ಸಂಕಲ್ಪ ಫ್ರೆಂಡ್ಸ್ ಯುವ ವೇದಿಕೆ ಉದ್ಘಾಟನೆ
ಕುಂದಾಪುರ: ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಂಘಟನೆಗಳ ಪಾತ್ರ ಬಹಳ ಮುಖ್ಯವಾದದದ್ದು. ಈಗಾಗಲೇ ಸಮಾಜಿಕ, ಶೈಕ್ಷಣಿವಾಗಿ ಅನೇಕ ಕಾರ್ಯಕ್ರಮಗಳನ್ನು ಸಂಕಲ್ಪ ಫ್ರೆಂಡ್ಸ್ ನೀಡಿದೆ. ಈ ನಿಟ್ಟಿನಲ್ಲಿ ಸ್ಥಾಪನೆಗೊಂಡ ಸಂಸ್ಥೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲಿ ಎಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಗುರುವಾರ ಕೋಟೇಶ್ವರ ಹಳಅಳಿವೆಯಲ್ಲಿ ಸಂಕಲ್ಪ ಫ್ರೆಂಡ್ಸ್ ಯುವ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಸೂರತ್ ಉದ್ಯಮಿ ಗೋಪಾಲ ಜಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ದರ್ಜೆ ಗುತ್ತಿಗೆದಾರ ಮಾರ್ಕೋಡು ಸುದೀರ್ ಕುಮಾರ್ ಶೆಟ್ಟಿ, ಸಂಕಲ್ಪ ಫ್ರೆಂಡ್ಸ್ ಅಧ್ಯಕ್ಷ ಕೃಷ್ಣ ಹಳಅಳಿವೆ, ನಿವೃತ್ತ ಆರೋಗ್ಯ ನಿರೀಕ್ಷಕ ಶ್ರೀನಿವಾಸ ಗಾಣಿಗ, ಗುತ್ತಿಗೆದಾರ ಜೆ.ಪಿ. ಶೆಟ್ಟಿ, ಉದ್ಯಮಿ ಸುರೇಶ್ ಬಟ್ಟಿನ್, ಪ್ರಕಾಶ್ ಬಟ್ಟಿನ್, ಶಶಿಧರ್ ಶೆಟ್ಟಿ, ನಾರಾಯಣ ಮೊಗವೀರ, ರಾಮ ಪೂಜಾರಿ, ಸುಬ್ಬಣ್ಣ ಶೆಟ್ಟಿ, ರುಕ್ಕು ಖಾರ್ವಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ವಿಧ್ಯಾರ್ಥಿ ವೇತನ, ರೀಡಿಂಗ್ ಲ್ಯಾಂಪ್, ಅಂಗವಿಕಲರಿಗೆ ಸಹಾಯಧನ, ಸ್ಥಳೀಯ ಶಾಲೆಗಳಿಗೆ ಫ್ಯಾನ್ ವಿತರಣೆ ಹಾಗೂ ಮಾನಸ ಜ್ಯೋತಿ ಅಂಗವಿಕಲರ ಶಾಲೆಗೆ ಪೀಠೋಪಕರಣಗಳನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

