಿ ವಿಶೇಷ ಮಕ್ಕಳಿಂದ ಯಕ್ಷಗಾನ ಹಾಗೂ ಸಾಗರ ವನಶ್ರೀ ಸಂಸ್ಥೆಯವರಿಂದ ಶ್ರೀರಾಮ ಪಟ್ಟಾಭಿಷೇಕ ಗೀತಾರೂಪಕ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

