ಉಡುಪಿ

ವಡೇರ ಹೋಬಳಿಯಲ್ಲಿ ಜುಗಾರಿ: ನಾಲ್ವರ ಸೆರೆ

Published On :

ಕುಂದಾಪುರ: ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಇಲ್ಲಿನ ವಡೇರಹೋಬಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಆರೋಪಿಗಳಾದ ಅನ್ಸರ್, ಹಬೀಬ, ರಜಾಕ್ ಅಬ್ದುಲ, ಅಬ್ದುಲ್ ರೆಹಮಾನ್ ಇವರುಗಳು ವಡೇರ ಹೋಬಳಿ ಗ್ರಾಮದ ರಾಜು ಎಂಬವರ ಮನೆಯ ಹಿಂಬಾಗ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ಆಟಕ್ಕೆ ಬಳಸಿದ ರು. 970, ಇಸ್ಪೀಟ್ ಎಲೆಗಳು 52, ನೆಲಕ್ಕೆ ಹಾಸಿದ್ದ ಹಳೆ ಪೇಪರ್‌ಗೆಳನ್ನು ವಳಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಲಕ್ಷಾಂತರ ರುಪಾಯಿ ಸಾಲ ಪಡೆದು ವಂಚನೆ: ದೂರು
ಬ್ರಹ್ಮಾವರ: ಚಾಂತಾರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಲಕ್ಷಾಂತರ ರುಪಾಯಿ ಕೈ ಸಾಲ ಪಡೆದು ಹಿಂತಿರುಗಸದೇ ಮೋಸ ಮಾಡಿದ ಘಟನೆ ವರದಿಯಾಗಿದೆ. ಮಾರ್ಕ್ ಡಿ' ಸೋಜ ಮತ್ತು ಆರೋಪಿ ಸೀತಾರಾಮ ಹೆಬ್ಬಾರ್ ಪರಿಚಿತರಾಗಿದ್ದು, ಹೆಬ್ಬಾರ್ ಅವರು ಡಿ'ಸೋಜ ಅವರಿಂದ ಆಗಾಗ್ಗೆ ಕೈ ಸಾಲ ಪಡೆದು ಹಿಂತಿರುಗಿಸುತಿದ್ದರು. ಇತ್ತೀಚೆಗೆ ಹೆಬ್ಬಾರ್ ಒಟ್ಟು ರು. 37 ಲಕ್ಷ ಡಿ'ಸೋಜ ಅವರಿಂದ ಸಾಲವಾಗಿ ಪಡೆದುಕೊಂಡಿದ್ದರು. ಡಿ'ಸೋಜ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಣಂಬೂರು ಬೀಚ್‌ನಲ್ಲಿ ಯುವತಿಯರ ದಾಂದಲೆ !
ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಸಾರಾಯಿ ಕುಡಿದು ದಾಂಧಲೆ ನಡೆಸುತ್ತಿದ್ದ ಇಬ್ಬರು ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾಯನಕೆರೆ ಸಹೋದರಿಯರು ಗುರುವಾರ ಸಂಜೆ ಪ್ರವಾಸಿಗರ ಜತೆ  ಈಜಲು ತೊಡಗಿದ್ದರು. ಅಪಾಯಕಾರಿಯಾಗಿ ವರ್ತಿಸಿದಾಗ ಭದ್ರತೆ ವಿಭಾಗ ಸಿಬ್ಬಂದಿ ಎಚ್ಚರಿಕೆ ನೀಡಿದಾಗ ಸಿ ಬ್ಬಂದಿ ಮೇಲೆಯೇ ಹಲ್ಲೆ ನಡೆಸಲು ಬಂದಿದ್ದಾಳೆ. ತೂರಾಡುತ್ತ ವಿಚಿತ್ರ ವರ್ತನೆ ತೋರಿದಾಗ ಕೆಲವರಿಗೆ ಕಿರಿಕಿರಿ ಉಂಟು ಮಾಡಿತ್ತು. ಸ್ಥಳೀಯರ ದೂರಿನಂತೆ ಎಸ್‌ಐ ಭಾರತಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದರು. ಇಬ್ಬರಿಗೂ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.