ಉಡುಪಿ

ರಾಜಕೀಯ 'ವೃತ್ತಿ' ಆದರೆ ಪ್ರಾಮಾಣಿಕತೆ ಇರದು: ಹೆಗ್ಡೆ

Published On :

ಉಡುಪಿ: ರಾಜಕೀಯದಲ್ಲಿ ಪ್ರಾಮಾಣಿಕತೆ ಅತಿ ಮುಖ್ಯವಾಗಿದ್ದು, ರಾಜಕೀಯವನ್ನೇ ಒಂದು ವೃತ್ತಿ ಎಂದು ತಿಳಿದವರು ಪ್ರಾಮಾಣಿಕರಾಗಿರುವುದಿಲ್ಲ. ಪ್ರಾಮಾಣಿಕ ರಾಜಕಾರಣಿ ಆಗಿರುವವನು ಜನರ ಅಭಿಪ್ರಾಯ ಪಡೆದುಕೊಂಡು ಅದರಂತೆ ಕೆಲಸ ಮಾಡಬೇಕು ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ, ನೂತನ ಶಾಸಕ ಪ್ರಮೋದ್ ಮಧ್ವರಾಜ್‌ಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರು ಮುಖ್ಯವಾಗಿ ಪ್ರತಿ ಮನೆಗೂ ಮನೆಗೂ ಆರೋಗ್ಯ ವಿಮೆ ಮಾಡಿಕೊಂಡುವಂತಹ ಕಾರ್ಯ ಮಾಡಬೇಕು ಎಂದರು.
ಯೋಜನೆಗಳು ಕಾರ್ಯರೂಪಕ್ಕೆ: ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ. ಮತದಾರರ ಋಣದಲ್ಲಿರುವ ನಾನು ಜನಸೇವೆ ಮಾಡುವುದರ ಮೂಲಕ ಅದನ್ನು ತೀರಿಸುತ್ತೇನೆ. ವೈಯಕ್ತಿಕ ಸೇವೆಯ ಜೊತೆಗೆ ಪ್ರಣಾಳಿಕೆಯಲ್ಲಿ ಆಳವಡಿಸಿದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.
ಸುಪ್ರಿಯಾ ಪ್ರಮೋದ್ ಮಧ್ವರಾಜ್, ಬ್ರಹ್ಮಾವರ ಬ್ಲಾಕ್ ಘಟಕ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಪ್ರಭಾರ ಜಿಲ್ಲಾಧ್ಯಕ್ಷ ಹಿರಣ್ಣಯ್ಯ, ಕಾಂಗ್ರೆಸ್ ಮುಖಂಡರಾದ ಯತೀಶ್ ಕರ್ಕೇರ, ಅಮೃತ್ ಶೆಣೈ, ಲಕ್ಷ್ಮಣ ಶೆಣೈ, ಮೀನಾಕ್ಷಿ ಮಾಧವ, ಪ್ರಕಾಶ್ ಕೊಡವೂರು, ನಾರಾಯಣ, ನರಸಿಂಹ ಮೂರ್ತಿ, ಚಂದ್ರ ಕೊಡವೂರು, ದಿನೇಶ್ ಪುತ್ರನ್, ವಿಜಯ ಹೆಗ್ಡೆ, ರಮೇಶ್ ಪೂಜಾರಿ, ಕೇಶವ ಕೋಟ್ಯಾನ್, ಜಿ.ಪಂ. ಸದಸ್ಯ ದಿವಾಕರ ಕುಂದರ್, ಯಕ್ಷಗಾನದ ದಿಗ್ಗಜ ವಾಸುದೇವ ಕಾಮತ್, ಧರ್ಮಗುರು ವಿಲಿಯಂ ಮಾರ್ಟಿಸ್ ಮತ್ತಿತರರು ಇದ್ದರು.
ಜನಾರ್ದನ್ ಭಂಡಾರ್ಕರ್ ಸ್ವಾಗತಿಸಿದರು. ಎಂ.ಎ. ಗಫೂರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.