ಉಡುಪಿ

ಉದ್ಯಾವರ ಫಿಶ್‌ಮಿಲ್ ಪ್ರಕರಣ: ಪ್ರತಿಭಟನಾಕಾರರ ಖುಲಾಸೆ

Published On :

ಉಡುಪಿ: ಇಲ್ಲಿನ ಉದ್ಯಾವರದಲ್ಲಿ ಕಾರ್ಯಾಚರಿಸುತ್ತಿರುವ 3 ಫಿಶ್‌ಮಿಲ್‌ಗಳಿಂದಾಗುತ್ತಿರುವ ತೊಂದರೆಯ ವಿರುದ್ಧ ಪ್ರತಿಭಟನೆ ಮಾಡಿದ್ದ ಸುಮಾರು 12 ಮಂದಿಯ ಮೇಲೆ ಪೊಲೀಸರು ದಾಖಲಿಸಿದ್ದ ಪ್ರಕರಣ ಖುಲಾಸೆಗೊಂಡಿದೆ.
ಸುಮಾರು 3 ವರ್ಷಗಳ ಹಿಂದೆ ಈ 3 ಫಿಶ್‌ಮಿಲ್‌ಗಳಿಂದ ಪರಿಸರ ಹಾಳಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಿಲ್ಲಿನ ತ್ಯಾಜ್ಯ ಸೇರಿ ಸ್ಥಳೀಯ ನದಿ ಮತ್ತು ಸಮುದ್ರದ ನೀರು ಕಲುಷಿತಗೊಂಡು ಮೀನು ಸಾಯುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಪಿಶ್‌ಮಿಲ್ ಮಾಲೀಕ ಯು. ಮಹೇಶ್ ಪಿತ್ರೋಡಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರತಿಭಟನಾಕಾರರಾದ ಭಾಸ್ಕರ ಕೋಟ್ಯಾನ್, ದಯಾನಂದ ತಿಂಗಳಾಯ, ವಿಶ್ವನಾಥ ಗಜನೆ, ಸಂಜೀವ ಮೆಂಡನ್, ರತ್ನಾಕರ ಮೆಂಡನ್, ವಿಜಯ ಕುಂದರ್, ಉದಯ ಕುಂದರ್, ಪ್ರತಾಪ್ ಕುಮಾರ್, ತಿಲಕ್ ರಾಜ್, ಹರಿಶ್ಚಂದ್ರ ಪುತ್ರನ್, ಗಣೇಶ ಎಂಬವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ 3 ವರ್ಷ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಈ ಸಂದರ್ಭದಲ್ಲಿ ದೂರು ಕೊಟ್ಟ ಮಾಲೀಕ ಮಹೇಶ ಮತ್ತು ಸಾಕ್ಷಿದಾರರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಅವರ ಮೇಲೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ, ಅವರು ಮಾಡಿದ್ದ ಆರೋಪ ಸಾಬೀತಾಗದೆ ಈ 12 ಜನರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.