ಬಂಟ್ವಾಳ: ಭಿತ್ತಿಚಿತ್ರ ಕಾರ್ಯಾಗಾರ ಉದ್ಘಾಟನೆ
ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ವರ್ಣಾವಲೋಕನ ಎಂಬ ವಿನೂತನ ಭಿತ್ತಿಚಿತ್ರ ಕಾರ್ಯಾಗಾರ ನೆರವೇರಿತು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೇಷಶಯನ ಕಾರಿಂಜ ಅವರು ಚಿತ್ರಗಳಿಗೆ ಬಣ್ಣ ತುಂಬುವ ಮೂಲಕ ಉದ್ಘಾಟಿಸಿದರು.
ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಬಿಂಬಿಸುವ ಪ್ರತಿಭಾ ಕಾರಂಜಿ, ಅಕ್ಷರ ದಾಸೋಹ, ಚಿಣ್ಣರ ಜಿಲ್ಲಾದರ್ಶನ, ಶಾಲಾ ಕೈದೋಟ ಮುಂತಾದ ಆಕರ್ಷಕ ಚಿತ್ತಾರಗಳನ್ನು ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಸುಮಾರು 40 ವಿದ್ಯಾರ್ಥಿಗಳು ಹಾಗೂ ಚಿತ್ರಕಲಾ ಶಿಕ್ಷಕರುಗಳಾದ ಮುರಳೀಕೃಷ್ಣ ರಾವ್, ಬಾಲಕೃಷ್ಣ ಶೆಟ್ಟಿ ಮಂಚಿ, ಸುಂದರ್ ತೋಡಾರು, ತಾರಾನಾಥ ಕೈರಂಗಳ್, ಸುಧೀರ್ ಕಾವೂರು, ಮುಂತಾದವರು ಭಾಗವಹಿಸಿದ್ದರು.
ಶಿಕ್ಷಣ ಸಂಯೋಜಕರಾದ ದೇವದಾಸ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕಿ ಸುಜಾತ ವಂದಿಸಿದರು. ದ.ಕ. ಜಿಲ್ಲಾ ಹಾಗೂ ತಾಲೂಕು ಚಿತ್ರಕಲಾ ಶಿಕ್ಷಕರ ಸಂಘ ಸಹಕರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

