ಉಡುಪಿ

ಚಾಂತಾರು ದೇಗುಲಗಳ ಜೀರ್ಣೋದ್ಧಾರ ನಿರ್ಧಾರ

Published On :

ಬ್ರಹ್ಮಾವರ: ಇಲ್ಲಿನ ಚಾಂತಾರು ಗ್ರಾಮದ ಅಗ್ರಹಾರ ಎಂಬಲ್ಲಿರುವ ಶ್ರೀಕಾಶಿ ವಿಶ್ವನಾಥ ದೇವಾಲಯ ಮತ್ತು ವೆಂಕಟರಮಣ ದೇವಾಲಯಗಳು ಜೀರ್ಣಾವಸ್ಥೆಗೆ ತಲುಪಿದ್ದು, ಸ್ಥಳೀಯ ಭಕ್ತರು ಈ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಲು ನಿರ್ಧರಿಸಿದ್ದಾರೆ.
ಇಲ್ಲಿನ ವಿಶ್ವನಾಥ ದೇವಾಲಯವು 1740ರಲ್ಲಿ 2ನೇ ಸೋಮಶೇಖರ ನಾಯಕರ ಕಾಲದಲ್ಲಿ ಸ್ಥಾಪನೆಯಾಗಿದ್ದು, ವೇಸರ ಶೈಲಿಯಲ್ಲಿದೆ. ವಿಶ್ವನಾಥ ದೇವರ ವಿಗ್ರಹವನ್ನು ಕಾಶಿಯಿಂದ ತಂದಿರುವುದರಿಂದ ಕಾಶೀ ವಿಶ್ವನಾಥ ಎಂದು ಅದನ್ನು ಕರೆಯಲಾಗುತ್ತದೆ. ಈ ವಿಶ್ವನಾಥ ಸಂತಾನ ಭಾಗ್ಯ ಕರುಣಿಸುವ ದೇವರು ಎಂಬುದು ಇಲ್ಲಿನ ಐತಿಹ್ಯವಾಗಿದೆ.
ಈ ದೇವಾಲಯದ ಆಗ್ನೇಯ ದಿಕ್ಕಿನಲ್ಲಿ ಗಣಪತಿ ಹಾಗೂ ಈಶಾನ್ಯದಲ್ಲಿ ದುರ್ಗಾ ಪರಮೇಶ್ವರಿ ಗುಡಿಗಳಿವೆ. ಪೂರ್ವ ದಿಕ್ಕಿನಲ್ಲಿ ಜಲಾಶಯವಿದ್ದು, ಅದರ ದಂಡೆಯ ಮೇಲೆ ನಾಗಬ್ರಹ್ಮಸ್ಥಾನ ಮತ್ತು ಪರಿವಾರ ದೇವತೆಗಳಿವೆ. ಇದು ಸಂಪೂರ್ಣ ಜೀರ್ಣಗೊಂಡಿದೆ.
ವಿಶ್ವನಾಥ ದೇವಾಲಯದ ಉತ್ತರ ದಿಕ್ಕಿನಲ್ಲಿರುವ ವೆಂಕಟರಮಣ ದೇವಾಲಯವು ಸುಮಾರು 11ನೇ ಶತಮಾನದಲ್ಲಿ ಸಿದ್ಧಯೋಗಿಯೊಬ್ಬರಿಂದ ನಿರ್ಮಿಸಲ್ಪಟ್ಟಿದೆ. ಅಕ್ಕಪಕ್ಕದಲ್ಲಿ ಶ್ರೀದೇವಿ ಮತ್ತು ಭೂದೇವಿಯರಿರುವ ಸುಮಾರು 3.7 ಅಡಿ ಎತ್ತರರದ ವೆಂಕಟರಮಣ ದೇವರು ಆರೋಗ್ಯಕ್ಕೆ ಸಂಬಂಧಿಸಿ ಪ್ರಾರ್ಥನೆಗಳನ್ನು ಈಡೇರಿಸುತ್ತಾನೆ ಎಂಬ ಪ್ರತೀತಿ ಇದೆ.
ಈ ದೇವರ ಸಾನ್ನಿಧ್ಯದಲ್ಲಿ ದಿನಂಪ್ರತಿ ಪೂಜೆ, ಹಬ್ಬ, ಆಚರಣೆಗಳು ನಡೆಯುತ್ತಿವೆ. ಇದೀಗ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ಗ್ರಾಮಸ್ಥರು ಸಮಿತಿಯೊಂದನ್ನು ರಚಿಸಿದ್ದು, ಸುಮಾರು ರು. 65 ಲಕ್ಷಗಳ ಯೋಜನೆ ತಯಾರಿಸಿದ್ದಾರೆ. ಅದಕ್ಕಾಗಿ ಭಕ್ತಾಭಿಮಾನಿಗಳ ಸಹಕಾರ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.