ಉಡುಪಿ

'ಬಲೆ ಗೊಬ್ಬುಗ' ಮೋಜಿನಾಟ ಬೇಸಿಗೆ ಶಿಬಿರ

Published On :

ಬೆಳ್ತಂಗಡಿ: ಬೇಸಿಗೆ ರಜೆ ವ್ಯರ್ಥವಾಗದೆ ಮಕ್ಕಳ ಬದುಕನ್ನು ಅರಳಿಸುವ ಮೋಜಿನಾಟದೊಂದಿಗೆ ವ್ಯಕ್ತಿತ್ವ ವಿಕಸನದ ಜ್ಞಾನವೃದ್ಧಿಸುವ ಯೋಜನೆ ರೂಪಿಸುವ ಧರ್ಮಸ್ಥಳದ ಹೇಮಾವತಿ ಹೆಗ್ಗಡೆಯವರು ಉಜಿರೆಯ ಸಿದ್ದವನ ಗುರುಕುಲದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ 6ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗಾಗಿ 'ಬಲೆ ಗೊಬ್ಬುಗ' ಮೋಜಿನಾಟ ಬೇಸಿಗೆ ಶಿಬಿರ 2013 ಆಯೋಜಿಸಿದ್ದರು.
ಏ. 28 ರಿಂದ ಮೇ 7 ರವರೆಗೆ ನಡೆದ ಶಿಬಿರದಲ್ಲಿ 7 ಶಾಲೆಗಳ 127 ಮಕ್ಕಳು 10 ದಿನಗಳ ಕಾಲ ಎಲ್ಲವನ್ನೂ ಮರೆತು ಸಂತಸಪಟ್ಟರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಅವರ ಮಾರ್ಗದರ್ಶನದಂತೆ ಶಿಬಿರ ನಿರ್ದೇಶಕರಾದ ಭಗೀರಥ ಕುಮಟಾ, ಗೀತಾ ಸುಳ್ಯ, ನವೀನ್ ಮತ್ತು ಉಮೇಶ್ ಅವರಿಂದ ಪಳಗಿದ ಮಕ್ಕಳು 4 ಕಿರುನಾಟಕಗಳ ರಂಗತಾಲೀಮು ನಡೆಸಿ ಸಮಾರೋಪ ದಿನ ನಾಟಕಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಿದರು.
ಮಂಗಳೂರಿನ ಜಗತ್ ಪವಾರ್ ಬೇಕಲ್ ಶಿಬಿರವನ್ನು ಉದ್ಘಾಟಿಸಿ, ಕಥೆ ರಚನೆ ಬಗೆಗೆ ಮಾಹಿತಿ ನೀಡಿದರು.
ವಿದ್ವಾನ್ ಮಹಾಲಿಂಗೇಶ್ವರ ಭಟ್, ಧರ್ಮಸ್ಥಳದ ಗಣೇಶ ಮಂದಾರ, ಶ್ರೀರಾಮ್ ಮತ್ತು ರವಿಚಂದ್ರ ಗ್ರೀಟಿಂಗ್ಸ್ ತಯಾರಿ ಮತ್ತು ಗಾಸ್ಲ್ ಪೈಂಟಿಂಗ್ ಸಿದ್ದವನದ ಗಿರೀಶ್ ಗದಗ, ಕ್ಲೇ ಮಾಡಲಿಂಗ್ ಮತ್ತು ಮಣ್ಣಿನ ತಯಾರಿ ನರೇಂದ್ರ ಕುಮಾರ್ ಮತ್ತು ಅರುಣ್ ಕುಮಾರ್ ಯಕ್ಷಗಾನ ವೇಷಗಳ ಮುಖವರ್ಣಿಕೆ ಉಜಿರೆಯ ಸ್ನೇಕ್‌ಜಯ್ ಹಾವುಗಳ ಬಗ್ಗೆ ಮಾಹಿತಿ ನೀಡಿ ಹಾವುಗಳ ಸಂತತಿಯನ್ನು ಸಂರಕ್ಷಿಸುವ ಕುರಿತು ತಿಳಿಸಿದರು.
ಇಂಗ್ಲಿಷ್ ಉಪನ್ಯಾಸಕ ಸುರ್ಯನಾರಾಯಣ ಸಿನೆಮಾ ಕಥೆ, ಚಿತ್ರೀಕರಣ, ಸಂಗೀತ, ದೃಶ್ಯ ಸಂಯೋಜನೆ ಕುರಿತು ಮಾಹಿತಿ ನೀಡಿದರು.
ಭಗೀರಥ ಕುಮಟಾ, ಗೀತಾ ಸುಳ್ಯ, ನವೀನ್ ಮತ್ತು ಉಮೇಶ್ ಅವರ ನಿರ್ದೇಶನದಲ್ಲಿ ಕಾಡಿನ ಹಕ್ಕಿ ಪೇಟೆಗೆ ಬಂತು, ಜೇನು ಗೂಡು ಗಿಳಿಗೂಡು ಮೊದಲಾದ ಮಕ್ಕಳ ನಾಟಕಗಳ ತರಬೇತಿ ನೀಡಿ ಮಕ್ಕಳಿಂದಲೇ ಪ್ರದರ್ಶಿಸಲ್ಪಟ್ಟಿತು.
ಶಿಕ್ಷಕರಾದ ರವೀಶ ಕುಮಾರ್ ಮತ್ತು ವಿಕಾಸ ಆರಿಗ ಶಿಬಿರವನ್ನು ಸಂಯೋಜಿಸಿದ್ದು, ಹಿನ್ನೆಲೆ ಸಂಗೀತ ಶಿಬಿರಕ್ಕೆ ಕಳೆ ಹೆಚ್ಚಿಸಿತ್ತು. 10 ದಿನಗಳ ಬೇಸಿಗೆ ಶಿಬಿರ, ಶಿಬಿರಾರ್ಥಿಗಳಲ್ಲಿ ನವ ಚೈತನ್ಯದ ಚಿಲುಮೆಯಂತೆ ವಿಶಿಷ್ಟ ಅನುಭವ ನೀಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.